'ರಾಮಾಚಾರಿ' ಫೇಮ್ ರಿತ್ವಿಕ್ ಕೃಪಾಕರ್ (Rithvik Krupakar ) ಹಾಗೂ ಹಿರಿಯ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಗೌರಿಪುತ್ರ' (Gowriputra) ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಕೌಟುಂಬಿಕ ಧಾರಾವಾಹಿಯ (Kannada Serial) ಪ್ರೋಮೋ ಸದ್ಯ ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
'ಗಟ್ಟಿಮೇಳ' ಖ್ಯಾತಿಯ ನಟಿ ಮಹತಿ ಭಟ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ನಟಿ ಅನು ಪ್ರಭಾಕರ್ ಅವರ ಪ್ರಬುದ್ಧ ನಟನೆ ಈ ಕೌಟುಂಬಿಕ ಕಥೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ನಟ ರಮೇಶ್ ಭಟ್, ಮಹತಿ ಭಟ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಪ್ರೋಮೋದಲ್ಲಿ ತಾಯಿಯ ಜನ್ಮದಿನದ ಅಂಗವಾಗಿ ಆಕೆಗೆ ವಿಭಿನ್ನ ಗಿಫ್ಟ್ ನೀಡುವ ಸನ್ನಿವೇಶ ಮೂಡಿಬಂದಿದೆ. ದುಬಾರಿ ಉಡುಗೊರೆಗಳಿಗಿಂತ ತಾಯಿಗೆ ಆಕೆಯ ‘ತವರು ಮನೆ’ ಅತ್ಯಂತ ಪ್ರಿಯವಾದುದು ಎಂಬುದು ಪ್ರೊಮೋದಲ್ಲಿ ಇದೆ.
ಇದನ್ನೂ ಓದಿ: Bigg Boss Kannada 13: ನಿಮ್ಮದು ಮೊಸಳೆ ಕಣ್ಣೀರೆ! ಮಾತಲ್ಲೇ ಆಸಿಯಾಗೆ ಚಾಟಿ ಏಟು ಕೊಟ್ಟ ಗಾನವಿ
ತಾಯಿಯ ಸ್ವಾಭಿಮಾನ ಹಾಗೂ ಮಗನ ಪ್ರೀತಿಯ ಕಥಾಹಂದರ ಹೊಂದಿರುವ 'ಗೌರಿ ಪುತ್ರ' ಧಾರಾವಾಹಿಯು ಪ್ರಸಾರಕ್ಕೂ ಮುನ್ನವೇ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದರ ಪ್ರಸಾರದ ಸಮಯ ಮತ್ತು ದಿನಾಂಕವನ್ನು ವಾಹಿನಿಯು ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
ಇದನ್ನೂ ಓದಿ: Bigg Boss Kannada 13: ನಿಮ್ಮದು ಮೊಸಳೆ ಕಣ್ಣೀರೆ! ಮಾತಲ್ಲೇ ಆಸಿಯಾಗೆ ಚಾಟಿ ಏಟು ಕೊಟ್ಟ ಗಾನವಿ
ಅನು ಪ್ರಭಾಕರ್ ಅವರ ಅಭಿನಯ ಹಾಗೂ ರಿತ್ವಿಕ್ ಅವರ ಲುಕ್ ಧಾರಾವಾಹಿಯ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.