ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahesh Babu: ತೆಲುಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬುಗೆ ಇಡಿ ಸಮನ್ಸ್‌; ಏನಿದು ಪ್ರಕರಣ?

ED Summoned Mahesh Babu: ತೆಲುಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿಗೊಳಿಸಿದೆ. ಮೂಲಗಳ ಪ್ರಕಾರ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ವಿರುದ್ಧದ ವಂಚನೆ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲುಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು(ED Summoned Mahesh Babu) ಅವರಿಗೆ ಇಡಿ ಸಮನ್ಸ್‌ ಜಾರಿಗೊಳಿಸಿದೆ. ಮೂಲಗಳ ಪ್ರಕಾರ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಈ ಸಂಸ್ಥೆಯ ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 5.9 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ನಟನಿಗೆ ಪಾವತಿಸಿದ ಹಣವು ಅಕ್ರಮ ಎಂದು ಶಂಕಿಸಲಾಗಿದೆ ಎಂದು ED ಯ ಮೂಲಗಳು ಹೇಳಿದ್ದು, ಇದು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇನ್ನು ಮಹೇಶ್‌ ಬಾಬು ಏಪ್ರಿಲ್ 28 ರಂದು ಇಡಿ ಮುಂದೆ ಹಾಜರಾಗಲಿದ್ದಾರೆ.

ಏನಿದು ಪ್ರಕರಣ?

ಸುರಾನ್ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್​ನಲ್ಲಿ ಸಾಕಷ್ಟು ಅಕ್ರಮಗಳು ನಡೆದಿರೋದು ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಡೀಲಿಂಗ್​ ವೇಳೆ ಭಾರೀ ಅಕ್ರಮ ನಡೆದಿದೆ. ಈ ಎರಡೂ ಕಂಪನಿಗಳ ಪರವಾಗಿ ಮಹೇಶ್‌ ಬಾಬು ತಮ್ಮ ಪತ್ನಿ ಮತ್ತು ಮಕ್ಕಳ ಸಮೇತ ಪ್ರಚಾರ ನಡೆಸಿದ್ದರು. ಇದೀಗ ಕಂಪನಿಗಳು ಎಸಗಿರುವ ಭಾರೀ ಅಕ್ರಮದಲ್ಲಿ ಮಹೇಶ್ ಬಾಬು ಅವರೂ ಶಾಮೀಲಾಗಿದ್ದಾರೆ ಎಂಬ ಅನುಮಾನವನ್ನು ಇಡಿ ಅಧಿಒಕಾರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಲಿದೆ. ಮಹೇಶ್ ಬಾಬು ಅವರು ಇದರ ಪ್ರಚಾರ ಮಾಡಿದ್ದರಿಂದ ಅನೇಕರು ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಮಹೇಶ್‌ ಬಾಬು ನೇರವಾಗಿ ಭಾಗಿಯಾಗದೇ ಇದ್ದರೂ ಅವರು ಜಾಹೀರಾತಿಗಾಗಿ ಪಡೆದ ಹಣದ ಮೂಲ ಅಕ್ರಮವೇ ಎಂಬ ಬಗ್ಗೆ ಇಡಿ ತನಿಖೆಗೆ ಮುಂದಾಗಿದೆ.

ಈ ಸುದ್ದಿಯನ್ನೂ ಓದಿ: Rajamouli: ಮಹೇಶ್‌ ಬಾಬು ನಟನೆಯ SSMB 29 ಚಿತ್ರದ ಶೂಟಿಂಗ್ ವಿಡಿಯೊ ಲೀಕ್; ಸೆಟ್‌ಗೆ ಬಿಗಿ ಭದ್ರತೆ

ವರದಿಗಳು ತಿಳಿಸಿದಂತೆ, ಮಹೇಶ್ ಬಾಬು ಈ ಪ್ರಚಾರಕ್ಕೆ 5.9 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ. ಚೆಕ್ ಮೂಲಕ 3.4 ಕೋಟಿ ರೂಪಾಯಿ ಮತ್ತು ನಗದು ಮೂಲಕ 2.5 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ. ಇದೀಗ, ನಗದು ಪಾವತಿಗಳು ಪರಿಶೀಲನೆಗೆ ಒಳಪಟ್ಟಿವೆ.

ನಟನ ಸಿನಿಮಾ ವಿಚಾರ ಗಮನಿಸೋದಾದ್ರೆ, ಮುಂದಿನ ಬಹುನಿರೀಕ್ಷಿತ ಚಿತ್ರ 'ಎಸ್ಎಸ್ಎಂಬಿ29'.​ ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾಗೆ ಬಾಹುಬಲಿ, ಆರ್​​​ಆರ್​​ಆರ್​ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರು ಆ್ಯಕ್ಷನ್​​ ಕಟ್​​ ಹೇಳುತ್ತಿದ್ದಾರೆ. ಗ್ಲೋಬಲ್​ ಐಕಾನ್ ಪ್ರಿಯಾಂಕಾ ಚೋಪ್ರಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.​ ಇತ್ತಿಚೆಗೆ ಚಿತ್ರದ ಸೆಟ್‌ಗಳ, ಕಲಾವಿದರ ಫೋಟೋಗಳು ವೈರಲ್​ ಆಗಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ, ಆರ್‌ಆರ್‌ಆರ್ ನಿರ್ದೇಶಕರು ಒಡಿಶಾದ ಕೊರಾಪುಟ್​​ನಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ಘೋಷಣೆಗಳು ಆಗಿಲ್ಲ. ಅಭಿಮಾನಿಗಳು, ಸಿನಿಪ್ರಿಯರು ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.