ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harshika Poonacha: ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ ಪೂಣಚ್ಚ

Harshika Poonacha: 'ನಮ್ಮ ಚೋಟು ಕೃಷ್ಣ' (Chotu Krishna) ಅಂತಲೂ ಈ ಜೋಡಿ ಹೇಳಿದೆ. ಮಗುವಿನ ಮುಂಗೈ ಫೋಟೋ ಕೂಡ ಹಂಚಿಕೊಂಡಿದೆ. ಭುವನ್-ಹರ್ಷಿಕಾ ಬಾಳಿಗೆ ಪುಟ್ಟ ಕನ್ಹನ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ಸಡಗರ ಮನೆಮಾಡಿದೆ. ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಂಗೈ ಮಾತ್ರ ಕಾಣಿಸುತ್ತಿದೆ.

ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಭುವನ್‌ ಪೊನ್ನಣ್ಣ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 'ನಮ್ಮ ಚೋಟು ಕೃಷ್ಣ' (Chotu Krishna) ಅಂತಲೂ ಈ ಜೋಡಿ ಹೇಳಿದೆ. ಮಗುವಿನ ಮುಂಗೈ ಫೋಟೋ ಕೂಡ ಹಂಚಿಕೊಂಡಿದೆ. ಭುವನ್-ಹರ್ಷಿಕಾ ಬಾಳಿಗೆ ಪುಟ್ಟ ಕನ್ಹನ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ಸಡಗರ ಮನೆಮಾಡಿದೆ.

ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಂಗೈ ಮಾತ್ರ ಕಾಣಿಸುತ್ತಿದೆ.

ಇದರೊಟ್ಟಿಗೆ "ನಮ್ಮ ಚೋಟು ಕೃಷ್ಣ ಬಂದ" ಅಂತಲೂ ಹೇಳಿಕೊಂಡಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್‌ ‘ರಾಕಾ’ ಈ ಡೇಟ್‌ಗೆ ರಿಲೀಸ್‌!

ಪ್ರಾರ್ಥನೆಗಳಿಗೆ ಉತ್ತರ

"ನಮ್ಮ ಕನ್ಹ (ಕೃಷ್ಣ) ತನ್ನದೇ ಜನ್ಮದಿನದಂದು ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡಿದ್ದಾನೆ. ಈ ಪವಿತ್ರವಾದ ಕೃಷ್ಣ ಜನ್ಮಾಷ್ಟಮಿಯಂದು ನಮ್ಮ ಮುದ್ದಾದ ಗಂಡು ಮಗುವನ್ನ ಜಗತ್ತಿಗೆ ಸ್ವಾಗತಿಸುತ್ತಿದ್ದಂತೆ ನಮ್ಮ ಕೈಗಳು ಹಾಗೂ ಹೃದಯಗಳು ಪ್ರೀತಿಯಿಂದ ತುಂಬಿ ತುಳುಕುತ್ತಿವೆ. ನಮಗಾಗಿ ಪ್ರಾರ್ಥಿಸಿದ ಮತ್ತು ಶುಭ ಹಾರೈಸಿದ ಪ್ರತಿಯೊಬ್ರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ. ಈಗ ಸಂಭ್ರಮಿಸುವ ಸಮಯ” ಎಂದು ಪೋಸ್ಟ್‌ ಮಾಡಿಕೊಂಡಿದ್ದಾರೆ.



ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರಿಗೆ ಮೊದಲು ಹೆಣ್ಣು ಮಗು ಹುಟ್ಟಿದೆ. ಈ ಮಗುವಿಗೆ ತ್ರಿದೇವೀ ಪೊನ್ನಕ್ಕ ಅಂತಲೆ ಹೆಸರಿಟ್ಟಿದ್ದಾರೆ.

ಈ ಮಗು ಆದ್ಮೇಲೆ ಇದೀಗ ಎರಡನೇ ಮಗುವಿಗೆ ಹರ್ಷಿಕಾ ಪೂಣಚ್ಚ ಜನ್ಮ ನೀಡಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದೇ ಮಗು ಜನಿಸಿರುವುದು ಅವರ ಖುಷಿಯನ್ನ ಮತ್ತಷ್ಟು ಹೆಚ್ಚಿಸಿದೆ. ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ , ವಾತ್ಯಲ್ಯ ಥೀಮ್‌ನಡಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದರು

Yashaswi Devadiga

View all posts by this author