ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ 'ರಿಷಿ ಡಿಸೈನ್' (Rishi Design) ಸಂಸ್ಥೆಯ ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ (Pallavi lakshmikanth) ಅವರು ನಿಧನರಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಲ್ಲಮ್ಮ (Mallamma), ತಮ್ಮ ಮುಗ್ಧತೆ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಬೋಟಿಕ್‌ನಲ್ಲಿ ಕೆಲಸ ಕೊಟ್ಟು, ಅವರು ಬಿಗ್ ಬಾಸ್ ವೇದಿಕೆ ಏರುವವರೆಗೆ ಪ್ರಮುಖ ಶಕ್ತಿಯಾಗಿ ನಿಂತಿದ್ದ ಪಲ್ಲವಿ ಅವರ ಹಠಾತ್ ಅಗಲಿಕೆ ಕಿರುತೆರೆ ಲೋಕಕ್ಕೆ ತೀವ್ರ ಆಘಾತ ತಂದಿದೆ.
ಬೆಂಗಳೂರಿನಲ್ಲಿ ಆಶ್ರಯ
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ, ತಮ್ಮ ಮುಗ್ಧತೆಯಿಂದ ಇಡೀ ಕರ್ನಾಟಕದ ಜನರ ಮನಗೆದ್ದಿದ್ದ ಮಲ್ಲಮ್ಮ ಅವರ ಈ ಸಾಧನೆಯ ಹಿಂದೆ ಪಲ್ಲವಿ ಅವರ ಪಾತ್ರ ಬಹಳ ದೊಡ್ಡದಿತ್ತು. ಉತ್ತರ ಕರ್ನಾಟಕದಿಂದ ಬಂದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಫ್ಯಾಷನ್ ಬೋಟಿಕ್‌ನಲ್ಲೇ ಕೆಲಸ ನೀಡಿದ್ದರು. ಮಲ್ಲಮ್ಮ ಅವರನ್ನು ಕೇವಲ ಕೆಲಸದಾಕೆಯಂತೆ ನೋಡದೆ, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಸದ್ಯ ಪಲ್ಲವಿ ಅವರ ಸಾವು ಎಲ್ಲರಿಗಿಂತ ಹೆಚ್ಚಾಗಿ ಮಲ್ಲಮ್ಮ ಅವರಿಗೆ ಆಘಾತ ಉಂಟು ಮಾಡಿದೆ.
ಸದ್ಯಕ್ಕೆ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಲ್ಲಮ್ಮ ಅವರನ್ನು ಕೇವಲ ಕೆಲಸದಾಕೆಯಂತೆ ನೋಡದೆ, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಕಿರುತೆರೆ ನಟ ಮನೋಜ್ ಕುಮಾರ್ ಅವರಷ್ಟೇ ಮಲ್ಲಮ್ಮ ಬಿಗ್ ಬಾಸ್ ವೇದಿಕೆಗೆ ಹೋಗಲು ಪಲ್ಲವಿ ಅವರೂ ಪ್ರಮುಖ ಕಾರಣಕರ್ತರಾಗಿದ್ದರು.
ಬಿಗ್ ಬಾಸ್‌ನಿಂದ ಹೊರಬಂದ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಮಲ್ಲಮ್ಮ ತಮ್ಮ ಪಲ್ಲವಿ ಮೇಡಂ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಪಲ್ಲವಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಆಪ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.
ಚಂದನವನದ ಹಲವು ನಟ-ನಟಿಯರು ಮತ್ತು ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಖ್ಯಾತ ಫ್ಯಾಷನ್ ಡಿಸೈನರ್ ಆಗಿದ್ದರು. ರಿಷಿ ಡಿಸೈನ್ ಮೂಲಕ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು.