ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಮ್ಮು- ಕಾಶ್ಮೀರದ ಸರ್ಕಾರಿ ಶಾಲೆಗೆ 1 ಕೋಟಿ ರೂ. ದೇಣಿಗೆ ನೀಡಿದ್ದ ಅಕ್ಷಯ್‌ ಕುಮಾರ್‌; ಆ ಸ್ಕೂಲ್‌ನಲ್ಲಿ ಏನೆಲ್ಲಾ ಬದಲಾವಣೆ ಆಯ್ತು?

ನಟ ಅಕ್ಷಯ್ ಕುಮಾರ್ ಅವರು 2021ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಡಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಶಾಲಾ ಮಕ್ಕಳ ಶೈಕ್ಷಣಿಕ ಅಗತ್ಯ ಕಂಡು ಭಾವುಕರಾಗಿದ್ದರು. ತಕ್ಷಣವೇ ಅವರು 1 ಕೋಟಿ ರೂ. ದೇಣಿಗೆ ಘೋಷಿಸಿದ್ದರು. ಈಗ ಆ ಶಾಲೆಯಲ್ಲಿ ಹೈಟೆಕ್ ಬದಲಾವಣೆಯಾಗಿದೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ದೇಣಿಗೆ ನೀಡುವುದರಲ್ಲಿ ಎತ್ತಿದ ಕೈ. ಯಾವುದಾದರೂ ರಾಜ್ಯದಲ್ಲಿ ಪ್ರವಾಹ ಬಂದರೆ, ಮತ್ತಿನ್ನಿನ್ನೇನೋ ಸಮಸ್ಯೆಗಳು ಬಂದರೆ, ಮುಂಚೂಣಿಯಲ್ಲಿ ನಿಂತು ದೇಣಿಗೆ ನೀಡಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾರೆ. ಅಂದಹಾಗೆ, 5 ವರ್ಷಗಳ ಹಿಂದೆ ಇದೇ ರೀತಿ ದೇಣಿಗೆ ನೀಡಿದ್ದ ಅಕ್ಷಯ್‌ ಕುಮಾರ್‌ ಅವರು ಜಮ್ಮು ಮತ್ತು ಕಾಶ್ಮೀರದ ಶಾಲೆಯೊಂದರ ಕಾಯಕಲ್ಪಕ್ಕೆ ಸಾಕ್ಷಿಯಾಗಿದ್ದಾರೆ.

ಹೌದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಕಣಿವೆಯ ಅತ್ಯಂತ ದೂರದ ಗಡಿ ಪ್ರದೇಶದಲ್ಲಿರುವ ʻಸರ್ಕಾರಿ ಮಿಡಲ್ ಸ್ಕೂಲ್‌ ಈಗ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. 2021ರಲ್ಲಿ ಅಕ್ಷಯ್ ಕುಮಾರ್ ಅವರು ಈ ಶಾಲೆಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಆ ಹಣವನ್ನು ಶಾಲೆಯ ಹೊಸ ಬ್ಲಾಕ್ ನಿರ್ಮಿಸಲು ಬಳಸಲಾಗಿದ್ದು, ಸ್ಥಳೀಯ ಮಕ್ಕಳಿಗಾಗಿ ಶಾಲೆಯ ಮೂಲಸೌಕರ್ಯವನ್ನು ಗಣನೀಯವಾಗಿ ಸುಧಾರಿಸಲಾಗಿದೆ.

Akshay Kumar: ಅಕ್ಷಯ್‌ ಕುಮಾರ್‌ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಟೀಸರ್‌ ಔಟ್‌!

ಅಕ್ಷಯ್ ತಂದೆಯ ಹೆಸರು

ಈ ಹೊಸ ಕಟ್ಟಡಕ್ಕೆ ಅಕ್ಷಯ್ ಕುಮಾರ್ ಅವರ ತಂದೆಯ ಸವಿನೆನಪಿನಲ್ಲಿ 'ಶ್ರೀ ಹರಿ ಓಮ್ ಭಾಟಿಯಾ ಎಜುಕೇಶನ್ ಬ್ಲಾಕ್' ಎಂದು ಹೆಸರಿಡಲಾಗಿದೆ. ಈ ನೂತನ ಕಟ್ಟಡದಲ್ಲಿ ಈಗ ಸುಸಜ್ಜಿತ ಕ್ಲಾಸ್‌ರೂಮ್ಸ್‌, ಕಂಪ್ಯೂಟರ್ ಪ್ರಯೋಗಾಲಯ (ಲ್ಯಾಬ್), ಗ್ರಂಥಾಲಯ ಮತ್ತು ಶಿಕ್ಷಕರಿಗಾಗಿ ಕಚೇರಿ ಕೊಠಡಿಯನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ, ವಿದ್ಯಾರ್ಥಿಗಳು ಈಗ ಹೆಚ್ಚು ಸ್ವಚ್ಛ ಹಾಗೂ ಸುಧಾರಿತ ವಾತಾವರಣದಲ್ಲಿ ಸರ್ಕಾರದ ಬಿಸಿಯೂಟ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಅಕ್ಷಯ್ ಕುಮಾರ್ ಅಂದು ಕಂಡಿದ್ದೇನು?

ಗಡಿ ಭದ್ರತಾ ಪಡೆಯ (BSF) ಆಹ್ವಾನದ ಮೇರೆಗೆ ಅಕ್ಷಯ್ ಕುಮಾರ್ ಅವರು 2021 ರಲ್ಲಿ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಯೋಧರನ್ನು ಭೇಟಿಯಾಗಲು ಅಲ್ಲಿಗೆ ಭೇಟಿ ನೀಡಿದ್ದರು. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಇರುವ ತುಲೈಲ್ ಗ್ರಾಮಕ್ಕೆ ಭೇಟಿ ನೀಡಿದಾಗ, ಅವರು ಅಲ್ಲಿನ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಆಗ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಕಣ್ಣಾರೆ ಕಂಡು ಬೇಸರಗೊಂಡಿದ್ದ ಅಕ್ಷಯ್ ಕುಮಾರ್, ತಕ್ಷಣವೇ ಶಾಲೆಯ ಅಭಿವೃದ್ಧಿಗಾಗಿ ಅಂದು ಭಾರಿ ಮೊತ್ತದ ದೇಣಿಗೆಯನ್ನು ಘೋಷಣೆ ಮಾಡಿದ್ದರು.‌

Twinkle Khanna: ಮದ್ವೆ ನಂತರ ಬೇರೊಬ್ಬರ ಜೊತೆ ಅಫೇರ್‌; ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಖುಲ್ಲಾಂ ಖುಲ್ಲಾ ಮಾತು!

ಆ ಭೇಟಿಯ ಸಮಯದಲ್ಲಿ ಅಕ್ಷಯ್ ಕುಮಾರ್ ಬಿಎಸ್‌ಎಫ್ ಸಿಬ್ಬಂದಿಯನ್ನು ಭೇಟಿಯಾಗಿ, ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಲ್ಲದೆ, ಯೋಧರ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ದೇಶ ಸೇವೆಗಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಸೈನಿಕರ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದ್ದರು. ಭೇಟಿಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಅವರು, ಗಡಿಯನ್ನು ಕಾಯುತ್ತಿರುವ ಬಿಎಸ್‌ಎಫ್ ಸಿಬ್ಬಂದಿಯೊಂದಿಗೆ ಸಮಯ ಕಳೆದಿದ್ದು ಅತ್ಯಂತ ಸ್ಮರಣೀಯ ಅನುಭವ ಎಂದು ಹೇಳಿಕೊಂಡಿದ್ದರು.