ಕನ್ನಡ ಚಿತ್ರರಂಗದ ಬಹುಬೇಡಿಕೆ ಹೊಂದಿರುವ ನಟರಾಕ್ಷಸ ಖ್ಯಾತಿಯ ನಟ –ನಿರ್ಮಾಪಕ ಡಾಲಿ ಧನಂಜಯ್ (Dolly Dhanjay) ಕೈಯಲ್ಲಿ ಹಲವು ಸಿನಿಮಾಗಳಿದ್ದು, ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 'ಮದರ್ ಪ್ರಾಮಿಸ್: ಫಾದರ್ ಆಫ್ ಆಲ್ ಪ್ರಾಮಿಸಸ್' (Mother Promise) ಅಂತಹ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. 'ಮದರ್ ಪ್ರಾಮೀಸ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧನಂಜಯ್ ಮಗನ (Son) ಫೋಟೋ ಹಂಚಿಕೊಂಡಿದ್ದಾರೆ.
ಪ್ರೀತಿಯಿಂದ ಪ್ರಾರಂಭ
'ಪ್ರತಿಯೊಂದು ಭರವಸೆಯೂ ಪ್ರೀತಿಯಿಂದ ಪ್ರಾರಂಭ' ಎಂದು ಬರೆದು ಮಗನನ್ನು ಎತ್ತಿಕೊಂಡಿರುವ ಫೋಟೊವನ್ನು ಧನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಫೋಟೊದಲ್ಲಿ ಮಗನ ಮುಖ ತೋರಿಸಿಲ್ಲ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. 2025ರ ಫೆಬ್ರವರಿ 16ರಂದು ಡಾಲಿ ಧನಂಜಯ್ ಅವರು ಡಾ. ಧನ್ಯತಾ ಜೊತೆ ಮೈಸೂರಿನಲ್ಲಿ ಹಸೆಮಣೆ ಏರಿದ್ದರು.
ಇದನ್ನೂ ಓದಿ: ಶಿವಣ್ಣ-ಧನಂಜಯ್-ಹೇಮಂತ್ ರಾವ್ ಕಾಂಬಿನೇಷನ್‌ನ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕಾಗಿ ಬೃಹತ್ ಸೆಟ್ ರೆಡಿ
ತಮ್ಮದೇ ತಂಡ ಕಟ್ಟಿಕೊಂಡು, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾ ಬಂದಿರುವ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್, ಏಪ್ರಿಲ್ 10ರಂದು ತನ್ನ ಮೊದಲ ಹಾಡು ಅನಾವರಣಗೊಳಿಸಿತ್ತು. ಆರ್ಸಿಬಿ, 18 ವರ್ಷ, 6255 ದಿನಗಳ ನಂತರ... ಆರ್ಸಿಬಿ, ಆರ್ಸಿಬಿ, ಆರ್ಸಿಬಿ! ಎಂದು ಶುರುವಾದ 'Veni Vidi Vici' ಹಾಡು ಆರ್ಸಿಬಿ ಗೆಲುವನ್ನು ಆಚರಿಸಿತ್ತು. ನಿರೀಕ್ಷೆಯಂತೆ ಗುರುಕಿರಣ್ ಅವರ ಧ್ವನಿಯಲ್ಲಿ ಮೂಡಿಬಂದ ಚಿತ್ರದ ಮೊದಲ ಹಾಡು ಆರ್ಸಿಬಿ ಅಭಿಮಾನಿಗಳ ಹೃದಯ ಗೆದ್ದಿತ್ತು. ನಂತರ ಮೇ 10ರ ಮದರ್ಸ್ ಡೇಯಂದು ಬಿಡುಗಡೆಯಾದ ನೀನೇ ಬೇಕು ಅಮ್ಮ ಶೀರ್ಷಿಕೆಯ ಹಾಡು ಕೂಡಾ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಈ ಓ ಬೆಳಕೆ ಹಾಡು ಕನ್ನಡಿಗರ ಗಮನ ಸೆಳೆಯುತ್ತಿದೆ.
ಬಹುನಿರೀಕ್ಷಿತ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆ ನಾಗಭೂಷಣ್, ವಿನಯಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಬಹುದೊಡ್ಡ ಹೊಸ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Hassan News: ಅಮ್ಮನ ಜತೆ ನಗುತ್ತಾ ಮಾತನಾಡುತ್ತಿದ್ದಾಗಲೇ ಬ್ರೈನ್ ಸ್ಟ್ರೋಕ್; ಹಾಸನದಲ್ಲಿ ಟೆಕ್ಕಿ ಯುವತಿ ಸಾವು
ಈ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮದರ್ ಪ್ರಾಮಿಸ್ ಇದೇ ಜುಲೈ 10ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.