ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಬಾಯ್ಸ್ ನೆವರ್ ಕಾಂಪ್ರಮೈಸ್' ಟ್ರೇಲರ್‌ ರಿಲೀಸ್: ಇದು ಜಾಲಿ ಟ್ರಿಪ್‌ ಹೊರಟ ಹುಡುಗರ ಗ್ಯಾಂಗ್‌ನ ಹಾರರ್‌ ಕಾಮಿಡಿ ಕಥೆ!

'ಜಸ್ಟ್ ಮದ್ವೇಲಿ' ಖ್ಯಾತಿಯ ಹರೀಶ್ ಜಲಗೆರೆ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ 'ಬಾಯ್ಸ್ ನೆವರ್ ಕಾಂಪ್ರಮೈಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಈ ಹಾರರ್ ಕಾಮಿಡಿ ಕಥೆಯಲ್ಲಿ ಹತ್ತು ಜನ ಯುವಕರು ಜಾಲಿಯಾಗಿ ಪ್ರವಾಸ ಹೊರಟಾಗ ಎದುರಾಗುವ ದೆವ್ವದ ಅವಾಂತರಗಳನ್ನು ತೋರಿಸಲಾಗಿದೆಯಂತೆ.

'ಜಸ್ಟ್ ಮದ್ವೇಲಿ', 'ರಾಜಣ್ಣನ ಮಗ' ಚಿತ್ರಗಳ ಮೂಲಕ ಪರಿಚಿತರಾಗಿರುವ ನಿರ್ಮಾಪಕ ಹರೀಶ್ ಜಲಗೆರೆ ಅವರು ಪ್ರಥಮಬಾರಿಗೆ ನಿರ್ದೇಶನ ಮಾಡಿರುವ 'ಬಾಯ್ಸ್ ನೆವರ್ ಕಾಂಪ್ರಮೈಸ್' ಚಿತ್ರ ಜುಲೈ 10ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಮಾರಿ ಗೋಲ್ಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಉಜ್ವಲ ನಾಗರಾಜ ಜಗದಾಳೆ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಕೋಲಾರ ಸೀನು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ನೈಜ ಘಟನೆಯ ಆಧಾರಿತ ಹಾರರ್ ಕಾಮಿಡಿ ಕಥೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಹರೀಶ್ ಜಲಗೆರೆ, "ಇದು ನನ್ನ ಸ್ನೇಹಿತರ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಕಥೆಯಾಗಿದೆ. ಹಾರರ್ ಕಾಮಿಡಿ ಜೊತೆಗೆ ಚಿತ್ರದಲ್ಲಿ ಒಂದು ಉತ್ತಮ ಸಂದೇಶವೂ ಇದೆ. ಎಲ್ಲಾ ಟೆನ್ಷನ್ ಮರೆತು ಜಾಲಿಯಾಗಿ ಟ್ರಿಪ್ ಹೊರಡುವ 10 ಜನ ಹುಡುಗರ ಹಾದಿಯಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ, ಈ ಜರ್ನಿಯಲ್ಲಿ ಹಾರರ್ ಹೇಗೆ ಎಂಟ್ರಿ ಕೊಡುತ್ತದೆ ಮತ್ತು ತರ್ಲೆ ಮಾಡಲು ಹೋಗಿ ಅವರು ದೆವ್ವದ ಜೊತೆ ಹೇಗೆ ಕನೆಕ್ಟ್ ಆಗುತ್ತಾರೆ ಎಂಬುದನ್ನು ಸಿನಿಮ್ಯಾಟಿಕ್ ಮಸಾಲೆಯೊಂದಿಗೆ ರೋಚಕವಾಗಿ ಹೇಳಲಾಗಿದೆ" ಎಂದರು. ಈಗಾಗಲೇ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜುಲೈ 10ರಂದು ರಾಜ್ಯಾದ್ಯಂತ 80 ರಿಂದ 90 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ʻಮಂಜುಮ್ಮೆಲ್‌ ಬಾಯ್ಸ್‌ʼ ಡೈರೆಕ್ಟರ್‌ ಚಿದಂಬರಂ ವಿರುದ್ಧ FIR; ನಟಿಯಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪ!

ಸಹನಿರ್ದೇಶಕ ಕೋಲಾರ ಸೀನು ಮಾತನಾಡಿ, "ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು ಪ್ರೇಕ್ಷಕರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ" ಎಂದರು. ಸಂಗೀತ ನಿರ್ದೇಶಕ ಲೋಕಿ ತವಸ್ಯ ಮಾತನಾಡಿ, "ಇದು ಯೂತ್ಸ್‌ಗೆ ತುಂಬಾ ಕನೆಕ್ಟ್ ಆಗುವ ಸಿನಿಮಾ ಆಗಿದ್ದು, ಈ ವರ್ಷದ ಬೆಸ್ಟ್ ಸಿನಿಮಾ ಆಗುವ ಭರವಸೆ ಇದೆ" ಎಂದರು.

ಚಿತ್ರದ ನಾಯಕಿ ನಕ್ಷತ್ರ ಮಾತನಾಡಿ, "ನಾನು ಇದರಲ್ಲಿ 'ಸುಬ್ಬಲಕ್ಷ್ಮಿ' ಎನ್ನುವ ಡೇರ್ ಗರ್ಲ್ ಪಾತ್ರ ಮಾಡಿದ್ದೇನೆ. ಕಾಮಿಡಿ ಜೊತೆಗೆ ಹಾರರ್ ಟಚ್ ಇರುವ ಈ ಚಿತ್ರಕ್ಕಾಗಿ ನಾವೆಲ್ಲಾ ಸಾಕಷ್ಟು ಶ್ರಮವಹಿಸಿದ್ದೇವೆ" ಎಂದು ಹಂಚಿಕೊಂಡರು. ನಟ ರಾಜೀವ್ ರೆಡ್ಡಿ ತಾವು ಅಸಿಸ್ಟೆಂಟ್ ಕಮೀಷನರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ಈ ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಮುಖಗಳು ಬಣ್ಣ ಹಚ್ಚಿದ್ದಾರೆ.

ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ ಹಾಗೂ ಕಾರ್ತೀಕ್ ಈಶ್ವರಚಾರಿ ಅವರ ಸಂಕಲನವಿದೆ. ವಿಶೇಷವೆಂದರೆ, ಖ್ಯಾತ ಗಾಯಕರಾದ ಚಂದನ್ ಶೆಟ್ಟಿ, ಆಂಟನಿದಾಸನ್ ಮತ್ತು ಐಶ್ವರ್ಯ ರಂಗರಾಜನ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.