ಬಿಗ್ಬಾಸ್ 13 (Bigg Boss 13)ಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (Bigg Boss Kannada) ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 (Bigg boss Kannada 13) ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಈಗಾಗಲೇ ರಿವೀಲ್ ಆಗಿದೆ. 'ಅಗ್ನಿ ಪರೀಕ್ಷೆ'ಗೆ ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಎಲ್ಲವೂ ನಡೆದ ಮೇಲೆ ಇಲ್ಲಿ ವೀಕ್ಷಕರ ಮತದ ಆಧಾರದ ಮೇಲೆ ಕೇವಲ ಮೂರು ಮಂದಿಯನ್ನಷ್ಟೇ ಆಯ್ಕೆ ಮಾಡಿ ಬಿಗ್ ಬಾಸ್ ಮನೆಗೆ (Bigg Boss House) ಕಳುಹಿಸಲಾಗುತ್ತದೆ.
ಯಾರು best? ಯಾರು worst? ಮಾತಿನ ಚಕಮಕಿ!
ಹೀಗಾಗಿ ಅಗ್ನಿ ಪರೀಕ್ಷೆ ಕಾದಾಟ ಜೋರಾಗಿಯೇ ನಡೆಯುತ್ತಿದೆ. ಸುಷ್ಮಿತಾ ಹಾಗೂ ದಿಕ್ಷಾ ನಡುವೆ ಪೈಪೋಟಿ ಆಗಿದೆ. ಇಬ್ಬರಲ್ಲಿ ಯಾರು ಬೆಸ್ಟ್ ಅಂತ ಹೇಳಬೇಕು. ಸುಷ್ಮಿತಾ ಬಲವಾದ ಕಾರಣ ನೀಡಿ, ದೀಕ್ಷಾಗೆ ಸ್ಟ್ರೆಂಥ್ ಇಲ್ಲ. ಯೋಚಿಸುವ ತಾಳ್ಮೆ ಇಲ್ಲ ಎಂದು ಟೊಮೋಟೋದಲ್ಲಿ ಬಲವಾಗಿ ಹೊಡೆದಿದ್ದಾರೆ. ಸದ್ಯಕ್ಕಂತೂ ಸ್ಪರ್ಧಿಗಳ ಮಧ್ಯೆ ಜೋರಾಗಿ ಫೈಟ್ ಅಂತೂ ನಡೆಯುತ್ತಿದೆ.
ಇದನ್ನೂ ಓದಿ: Arjun Rampal : ವರ್ಷಗಳ ಪ್ರೀತಿಗೆ ಕೊನೆಗೂ ಸಿಕ್ಕಿತು ಅಧಿಕೃತ ಮುದ್ರೆ; ಮದುವೆ ಆದ ನಟ ಅರ್ಜುನ್ ರಾಂಪಾಲ್
ಈ ಬಾರಿ ವಿಭಿನ್ನ ರೀತಿಯಲ್ಲಿ ವಾಹಿನಿ ಬಿಗ್ ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಪ್ರೋಮೋವನ್ನು ಹಂಚಿಕೊಂಡಿದೆ. ಆ.16ರಿಂದ ಬಿಗ್ ಮನೆಗೆ ಎಂಟ್ರಿ ಕೊಡಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗಾಗಿ ಅಗ್ನಿಪರೀಕ್ಷೆ ನಡೆಯುತ್ತಿದೆ. ಇದೀಗ ಆಯ್ಕೆಯಾದ ಸ್ಪರ್ಧಿಗಳನ್ನು ದೊಡ್ಮನೆಗೆ ಕಳುಹಿಸಲು ವೇದಿಕೆ ಸಜ್ಜಾಗಿದ್ದು,
ಸೆ.6ರಂದು ಸಂಜೆ 7 ಗಂಟೆಗೆ Grand Opening ನಡೆಯಲಿದೆ. ಈ ಬಾರಿ ಕಿಚ್ಚ ಸುದೀಪ್ ವಿಮಾನ ಹತ್ತುವ ಮೂಲಕ ಗ್ರ್ಯಾಂಡ್ ಓಪನಿಂಗ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಪೈಲಟ್ ಆದ ಸುದೀಪ್, ಬಿಗ್ ಬಾಸ್ 13ರ ವಿಮಾನವನ್ನು ಆಗಸಕ್ಕೆ ಕೊಂಡೊಯ್ಯಲಿದ್ದಾರೆ.
ಹೊಸ ಪ್ರೋಮೋ ಇದೀಗ ವೀಕ್ಷಕರಲ್ಲಿ ಮತ್ತಷ್ಟು ಸಂಭ್ರಮವನ್ನು ಹೆಚ್ಚಿಸಿದೆ. ಇನ್ನೂ ಈ ಸೀಸನ್‌ಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ಹೊರಬೀಳಲಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್! ಸರ್ಪ್ರೈಸ್ ಕೊಟ್ಟ ಕಿಚ್ಚ
ಈವರೆಗೆ ವಾಹಿನಿ ಯಾವುದೇ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ. ಸುದೀಪ್ ನಿರೂಪಣೆಯೇ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹಲವು ಸೀಸನ್‌ಗಳಿಂದ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬರುತ್ತಿರುವ ಸುದೀಪ್ ಹೊಸ ಲುಕ್ ಈ ಬಾರಿಯೂ ವಿಶೇಷವಾಗಿರಲಿದೆ ಎನ್ನಲಾಗುತ್ತಿದೆ.