ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Singer S Janaki: ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!

Singer S Janaki: ಖ್ಯಾತ ಹಿರಿಯ ಗಾಯಕಿ 'ಗಾನಕೋಗಿಲೆ' ಎಸ್. ಜಾನಕಿ (88) ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಜುಲೈ 11) ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆದ ಎಸ್‌ ಜಾನಕಿ ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ, ಬಾಲ್ಯದಿಂದಲೂ ಅವರಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಗಾಯಕಿಯ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳಿವು.

ಎಸ್‌ ಜಾನಕಿ

ದಕ್ಷಿಣ ಭಾರತದ ಚಿತ್ರರಂಗದ ಗಾನ ಕೋಗಿಲೆ ಎಂದೇ ಖ್ಯಾತರಾದ ಎಸ್. ಜಾನಕಿ (S Janaki) ಬಾರದ ಲೋಕಕ್ಕೆ ಹೋಗಿದ್ದಾರೆ. ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ

ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆದ ಎಸ್‌ ಜಾನಕಿ ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ, ಬಾಲ್ಯದಿಂದಲೂ ಅವರಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಇದನ್ನು ಗಮನಿಸಿದ ಗಾಯಕಿಯ ಅವರ ತಂದೆ ಸಂಗೀತ ತರಬೇತಿಗೆ ಕಳುಹಿಸಿದರು. ಜಾನಕಿ ಅವರ ಅಗಾಧ ಸಂಗೀತ ಪ್ರತಿಭೆಯನ್ನು ನೋಡಿದ ಗುರುಗಳು, ಏಳನೇ ವಯಸ್ಸಿನಲ್ಲಿ "ನಿನಗೆ ಸಂಗೀತ ಕಲಿಸುವ ಅಗತ್ಯವಿಲ್ಲ" ಎಂದು ಹೇಳಿ ಹಾಡನ್ನು ಹಾಡಲು ಕಳುಹಿಸಿದರು.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ; ಮೈಸೂರಿನಲ್ಲಿ ನಿಧನ

ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಬಹುಮಾನ ಗೆದ್ದ ಗಾಯಕಿ ಜಾನಕಿ ಅವರು, ನಂತರ ತನ್ನ ಕುಟುಂಬದೊಂದಿಗೆ ಚೆನ್ನೈಗೆ ತೆರಳಿ ಎವಿಎಂ ಸ್ಟುಡಿಯೋಸ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೋರಸ್ ಗಾಯಕಿಯಾಗಿ ಸೇರಿದರು.

'ವಿಟಿಯಿನ್ ವೈಲಟ್ಟು' ಚಿತ್ರದಲ್ಲಿ 'ಪೆನ್ನಸೈ ಪಝನಾಡು ಎನೋ...' ಹಾಡಿನ ಮೂಲಕ ಅವರು ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ಒಂದೇ ವರ್ಷದಲ್ಲಿ ಆರು ಭಾಷಾ ಚಿತ್ರಗಳಲ್ಲಿ 100 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಒಂದೇ ದಿನದಲ್ಲಿ 15 ಕ್ಕೂ ಹೆಚ್ಚು ಹಾಡುಗಳು ರೆಕಾರ್ಡ್‌

ಸಿಂಗಾರ ವೆಲನೆ ದೇವ, ಪುಟ್ಟಮ್ ಪುದು ಕಾಳಿ, ಚಿನ್ನ ಥಾಯ್ ಅವಳ್, ವಟ್ಟು ಎಂತನ್ ಗೀತಂ, ಊರು ಸನಮ್ ತುಂಗಿರುಚು ಮುಂತಾದ ಇಳಯರಾಜ ಕಾಂಬೊದಲ್ಲಿ ಬಿಡುಗಡೆಯಾದ ಅನೇಕ ಚಿತ್ರಗಳು ಇಂದಿಗೂ ಫೇಮಸ್‌ ಆಗಿವೆ.

80 ರ ದಶಕದಲ್ಲಿ ಉತ್ತುಂಗದಲ್ಲಿದ್ದ ಗಾಯಕಿ ಒಂದೇ ದಿನದಲ್ಲಿ 15 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂಬುದು ವಿಶೇಷ. ಹಿಂದಿಯಲ್ಲಿ ಅತಿ ಹೆಚ್ಚು ಚಲನಚಿತ್ರ ಗೀತೆಗಳನ್ನು ಹಾಡಿದ ಮೊದಲ ದಕ್ಷಿಣ ಭಾರತದ ಗಾಯಕಿ ಅವರು.



ಎಸ್. ಜಾನಕಿ ಬಹುಮುಖ ಪ್ರತಿಭೆಯ ಗಾಯಕಿ ಮಾತ್ರವಲ್ಲದೆ ಶ್ರೇಷ್ಠ ನರ್ತಕಿಯೂ ಹೌದು. 4 ರಾಷ್ಟ್ರೀಯ ಪ್ರಶಸ್ತಿಗಳು, 32 ರಾಜ್ಯ ಪ್ರಶಸ್ತಿಗಳು ಮತ್ತು ಕಲೈಮಾಮಣಿ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪತಿಯನ್ನ ಕಳೆದುಕೊಂಡಿದ್ದ ಗಾಯಕಿ

ಎಸ್ ಜಾನಕಿಯವರು ಪ್ರತಿಭಾನ್ವಿತ ಕುಟುಂಬದಿಂದ ಬಂದ ವಿ. ರಾಮಪ್ರಸಾದ್ ಅವರನ್ನು ವಿವಾಹವಾದರು. ದುರದೃಷ್ಟವಶಾತ್, ರಾಮಪ್ರಸಾದ್ 1997 ರಲ್ಲಿ ನಿಧನರಾದರು, ಆ ಬಳಿಕ ಸ್ವ ಇಚ್ಛೆಯಿಂದ ಬಿಳಿ ಸೀರೆಯನ್ನೇ ಧರಿಸಿಲು ಪ್ರಾರಂಭಿಸಿದರು.

ಇದನ್ನೂ ಓದಿ: Legendary singer S Janaki : ಗಾನ ಕೋಗಿಲೆ ಎಸ್.ಜಾನಕಿಯ ಸಂಗೀತ ಲೋಕದ ಪಯಣವಿದು

ಗಾಯಕಿ ಎಸ್ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ಹಠಾತ್ ಹೃದಯಾಘಾತದಿಂದ ಈಗಾಗಲೇ ಮೃತಪಟ್ಟಿದ್ದಾರೆ. ಮುರಳಿ ಕೃಷ್ಣ ಸಿನಿಮಾಗಳ ಬಗ್ಗೆ, ವಿಶೇಷವಾಗಿ ತಮಿಳು ಮತ್ತು ತೆಲುಗು ಚಿತ್ರಗಳ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು. ಭರತನಾಟ್ಯದಲ್ಲಿಯೂ ತರಬೇತಿ ಪಡೆದಿದ್ದರು.

Yashaswi Devadiga

View all posts by this author