ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil Movie: ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಹೇಗೆ ನಗಿಸ್ತಾರೆ ಗೊತ್ತಾ?

Gilli Nata: ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಸಖತ್‌ ಅಬ್ಬರಿಸುತ್ತಿದೆ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ದರ್ಶನ್‌ದ್ದೇ ಹವಾ. ಸದ್ಯ ದರ್ಶನ್‌ ಜೊತೆ ಗಿಲ್ಲಿ ಹೆಸರು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ನಟನೆ ಮಾಡಿದ್ದಾರೆ. ಗಿಲ್ಲಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಇಂದು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ‘ಗಿಲ್ಲಿ’ ಸಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಈ ದೃಶ್ಯ ಈಗ ವೈರಲ್‌ ಆಗ್ತಿದೆ.

ಗಿಲ್ಲಿ ನಟ

ದರ್ಶನ್‌ ನಟನೆಯ ದಿ ಡೆವಿಲ್‌ (The Devil Movie) ಸಿನಿಮಾ ಸಖತ್‌ ಅಬ್ಬರಿಸುತ್ತಿದೆ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ದರ್ಶನ್‌ದ್ದೇ ಹವಾ. ಸದ್ಯ ದರ್ಶನ್‌ ಜೊತೆ ಗಿಲ್ಲಿ (Gilli Nata) ಹೆಸರು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಡೆವಿಲ್‌ (Devil Movie) ಸಿನಿಮಾದಲ್ಲಿ ಗಿಲ್ಲಿ ನಟನೆ ಮಾಡಿದ್ದಾರೆ. ಗಿಲ್ಲಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಇಂದು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ‘ಗಿಲ್ಲಿ’ ಸಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಈ ದೃಶ್ಯ ಈಗ ವೈರಲ್‌ ಆಗ್ತಿದೆ.

ಪಾತ್ರ ಏನು?

ಕಾಮಿಡಿ ಮಾಡೋದ್ರಲ್ಲಿ ಗಿಲ್ಲಿ ನಟ ಎತ್ತಿದ ಕೈ. ಡೆವಿಲ್‌ ಸಿನಿಮಾದಲ್ಲಿಯೂ ಗಿಲ್ಲಿ ಕಾಮಿಡಿ ಪಾತ್ರವನ್ನೇ ನಿಭಾಯಿಸಿದ್ದಾರೆ. ಮುಖ್ಯ ಪಾತ್ರಗಳ ಜೊತೆಗೆ ಅವರ ಪಾತ್ರಕ್ಕೆ ನೇರ ಸಂಬಂಧ ಇಲ್ಲವಾದರೂ ಗಿಲ್ಲಿಯ ಸಣ್ಣ ಕಾಮಿಡಿ ಸಿನಿಮಾದಲ್ಲಿದೆ.

ಇದನ್ನೂ ಓದಿ: BBK 12: ʻಬಿಗ್‌ ಬಾಸ್‌ʼ ಕೊಟ್ಟ ಡೀಲ್‌ನ ಸಕ್ಸಸ್‌ಫುಲ್‌ ಆಗಿ ಮುಗಿಸಿದ ಗಿಲ್ಲಿ ನಟ; ಕ್ಯಾಪ್ಟನ್ಸಿ ರೇಸ್‌ಗೆ ಮಾತಿನ ಮಲ್ಲನ ಡೈರೆಕ್ಟ್‌ ಎಂಟ್ರಿ?

ಕುಡುಕನ ಪಾತ್ರದಲ್ಲಿ ಗಿಲ್ಲಿ ಮಿಂಚಿದ್ದಾರೆ ಎನ್ನಲಾಗಿದೆ. ಗಿಲ್ಲಿ ಮಾತ್ರವಲ್ಲದೆ ಇನ್ನೂ ಕೆಲವು ಹಾಸ್ಯ ಪಾತ್ರಗಳು ಸಿನಿಮಾನಲ್ಲಿವೆ. ನಿರ್ದೇಶಕರು ಆಕ್ಷನ್ ಸಿನಿಮಾ ಆಗಿದ್ದರೂ ಸಹ ಹಾಸ್ಯವನ್ನು ಜೊತೆಗೆ ಸೇರಿಸುವ ಪ್ರಯತ್ನವನ್ನು ನಿರ್ದೇಶಕ ಪ್ರಕಾಶ್ ಮಾಡಿದ್ದಾರೆ.



ಗಿಲ್ಲಿಗೆ ಫ್ಯಾನ್ಸ್‌ ಜೈಕಾರ!

ಡೆವಿಲ್‌ ಸಿನಿಮಾದಲ್ಲಿ ನಟಿಸಿರೋ ಗಿಲ್ಲಿ ದೃಶ್ಯವನ್ನ ಫ್ಯಾನ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಗಿಲ್ಲಿಯ ಲುಕ್‌ಗೂ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈ ಸೀಸನ್‌ ಗಿಲ್ಲಿಯೇ ಗೆಲ್ಲೋದು ಅಂತ ಅಭಿಮಾನಿಗಳು ಕಮೆಂಟ್‌ ಮಾಡ್ತಿದ್ದಾರೆ.

ವೈರಲ್‌ ವಿಡಿಯೋ

ನಿಮಾದಲ್ಲಿ ಗಿಲ್ಲಿ ಏನ್‌ ಮಾಡಿದ್ದಾರೆ ನೋಡಬೇಕು ಎಂಬ ಉತೂಹಲ ಅಭಿಮಾನಿಗಳಲ್ಲಿತ್ತು. ಇಂದು ಸಿನಿಮಾ ರಿಲೀಸ್‌ ಆಗಿದ್ದು, ದೊಡ್ಡ ಪರದೆಯಲ್ಲಿ ಗಿಲ್ಲಿಯನ್ನ ನೋಡಿ ಪ್ರೇಕ್ಷಕರು ಸಿಕ್ಕಾಪಟ್ಟೆ ನಗಾಡಿದ್ದಾರೆ.ಡಿ ಬಾಸ್ ನಂತರ ಗಿಲ್ಲಿಗೆ ಥಿಯೇಟರ್‌ನಲ್ಲಿ ಅತಿ ಹೆಚ್ಚು ಹರ್ಷೋದ್ಗಾರ ಸಿಕ್ಕಿದ್ದು. ಅವನು ಇಡೀ ಥಿಯೇಟರ್‌ ಅನ್ನು ನಗೆಗಡಲಲ್ಲಿ ತೇಲಿಸಿದ ಅಂತ ಕಮೆಂಟ್‌ ಮಾಡಿದ್ದಾರೆ.

ಸಿನಿಮಾದಲ್ಲಿ ದರ್ಶನ್ ಮಿಂಚಿಂಗ್‌!

ಬಹಳ ವರ್ಷಗಳ ನಂತರ ಪೊಲಿಟಿಕಲ್ ಕಂಟೆಟ್ ಇರುವ ಸಿನಿಮಾದಲ್ಲಿ ದರ್ಶನ್ ಮಿಂಚಿದ್ದಾರೆ. ಇದ್ರೆ ನೆಮ್ಮದಿಯಾಗಿರಬೇಕು ಸಾಂಗ್‌ ನೋಡಲು ಚೆಂದ. ರಚನಾ ರೈ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಫ್ಯಾನ್ಸ್‌ಗೆ ಹಬ್ಬದಂತಿದೆ ಈ ಸಿನಿಮಾ ಸೆಕೆಂಡ್ ಹಾಫ್ ನಲ್ಲಿ ಇನ್ನಷ್ಟು ಟ್ವಿಸ್ಟ್ ಗಳು ಇವೆ ಎಂದು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಇದ್ದಾರೆ. ಶರ್ಮಿಳಾ ಮಾಂಡ್ರೆ ಇಂಪಾರ್ಟೆಂಟ್‌ ರೋಲ್‌ ಮಾಡಿದ್ದು, ಮಹೇಶ ಮಾಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ಚಂದು ಗೌಡ, ವಿನಯ್‌ ಗೌಡ, ಗಿಲ್ಲಿ ನಟ, ಗೋವಿಂದೇಗೌಡ, ರೋಜರ್‌ ನಾರಾಯಣ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

Yashaswi Devadiga

View all posts by this author