ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬುಡಕಟ್ಟು ಮಹಿಳೆಯಾದ ʻನ್ಯಾಷನಲ್‌ ಕ್ರಶ್‌ʼ; ‘ಮೈಸಾ’ ಟೀಸರ್ ನೋಡಿ ʻರಶ್ಮಿಕಾ 2.0ʼ ಎಂದ ಚಿತ್ರತಂಡ!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲೇ ಚೊಚ್ಚಲ ಬಾರಿಗೆ ಬುಡಕಟ್ಟು ಮಹಿಳೆಯಾಗಿ 'ಮೈಸಾ' ಎಂಬ ಮಹಿಳಾ ಪ್ರಧಾನ ಆಕ್ಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಭಾರಿ ಬಜೆಟ್ ಚಿತ್ರಕ್ಕಾಗಿ ರಶ್ಮಿಕಾ ಯಾವುದೇ ಡ್ಯೂಪ್ ಇಲ್ಲದೆ ಮಾರ್ಷಲ್ ಆರ್ಟ್ಸ್ ಸಾಹಸಗಳನ್ನು ನಿರ್ವಹಿಸಿದ್ದು, ಚಿತ್ರತಂಡ ಇದನ್ನು ‘ರಶ್ಮಿಕಾ 2.0’ ಎಂದು ಕರೆದಿದೆ.

ʻನ್ಯಾಷನಲ್ ಕ್ರಶ್ʼ ರಶ್ಮಿಕಾ ಮಂದಣ್ಣ ಅವರು ತಮ್ಮ ವೃತ್ತಿಜೀವನದಲ್ಲೇ ಇದುವರೆಗೆ ಪ್ರಯತ್ನಿಸದ ಅತ್ಯಂತ ವಿಭಿನ್ನ ಹಾಗೂ ರಗಡ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರು ನಟಿಸುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರಧಾನ ಆಕ್ಷನ್ ಡ್ರಾಮಾ ಚಿತ್ರ 'ಮೈಸಾ' (Mysaa) ದಲ್ಲಿ ಅವರ ರಗಡ್ ಲುಕ್ ಇರಲಿದೆ ಎಂಬುದು ಗೊತ್ತಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಅವರನ್ನು ಓರ್ವ ಗೋಂಡ್ ಬುಡಕಟ್ಟು ಮಹಿಳೆಯಾಗಿ ತೋರಿಸಲಾಗುತ್ತಿದೆ.

‘ರಶ್ಮಿಕಾ 2.0’ ಅವತಾರ

ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಕೇವಲ ಲುಕ್‌ ಅಷ್ಟೇ ಅಲ್ಲ ಬದಲಿಸಿಕೊಂಡಿಲ್ಲ, ಬದಲಿಗೆ ಕಠಿಣ ಸಮರ ಕಲೆಗಳ (ಮಾರ್ಷಲ್ ಆರ್ಟ್ಸ್) ತರಬೇತಿಯನ್ನೂ ಪಡೆದಿದ್ದಾರೆ. ಚಿತ್ರದಲ್ಲಿನ ಹಲವು ಅಪಾಯಕಾರಿ ಸಾಹಸ ದೃಶ್ಯಗಳನ್ನು ಅವರು ಯಾವುದೇ ಡ್ಯೂಪ್ ಇಲ್ಲದೆ ಸ್ವತಃ ನಿರ್ವಹಿಸಿದ್ದಾರೆ. ದಟ್ಟವಾದ ಅರಣ್ಯದ ಹಿನ್ನೆಲೆಯಲ್ಲಿ ನಡೆಯುವ ಚಿತ್ರದ ರೋಮಾಂಚಕ ಆಕ್ಷನ್ ಸನ್ನಿವೇಶಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿವೆ. ಈಗಾಗಲೇ ಚಿತ್ರದ ದೃಶ್ಯಗಳನ್ನು ವೀಕ್ಷಿಸಿರುವ ಆಪ್ತ ವಲಯದವರು ಇದನ್ನು ‘ರಶ್ಮಿಕಾ 2.0’ ಅವರ ಆಗಮನ ಎಂದು ಬಣ್ಣಿಸುತ್ತಿದ್ದಾರೆ.

ಶೀಘ್ರದಲ್ಲೇ ಟೀಸರ್ ಬಿಡುಗಡೆ

ರವೀಂದ್ರ ಪುಲ್ಲೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮೈಸಾ’ ಚಿತ್ರದ ಟೀಸರ್ ಅನ್ನು ಚಿತ್ರತಂಡ ಫೈನಲ್‌ ಮಾಡಿದ್ದು, ಶೀಘ್ರದಲ್ಲೇ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ಟೀಸರ್ ಚಿತ್ರದ ರೋಮಾಂಚಕ ಹಾಗೂ ಕ್ರೂರ ಪ್ರಪಂಚದ ನೋಟವನ್ನು ಸಿನಿಪ್ರಿಯರಿಗೆ ನೀಡಲಿದ್ದು, ರಶ್ಮಿಕಾ ಅವರ ವೃತ್ತಿಜೀವನದ ಅತ್ಯಂತ ವಿಭಿನ್ನವಾದ ಲುಕ್‌ ಅನ್ನು ಈ ಸಿನಿಮಾದ ಮೂಲಕ ಫ್ಯಾನ್ಸ್‌ ನೋಡಬಹುದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 'ಅನ್‌ಫಾರ್ಮುಲಾ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

Rashmika-Vijay Wedding: ಏಕಕಾಲದಲ್ಲಿ ಮದುವೆ ಫೋಟೋ ಪೋಸ್ಟ್‌ ಮಾಡಿದ ʻವಿರೋಷ್‌ʼ; ಸಿಕ್ಕಾಪಟ್ಟೆ ವೈರಲ್‌, ವೀವ್ಸ್, ಲೈಕ್ಸ್ ಎಷ್ಟು?

ಈಚೆಗಷ್ಟೇ ಕಾಕ್‌ಟೇಲ್‌ 2 ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ, ಸದ್ಯ ಪತಿ ವಿಜಯ್‌ ದೇವರಕೊಂಡ ಜೊತೆ ರಣಬಾಲಿ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಜೊತೆಗೆ ಮೈಸಾ ಸಿನಿಮಾಕ್ಕೂ ಶ್ರಮ ಹಾಕುತ್ತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್‌ ಅವರ ರಾಕಾ ಸಿನಿಮಾದಲ್ಲೂ ರಶ್ಮಿಕಾ ಇದ್ದಾರೆ ಎಂಬ ಟಾಕ್‌ ಜೋರಾಗಿ ಕೇಳಿಬಂದಿದೆ. ಮದುವೆ ಬಳಿಕವೂ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.