ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಸೋಲ್‌ಮೇಟ್’ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್

‘4N6’ ಚಿತ್ರದ ಮೂಲಕ ಗಮನಸೆಳೆದಿದ್ದ ನಟ ನವೀನ್ ಕುಮಾರ್ ಸ್ವತಃ ನಿರ್ದೇಶಿಸಿ, ನಟಿಸುತ್ತಿರುವ 'ಸೋಲ್‌ಮೇಟ್' ಸಿನಿಮಾದ ಆಕರ್ಷಕ ಪೋಸ್ಟರ್ ಅನ್ನು ನಟ ಡಾ. ಶಿವರಾಜ್‌ಕುಮಾರ್ ಅನಾವರಣಗೊಳಿಸಿದ್ದಾರೆ. 'ಅಭ್ಯುದಯ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ನವೀನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಿರುತೆರೆ ಖ್ಯಾತಿಯ ಶಿಲ್ಪಾ ಹಾಗೂ ಸೌಜನ್ಯ ನಾಯಕಿಯರಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ‘4N6’ ಚಿತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಗಮನಸೆಳೆದಿದ್ದ ನವೀನ್ ಕುಮಾರ್, ಈಗ ತಮ್ಮ ಎರಡನೇ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸ್ವತಃ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

ನವೀನ್ ಕುಮಾರ್ ನಿರ್ದೇಶಿಸಿ ನಟಿಸುತ್ತಿರುವ ಈ ನೂತನ ಚಿತ್ರಕ್ಕೆ 'ಸೋಲ್‌ಮೇಟ್' (Soulmate) ಎಂದು ಹೆಸರಿಡಲಾಗಿದ್ದು, ಚಿತ್ರದ ಆಕರ್ಷಕ ಪೋಸ್ಟರ್ ಅನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಶಿವಣ್ಣ ಅವರಿಂದ ಅನಾವರಣಗೊಂಡ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಪ್ರೇಮಿಗಳ ಗಮನ ಸೆಳೆದಿದೆ.

Shivarajkumar: ಶೀಘ್ರದಲ್ಲೇ ʻಜೈಲರ್‌ 2ʼ ಶೂಟಿಂಗ್‌ಗೆ ಶಿವಣ್ಣ ಹಾಜರ್; ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌ ಕೊಟ್ಟ ʻಹ್ಯಾಟ್ರಿಕ್‌ ಹೀರೋʼ

ಈ ಚಿತ್ರಕ್ಕೆ ಇಬ್ಬರು ನಾಯಕಿಯರು

'ಸೋಲ್‌ಮೇಟ್' ಚಿತ್ರದಲ್ಲಿ ನವೀನ್ ಕುಮಾರ್ ಅವರಿಗೆ ಜೋಡಿಯಾಗಿ ಇಬ್ಬರು ನಾಯಕಿಯರು ಬಣ್ಣ ಹಚ್ಚುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಶಿಲ್ಪಾ ಸವಸರೆ ಹಾಗೂ ಸೌಜನ್ಯ ಎಸ್. ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ರುದ್ವಿ ಎಂಬ ಬಾಲಪ್ರತಿಭೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಬಾಲರಾಜ್ ವಾಡಿ, ಶಿಲ್ಪಶ್ರೀ, ಕರ್ಣ ಸೇರಿದಂತೆ ಹಲವು ಅನುಭವಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

Geetha Shivarajkumar: ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ಗೀತಾ ಶಿವರಾಜ್ ಕುಮಾರ್ ಘೋಷಣೆ

ಅಭ್ಯುದಯ ಪ್ರೊಡಕ್ಷನ್ ಬಂಡವಾಳ

ಈ ಚಿತ್ರವನ್ನು 'ಅಭ್ಯುದಯ ಪ್ರೊಡಕ್ಷನ್' ಸಂಸ್ಥೆಯಡಿ ನವೀನ್ ಗೌಡ ಅವರು ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದ್ದು, ಉತ್ತಮ ತಾಂತ್ರಿಕ ಮೌಲ್ಯಗಳೊಂದಿಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದ್ದಾರೆ. ತಾಂತ್ರಿಕ ವಿಭಾಗದಲ್ಲೂ ಭರವಸೆಯ ತಂಡ ಜೊತೆಯಾಗಿದ್ದು, ಕಾರ್ತಿಕ್ ಮರಳಬಾವಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ವಿಶ್ವಾಸ್ ಕೌಶಿಕ್ ಅವರು 'ಸೋಲ್‌ಮೇಟ್' ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.