ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಮ್ಮ ತಂಡದಲ್ಲಿ ದಿಲೀಪ್‌ ರಾಜ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ; ಹಳೆಯ ದಿನಗಳನ್ನು ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ನಿಧನಕ್ಕೆ 'ಗೋಲ್ಡನ್ ಸ್ಟಾರ್' ಗಣೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 2000ನೇ ಇಸವಿಯಲ್ಲಿ ರಂಗಭೂಮಿಯಿಂದ ಒಟ್ಟಿಗೆ ಪಯಣ ಆರಂಭಿಸಿದ್ದ ದಿನಗಳನ್ನು ನೆನೆದ ಗಣೇಶ್, ತಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಗಳಿಸಿದ್ದೇ ದಿಲೀಪ್ ಎಂದು ಭಾವುಕರಾಗಿದ್ದಾರೆ.

ನಟ ದಿಲೀಪ್‌ ರಾಜ್‌ ಅವರು ನಿಧನರಾಗಿದ್ದಾರೆ. ಸಿನಿಮಾರಂಗದಲ್ಲಿ ಅಂದುಕೊಂಡ ಸಕ್ಸಸ್‌ ಸಿಗದೇ ಇದ್ದರೂ, ಧಾರಾವಾಹಿ ನಿರ್ಮಾಣದಲ್ಲಿ ಭರ್ಜರಿ ಗೆಲುವು ಪಡೆದವರು ದಿಲೀಪ್‌ ರಾಜ್.‌ ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ದಿಲೀಪ್‌, ಸದ್ದಿಲ್ಲದೇ ಎದ್ದು ನಡೆದುಬಿಟ್ಟಿದ್ದಾರೆ. ಅಂದಹಾಗೆ, ದಿಲೀಪ್‌ ರಾಜ್‌ ಅವರ ಆರಂಭದ ದಿನಗಳು ಹೇಗಿದ್ದವು ಗೊತ್ತಾ? ಅಂದು ಅವರೊಂದಿಗೆ ಒಟ್ಟೊಟ್ಟಿಗೆ ಆರಂಭಿಸಿದ್ದ ನಟ ಗಣೇಶ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ. "ನಮ್ಮೆಲ್ಲರಿಗಿಂತ ಮುಂಚೆಯೇ ದಿಲೀಪ್‌ ಫೇಮಸ್‌ ಆಗಿದ್ದರು" ಎಂದು ಹೇಳಿಕೊಂಡಿದ್ದಾರೆ.

ಮೊದಲು ಜನಪ್ರಿಯತೆ ಪಡೆದುಕೊಂಡಿದ್ದೇ ದಿಲೀಪ್

"ಮನಸ್ಸು ತುಂಬಾ ಭಾರ ಎನಿಸುತ್ತಿದೆ, ನೋವಾಗುತ್ತಿದೆ. ದಿಲೀಪ್ ರಾಜ್ ಉತ್ತಮ ವ್ಯಕ್ತಿ, ಅದ್ಭುತ ನಟ. ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಿದ್ದರು. 2000ರಲ್ಲಿ ಕಾಲೇಜು ಮುಗಿಸಿ, ನಾವೆಲ್ಲಾ ಜೊತೆಯಲ್ಲಿ ಚಿತ್ರರಂಗಕ್ಕೆ ಬಂದವರು. ನಾವೆಲ್ಲರೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆವು.

ಹಾರ್ಟ್‌ ಚೆಕಪ್‌ ಮಾಡಿಸಿಕೊಳ್ಳೋಕೂ ಮುಂಚೆಯೇ ಇಹಲೋಕ ತ್ಯಜಿಸಿದ ದಿಲೀಪ್‌ ರಾಜ್;‌ ʻಬಾಯ್‌ಫ್ರೆಂಡ್‌ʼ ಬದುಕಲ್ಲಿ ವಿಧಿಯ ಅಟ್ಟಹಾಸ

ಒಟ್ಟಿಗೆ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಪಡೆದುಕೊಂಡಿದ್ದೇ ದಿಲೀಪ್. ಅವರಿಗೆ ಮೊದಲು ಅವಕಾಶಗಳು ಸಿಕ್ಕಿದ್ದು" ಎಂದು ಗಣೇಶ್ ಅವರು ಹೇಳಿದ್ದಾರೆ.

ಸಾವಿನ ಸುದ್ದಿ ಕೇಳಿದಾಗ ನಾವು ಶಾಕ್‌ ಆಯ್ತು

‘ದಿಲೀಪ್ ರಾಜ್‌ ಬೆಳವಣಿಗೆ ಕಂಡು ನಾನು, ದುನಿಯಾ ವಿಜಯ್‌, ಶ್ರೀನಗರ ಕಿಟ್ಟಿ ಎಲ್ಲರೂ ಖುಷಿಪಡುತ್ತಿದ್ದೆವು. ʻಪ್ರೀತಿಗಾಗಿʼ ಎಂಬ ಸೀರಿಯಲ್‌ನಲ್ಲಿ ಕಿಟ್ಟಿ - ದಿಲೀಪ್ ಒಟ್ಟಿಗೆ ನಟನೆ ಮಾಡುತ್ತಿದ್ದರು. ನಾವೆಲ್ಲ ಅದರ ಸೆಟ್​ಗೆ ಹೋಗುತ್ತಿದ್ದೆವು. ದಿಲೀಪ್‌ ತುಂಬಾ ಶ್ರಮಜೀವಿ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಹೀಗೆ ಆಗಿರುವುದು ನೋವು ತಂದಿದೆ. ಸಾವಿನ ಸುದ್ದಿ ಕೇಳಿದಾಗ ನಾವು ಶಾಕ್‌ ಆಯಿತು. ಮೊದಲು ನನಗೆ ನಂಬೋದಕ್ಕೆ ಆಗಲಿಲ್ಲ" ಎಂದು ಗಣೇಶ್‌ ಹೇಳಿದ್ದಾರೆ.

"ದಿಲೀಪ್‌ ಕುಟುಂಬಕ್ಕೆ, ಅವರ ಆಪ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ದಿಲೀಪ್ ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾವೆಲ್ಲಾ ಒಟ್ಟಿಗೆ ಬಂದವರು. ಸಡನ್‌ ಆಗಿ ಹೀಗೆ ಆದಾಗ ಏನು ಹೇಳಬೇಕೋ ಎಂಬುದೇ ಗೊತ್ತಾಗೋದಿಲ್ಲ. ನಾವು ಕೂಡ ಶಾಕ್‌ನಲ್ಲಿದ್ದೇವೆ" ಎಂದು ಗಣೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ದಿಲೀಪ್ ರಾಜ್ ನಿಧನ; ಕಂಬನಿ ಮಿಡಿದ ತಾರೆಯರು



ಆಗ ದಿಲೀಪ್‌ ರಾಜ್‌ ತುಂಬಾ ಬ್ಯುಸಿ ಇದ್ದರು

"ನಾನು ದಿಲೀಪ್‌ನ ಭೇಟಿಯಾದಾಗೆಲ್ಲಾ ಸೀನಿಯರ್‌ ಸೀನಿಯರ್‌ ಅಂತಲೇ ಮಾತನಾಡಿಸುತ್ತಿದ್ದೆ. ನಾವೆಲ್ಲಾ ಚಿತ್ರರಂಗಕ್ಕೆ ಬಂದಾಗ, ಮೆಗಾ ಸೀರಿಯಲ್‌ಗಳು ಆಗತಾನೇ ಶುರುವಾದ ಸಮಯ. ದಿಲೀಪ್‌ ರಾಜ್‌ ತುಂಬಾ ಬ್ಯುಸಿ ಇದ್ದರು. ಯಾವ ಸೀರಿಯಲ್‌ ನೋಡಿದರು, ದಿಲೀಪ್‌ ಅವರೇ ಮೇನ್‌ ಲೀಡ್‌ ಅಂತ ಹೇಳ್ತಿದ್ರು. ಆಗಲೂ ದಿಲೀಪ್‌ ತುಂಬಾ ಹ್ಯಾಪಿ ಮ್ಯಾನ್.‌ ಅವರೊಬ್ಬ ಅದ್ಭುತ ಕಲಾವಿದ. ಎಲ್ಲೋ ಇರಬೇಕಿತ್ತು ಅಂತಲೇ ನನಗೆ ಅನ್ನೀಸೋದು. 15-20 ದಿನಗಳ ಹಿಂದಷ್ಟೇ ಭೇಟಿಯಾಗಿದ್ದೆ" ಎಂದು ಗಣೇಶ್‌ ಅವರು ಹೇಳಿಕೊಂಡಿದ್ದಾರೆ.