ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gowri Putra Serial: ಏನೇ ಮಾಡೋದಕ್ಕೆ ಹೋದ್ರೂ ಎಡವಟ್ಟಲ್ಲೇ ಕೊನೆಯಾಗ್ತಿದೆ ಕಾರ್ತಿಕ್‌ ಬಾಳು!

Gowri Putra Serial: ಏನೇ ಮಾಡಲು ಹೋದರೂ ಕಾರ್ತಿಕ್‌ (Karthik) ಬದುಕಿನಲ್ಲಿ ಒಂದಲ್ಲ ಒಂದು ಎಡವಟ್ಟು ಎದುರಾಗುತ್ತಿದೆ. ಅತ್ತ ವೇದಾಳನ್ನು ಭೇಟಿಯಾಗಲು ಸಾಧ್ಯವಾಗದೆ ಪರದಾಡುತ್ತಿದ್ದರೆ, ಇತ್ತ ಮದುವೆಯ ನಂತರದ ಮೊದಲ ರಾತ್ರಿಯ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ. ಒಂದು ಕಡೆ ತಾಯಿಯ ಆಸೆ ಈಡೇರಿಸುವ ಜವಾಬ್ದಾರಿ, ಮತ್ತೊಂದೆಡೆ ಹೊಸದಾಗಿ ಆರಂಭವಾಗಿರುವ ಸಂಸಾರದ ಕರ್ತವ್ಯ. ಇವೆರಡರ ನಡುವೆ ಸಿಲುಕಿರುವ ಕಾರ್ತಿಕ್‌ ಮುಂದೇನು ಮಾಡುತ್ತಾನೆ ಎಂಬ ಕುತೂಹಲ ‘ಗೌರಿಪುತ್ರ’ (Gowri Putra) ಧಾರಾವಾಹಿಯ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಗೌರಿ ಪುತ್ರ ಧಾರಾವಾಹಿ

ಏನೇ ಮಾಡಲು ಹೋದರೂ ಕಾರ್ತಿಕ್‌ (Karthik) ಬದುಕಿನಲ್ಲಿ ಒಂದಲ್ಲ ಒಂದು ಎಡವಟ್ಟು ಎದುರಾಗುತ್ತಿದೆ. ಅತ್ತ ವೇದಾಳನ್ನು ಭೇಟಿಯಾಗಲು ಸಾಧ್ಯವಾಗದೆ ಪರದಾಡುತ್ತಿದ್ದರೆ, ಇತ್ತ ಮದುವೆಯ ನಂತರದ ಮೊದಲ ರಾತ್ರಿಯ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ. ಒಂದು ಕಡೆ ತಾಯಿಯ ಆಸೆ ಈಡೇರಿಸುವ ಜವಾಬ್ದಾರಿ, ಮತ್ತೊಂದೆಡೆ ಹೊಸದಾಗಿ ಆರಂಭವಾಗಿರುವ ಸಂಸಾರದ ಕರ್ತವ್ಯ. ಇವೆರಡರ ನಡುವೆ ಸಿಲುಕಿರುವ ಕಾರ್ತಿಕ್‌ ಮುಂದೇನು ಮಾಡುತ್ತಾನೆ ಎಂಬ ಕುತೂಹಲ ‘ಗೌರಿಪುತ್ರ’ (Gowri Putra) ಧಾರಾವಾಹಿಯ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಮದುವೆಯ ವಿಚಾರವಾಗಿ ಸಾಕಷ್ಟು ಗೊಂದಲ ಮತ್ತು ಅನಿರೀಕ್ಷಿತ ತಿರುವುಗಳನ್ನು ಎದುರಿಸಿದ್ದ ಕಾರ್ತಿಕ್‌ ಕೊನೆಗೂ ಕಾವ್ಯಾಳನ್ನು ಮದುವೆಯಾಗಿದ್ದಾನೆ. ಆದರೆ ಮದುವೆಯ ಸಂಭ್ರಮ ಮುಗಿಯುವ ಮುನ್ನವೇ ಆತನ ಬದುಕಿನಲ್ಲಿ ಹೊಸ ಸಮಸ್ಯೆಗಳು ಎದುರಾಗಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಕಾರ್ತಿಕ್‌ಗೆ ಈಗ ಒಂದೊಂದು ಹೆಜ್ಜೆಯೂ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ

ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಹೋಗಿ ಕಾವ್ಯಾಳನ್ನೇ ಮದುವೆಯಾದ ಕಾರ್ತಿಕ್!

ಧಾರಾವಾಹಿಯ ಆರಂಭದಿಂದಲೂ ಕಾರ್ತಿಕ್‌ಗೆ ತಾಯಿ ಗೌರಿಯೇ ಪ್ರಪಂಚ. ತಾಯಿಯ ಆಸೆಗಳನ್ನು ಈಡೇರಿಸುವುದು, ಆಕೆಯ ತವರು ಮನೆಯ ಗೌರವವನ್ನು ಮರಳಿ ತರುವುದು ಮತ್ತು ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವುದು ಆತನ ಮುಖ್ಯ ಗುರಿ. ಇದೇ ಕಾರಣಕ್ಕೆ ಸೋದರಮಾವನ ಮಗಳನ್ನು ಮದುವೆಯಾಗಲು ಕಾರ್ತಿಕ್ ಒಪ್ಪಿಕೊಂಡಿದ್ದ.

ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾದ ಕಾರ್ತಿಕ್ ಅನಿರೀಕ್ಷಿತ ಸನ್ನಿವೇಶದಲ್ಲಿ ಕಾವ್ಯಾಳನ್ನು ಕರೆದುಕೊಂಡು ಬರುವಂತಾಯಿತು. ನಂತರ ನಡೆದ ಘಟನೆಗಳಿಂದಾಗಿ ಕಾವ್ಯಾಳನ್ನೇ ಮದುವೆಯಾಗುವ ಅನಿವಾರ್ಯತೆ ಎದುರಾಯಿತು.

ಇದೀಗ ಕಾರ್ತಿಕ್ ಮತ್ತು ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಕಾವ್ಯಾ ಕಾರ್ತಿಕ್‌ನ ವೈರಿಯ ಮನೆಯ ಮಗಳಾಗಿರುವುದರಿಂದ ಈ ಮದುವೆ ಎರಡೂ ಕುಟುಂಬಗಳ ನಡುವಿನ ಸಂಘರ್ಷಕ್ಕೆ ಹೊಸ ಕಿಡಿ ಹಚ್ಚುವ ಸಾಧ್ಯತೆಯಿದೆ.

ಫಸ್ಟ್‌ನೈಟ್‌ನಲ್ಲೂ ಕಾರ್ತಿಕ್‌ಗೆ ತಪ್ಪದ ಸಂಕಷ್ಟ!

ಮದುವೆಯಾದ ಖುಷಿಯಲ್ಲಿರಬೇಕಿದ್ದ ಕಾರ್ತಿಕ್‌ಗೆ ಈಗ ನೆಮ್ಮದಿಯೇ ಇಲ್ಲದಂತಾಗಿದೆ. ಅತ್ತ ವೇದಾಳನ್ನು ಭೇಟಿಯಾಗಬೇಕೆಂಬ ಪ್ರಯತ್ನ ಕೈಗೂಡುತ್ತಿಲ್ಲ. ಇತ್ತ ಕಾವ್ಯಾಳೊಂದಿಗಿನ ಮೊದಲ ರಾತ್ರಿಯ ಸನ್ನಿವೇಶದಲ್ಲಿ ಸಿಲುಕಿಕೊಂಡಿದ್ದಾನೆ.

ಎಲ್ಲವನ್ನೂ ಸರಿಪಡಿಸಲು ಕಾರ್ತಿಕ್ ಹೇಳುತ್ತಿರುವ ಸುಳ್ಳುಗಳು ಮುಂದೆ ಆತನಿಗೇ ಮುಳುವಾಗುತ್ತವೆಯೇ ಎಂಬ ಪ್ರಶ್ನೆ ಮೂಡಿದೆ. ಒಂದು ಸಮಸ್ಯೆಯನ್ನು ಪರಿಹರಿಸಲು ಹೋದಾಗ ಮತ್ತೊಂದು ಸಮಸ್ಯೆ ಎದುರಾಗುತ್ತಿರುವುದು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.

ಕಾರ್ತಿಕ್ ಮತ್ತು ಕಾವ್ಯಾಳ ಮದುವೆಯ ಬೆನ್ನಲ್ಲೇ ಕಥೆಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಗೌರಿ ಮತ್ತು ಸೂರಪ್ಪ ಮುಖಾಮುಖಿಯಾಗಿದ್ದಾರೆ. ಇವರಿಬ್ಬರ ಭೇಟಿಯಿಂದ ಎರಡೂ ಕುಟುಂಬಗಳ ನಡುವಿನ ಹಳೆಯ ವೈಷಮ್ಯ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.ಈಗಾಗಲೇ ತಾಯಿಯ ಆಸೆ, ಕುಟುಂಬದ ಗೌರವ ಮತ್ತು ಹೊಸ ದಾಂಪತ್ಯದ ಜವಾಬ್ದಾರಿಗಳ ನಡುವೆ ಒದ್ದಾಡುತ್ತಿರುವ ಕಾರ್ತಿಕ್‌ಗೆ ಈ ಬೆಳವಣಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಅಮ್ಮನ ಆಸೆ ಈಡೇರಿಸುತ್ತಾನಾ ಕಾರ್ತಿಕ್?

ಗೌರಿಗೆ ತನ್ನ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವುದರ ಜೊತೆಗೆ ಕೆಲವು ವೈಯಕ್ತಿಕ ಆಸೆಗಳೂ ಇವೆ. ದೇವರ ಮೆರವಣಿಗೆಯ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಎಂಬುದು ಆಕೆಯ ಬಹುದಿನಗಳ ಕನಸು. ತಾಯಿಯ ಈ ಆಸೆಯನ್ನು ಈಡೇರಿಸಬೇಕೆಂಬುದು ಕಾರ್ತಿಕ್‌ನ ಬಯಕೆ.

ಆದರೆ ಈಗ ಕಾವ್ಯಾಳನ್ನು ಮದುವೆಯಾಗಿರುವುದರಿಂದ ಆಕೆಯ ಕುಟುಂಬದ ಶಾಸ್ತ್ರ, ಸಂಪ್ರದಾಯ ಮತ್ತು ದಾಂಪತ್ಯ ಜೀವನದ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾಗಿದೆ. ಒಂದೆಡೆ ಅಮ್ಮನ ಸಂತೋಷ, ಮತ್ತೊಂದೆಡೆ ಹೆಂಡತಿಯೊಂದಿಗಿನ ಹೊಸ ಜೀವನ. ಈ ಎರಡರ ನಡುವೆ ಯಾವುದಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಕಾರ್ತಿಕ್‌ಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: Bigg Boss Kannada 13: ಈಗೇನ್ ಮಾಡುತ್ತೆ ಗುಳ್ಳೆನರಿ? ಕಿರಣ್‌ ಕೊಟ್ಟ ಚಮಕ್‌ಗೆ ಯಶಸ್‌ ವಿಲ ವಿಲ!

ಮುಂದಿನ ಸಂಚಿಕೆಯಲ್ಲಿ ಏನಾಗಲಿದೆ?

ಕಾರ್ತಿಕ್ ಹೇಳುತ್ತಿರುವ ಸುಳ್ಳುಗಳು ಒಂದೊಂದಾಗಿ ಬಯಲಾಗುತ್ತವೆಯೇ? ವೇದಾಳನ್ನು ಭೇಟಿಯಾಗಲು ಆತನಿಗೆ ಅವಕಾಶ ಸಿಗುತ್ತದೆಯೇ? ಕಾವ್ಯಾಳೊಂದಿಗಿನ ಮೊದಲ ರಾತ್ರಿ ಹೇಗೆ ಸಾಗಲಿದೆ? ಗೌರಿ ಮತ್ತು ಸೂರಪ್ಪ ನಡುವಿನ ಹಳೆಯ ವೈಷಮ್ಯ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳಲಿದೆ? ಅಮ್ಮನ ಬಹುದಿನದ ಆಸೆಯನ್ನು ಕಾರ್ತಿಕ್ ಈಡೇರಿಸುತ್ತಾನೆಯೇ?ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ‘ಗೌರಿಪುತ್ರ’ ಧಾರಾವಾಹಿ ಪ್ರತಿದಿನ ಸಂಜೆ 7 ಗಂಟೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Yashaswi Devadiga

View all posts by this author