ಜೀ ಕನ್ನಡದಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ.ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025’ರ ವಿನ್ನರ್ ಅನೌನ್ಸ್ ಆಗಿದೆ. DKDಯಲ್ಲಿ ವಿಜೇತರಾಗಿ ಅಪ್ಪು ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ ದೀಶಲ್-ಸಿದ್ದೇಗೌಡ (Siddegowda - Diesel ) ಅವರು. ಮೊದಲ ರನ್ನರ್ ಅಪ್ ಹರ್ಷ-ನಂದು ಆದರೆ, ಅನೂಪ್-ಪೂಜಾ ಕೂಡ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಬಹುಮಾನ ಏನು?
ಫಿನಾಲೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30ರವರೆಗೆ ಫಿನಾಲೆ ಜೀ ಕನ್ನಡದಲ್ಲಿ ಪ್ರಸಾರ ಆಗಿದೆ. ಈ ಬಾರಿ ಫಿನಾಲೆಯಲ್ಲಿ ಪೂಜಾ ಮತ್ತು ಅನೂಪ್, ಮೋಹಿತ್ ಮತ್ತು ಅನನ್ಯ, ಸಿದ್ದೇಗೌಡ್ರು ಮತ್ತು ದೀಶಲ್, ಹರ್ಷ ಮತ್ತು ನಂದು, ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್ ಆಗಿದ್ದರು.
ಇದನ್ನೂ ಓದಿ: Salman Khan: ʻಮಾತೃಭೂಮಿʼ ಸಿನಿಮಾಗೆ ರೀ-ಶೂಟ್ ಮಾಡಿದ್ದೇಕೆ?
ವಿಜೇತರು ಟ್ರೋಫಿ ಜೊತೆಗೆ 15 ಲಕ್ಷ ರೂ ಕ್ಯಾಶ್ ಪ್ರೈಸ್, ಫಸ್ಟ್ ರನ್ನರ್ ಅಪ್‌ಗೆ ೮ ಲಕ್ಷ ರೂ ಹಣ ಸಿಕ್ಕಿದೆ. ಅನೂಪ್-ಪೂಜಾ ೫ ಲಕ್ಷ್ ರೂ ಹಣ ಸಿಕ್ಕಿದೆ.
ಒಂದು ವೇದಿಕೆಯಿಂದ ಸ್ಪರ್ಧಿಗಳು ಕೇವಲ ಅವಕಾಶವನ್ನು ಮಾತ್ರ ಪಡೆಯುವುದಿಲ್ಲ. ಅವಕಾಶದ ಜೊತೆ ಹಿರಿಯರ ಮಾರ್ಗದರ್ಶನ ಕೂಡ ಪಡೆಯುತ್ತಾರೆ.
ಡಿಕೆಡಿ ಶೋನ ಸ್ಪರ್ಧಿಗಳಿಗೂ ಜಡ್ಜ್ಗಳಾದ ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವರ ಮಾರ್ಗದರ್ಶನ ಸಿಕ್ಕಿದೆ. ಈ ನಾಲ್ವರು ಸೆಲೆಬ್ರಿಟಿಗಳು ಈ ಬಾರಿಯ ಡಿಕೆಡಿ ಜಡ್ಜ್ಗಳಾಗಿದ್ದರು. ಅನುಶ್ರೀ ಆ್ಯಂಕರಿಂಗ್ ಮಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ. ಈ ಶೋ ಮುಗಿದ ಬಳಿಕ ಹೊಸ ರಿಯಾಲಿಟಿ ಶೋ ಆರಂಭ ಆಗಲಿದೆ.
ದೇಶದ ಹಲವು ಭಾಷೆಗಳಲ್ಲಿ ಸರಿಗಮಪ ಕಾರ್ಯಕ್ರಮ ಮೂಡಿ ಬರುತ್ತಿದ್ದು ದಶಕಗಳಿಗೂ ಹೆಚ್ಚು ಇತಿಹಾಸ ಇದ್ದು ಮತ್ತೊಂದು ವೇದಿಕೆ ಸಿದ್ದವಾಗುತ್ತಿದೆ. ಸದ್ಯ ಮತ್ತೊಂದು ಹೊಸ ಆವೃತ್ತಿಗೆ ಸಜ್ಜಾಗಿದೆ.
ಇದನ್ನೂ ಓದಿ: Bigg Boss: ಸದ್ದಿಲ್ಲದೇ ಎಂಗೇಜ್ ಆದ್ರಾ ಈ ಬಿಗ್ ಬಾಸ್ ಜೋಡಿ?
ಸರಿಗಮಪ ಲಿಟಲ್ ಚಾಂಪ್ಸ್ ಶೀಘ್ರದಲ್ಲೇ ವೀಕ್ಷಕರ ಮನೆ ಮನೆಗೂ ಸಂಗೀತ ಸುಧೆ ಪಸರಿಸಲಿದೆ. ಮಕ್ಕಳು ಇದ್ಮೇಲೆ ಈ ಬಾರಿ ಹಲವು ವಿಶೇಷತೆಗಳಿಂದ ಕಾರ್ಯಕ್ರಮ ಕೂಡಿರಲಿದೆ ಅನ್ನೋದಂತೂ ಪಕ್ಕಾ. ಮೋಜು ಮಸ್ತಿ ಜೊತೆಗೆ ಮಸ್ತ್ ಮಜಾ ಮಾಡೋಕೆ ಮಕ್ಕಳ ಮಹಾ ವೇದಿಕೆ ಸಿದ್ಧವಾಗಿದೆ.