ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajamouli: ಮಹೇಶ್‌ ಬಾಬು ನಟನೆಯ SSMB 29 ಚಿತ್ರದ ಶೂಟಿಂಗ್ ವಿಡಿಯೊ ಲೀಕ್; ಸೆಟ್‌ಗೆ ಬಿಗಿ ಭದ್ರತೆ

Rajamouli: ಇತ್ತೀಚೆಗೆ SSMB29 ಸಿನಿಮಾದ ಶೂಟಿಂಗ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿವೆ. ಒಡಿಶಾದ ಕೋರಾಪುಟ್‌ನಲ್ಲಿ ನಡೆದ ಶೂಟಿಂಗ್ ದೃಶ್ಯ, ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಮಹೇಶ್‌ ಬಾಬು ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಒಟ್ಟಿಗೆ ಕಾಣಿಸಿಕೊಂಡ ದೃಶ್ಯಗಳು ಲೀಕ್‌ ಆಗುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡವು ಕಾನೂನು ಕ್ರಮಕ್ಕೆ ಮುಂದಾಗಿದೆ.

ಕಾನೂನು ಕ್ರಮಕ್ಕೆ  ಮುಂದಾದ ರಾಜಮೌಳಿ SSMB 29 ಚಿತ್ರತಂಡ

SSMB 29

Profile Pushpa Kumari Mar 10, 2025 8:31 PM

ಹೈದರಾಬಾದ್‌" ಸ್ಟಾರ್‌ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ (Rajamouli) ಅವರ ಮುಂಬರುವ ಚಿತ್ರ SSMB 29 ಬಹಳಷ್ಟು ಸುದ್ದಿಯಾಲ್ಲಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಸೌತ್ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮಾಹಿತಿಯನ್ನು ಮೊದಲಿನಿಂದಲೂ ಗೌಪ್ಯವಾಗಿಡಲಾಗಿದೆ. ಆದರೆ ಇತ್ತೀಚೆಗೆ SSMB29 ಸಿನಿಮಾದ ಶೂಟಿಂಗ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್‌ ಆಗಿವೆ. ಒಡಿಶಾದ ಕೋರಾಪುಟ್‌ನಲ್ಲಿ ನಡೆದ ಶೂಟಿಂಗ್ ದೃಶ್ಯ, ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಮಹೇಶ್‌ ಬಾಬು ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಒಟ್ಟಿಗೆ ಕಾಣಿಸಿಕೊಂಡ ದೃಶ್ಯಗಳು ವೈರಲ್‌ ಆಗುತ್ತಿದ್ದಂತೆ ಚಿತ್ರತಂಡವು ಶೂಟಿಂಗ್ ಸೆಟ್ ಬಿಗಿ ಭದ್ರತೆಯ ಜತೆಗೆ ಕಾನೂನು ಕ್ರಮಕ್ಕೂ‌ ಮುಂದಾಗಿದೆ.

SSMB29 ಸಿನಿಮಾದ ಹೀರೋ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಹೈದ್ರಾಬಾದ್ ಏರ್‌ಪೋರ್ಟ್‌ನಲ್ಲಿ ಇರುವ ದೃಶ್ಯ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಈ ಮೂಲಕ ಪೃಥ್ವಿರಾಜ್‌ ಅವರು ಈ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿತ್ತು. ಈ ನಡುವೆ ಸಿನಿಮಾದ ಕೆಲವು ದೃಶ್ಯದ‌ ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತುಕೊಂಡ SSMB29 ಸಿನೆಮಾ ತಂಡ ಈ ಕುರಿತು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರ ಜತೆಗೆ ಸಿನೆಮಾ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಹೆಚ್ಚಿನ ಬಿಗು ಭದ್ರತೆ ಏರ್ಪಡಿಸಲು ಸಹ ನಿರ್ಧಾರ ಕೈಗೊಂಡಿದೆ.

ಒಡಿಶಾದ ಕೋರಾಪುಟ್‌ನಲ್ಲಿ SSMB29 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಆ ಸ್ಥಳಕ್ಕೆ ಹೋದ ಕೆಲವರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಲೀಕ್ ಮಾಡಿದ್ದಾರೆ‌. ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಹೊಸ ಸಿನಿಮಾದ ಶೂಟಿಂಗ್ ದೃಶ್ಯ ಹರಿದಾಡುತ್ತಿದೆ. ಮಹೇಶ್ ಬಾಬು ಅವರನ್ನು ಖ್ಯಾತ ನಿರ್ದೇಶಕ ರಾಜ ಮೌಳಿ ಮತ್ತು SSMB29 ಸಿನೆಮಾ ತಂಡವನ್ನು ಸಹ ಟ್ಯಾಗ್ ಮಾಡಲಾಗಿದೆ. ಈ ಶೂಟಿಂಗ್ ದೃಶ್ಯಗಳು ಗೌಪ್ಯವಾಗಿಡಲು ಚಿತ್ರತಂಡ ನಿರ್ಧರಿಸಿದ್ದು, ಅದಕ್ಕಾಗಿ ಶೂಟಿಂಗ್‌ ಸ್ಥಳದಲ್ಲಿ 3 ಲೇಯರ್‌ನ ಭದ್ರತೆಯೂ ಕಲ್ಪಿಸಲಾಗಿದೆ. ವೈರಲ್‌ ಆದ ದೃಶ್ಯಗಳನ್ನ ನೋಡಿ ಫ್ಯಾನ್ಸ್‌ ಫುಲ್‌ ಎಕ್ಸೈಟ್‌ ಆಗಿದ್ದೆ, ಚಿತ್ರತಂಡ ತಲೆಕೆಡಿಸಿಕೊಂಡಿದೆ.

ಇದನ್ನು ಓದಿ: SSMB 29: ಮಹೇಶ್‌ ಬಾಬು-ರಾಜಮೌಳಿ ಕಾಂಬಿನೇಷನ್‌ ಚಿತ್ರಕ್ಕೆ ಮಾಲಿವುಡ್‌ ಸೂಪರ್‌ ಸ್ಟಾರ್‌ ಎಂಟ್ರಿ

ರಾಜಮೌಳಿ ನಿರ್ದೇಶದ ಈ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದ್ದು, ಕತೆ ಅಡ್ವೇಂಚರ್ ಥ್ರಿಲ್ಲರ್ ಜಾನರ್ ಒಳಗೊಂಡಿದೆ ಎನ್ನಲಾಗಿದೆ. ವಿಶೇಷವಾಗಿ ಈ ಚಿತ್ರದ ದೃಶ್ಯಗಳನ್ನು ಅಮೆಜಾನ್ ಕಾಡುಗಳಲ್ಲಿ ಚಿತ್ರೀಕರಣ ಮಾಡಲಿದ್ದು ಹೊಸ ರೀತಿಯಲ್ಲೇ ಮೂಡಿ ಬರಲಿದೆ ಎನ್ನಲಾಗಿದೆ. ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳದೆ ಇದ್ದರೂ ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದೆ ಎನ್ನುವ ಗುಸುಗುಸು ಕೇಳಿ ಬಂದಿದೆ. ಅರಣ್ಯ ರಕ್ಷಣೆ ಈ ಸಿನೆಮಾದ ಮುಖ್ಯ ವಿಷಯ ಎಂಬ ಮಾಹಿತಿಯೂ ಹೊರಬಿದ್ದಿದೆ.