ಮುಂಬೈ, ಜ. 21: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಬಿಡುಗಡೆ ಆಗಿ ಈಗಾಗಾಲೇ ದಾಖಲೆಯ ವೀವ್ಸ್ ಪಡೆದುಕೊಂಡಿದೆ. ಚಿತ್ರದ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' (Dhurandhar 2) ಹಾಗೂ 'ಟಾಕ್ಸಿಕ್' ಸಿನಿಮಾಗಳು ಒಂದೇ ದಿನ ಅಂದರೆ ಮಾರ್ಚ್ 19ರಂದು ಬಿಡುಗಡೆಯಾಗಲಿವೆ. ಹೀಗಾಗಿ ಒಂದು ಚಿತ್ರದ ದಿನಾಂಕ ಮುಂದೂಡಲ್ಪಡಬಹುದು ಎಂಬ ವದಂತಿ ಇದ್ದರೂ ಇನ್ನೂ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಇದರ ಬೆನ್ನಲ್ಲೇ 'ಧುರಂಧರ್ 2' ಬಿಡುಗಡೆ ದಿನಾಂಕ ಬದಲಾಗಿದೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಈ ಸುದ್ದಿ ನಿಜವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.
ʼಧುರಂಧರ್ ಪಾರ್ಟ್ 1ʼ ಚಿತ್ರದ ಕೊನೆಯಲ್ಲಿ "ರಿವೆಂಜ್ 19 ಮಾರ್ಚ್ 2026" ಎಂದು ಬರೆಯುವ ಮೂಲಕ ಪಾರ್ಟ್ 2 ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಆದರೆ ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಈ ಡೇಟ್ ಅನ್ನು ಎಡಿಟ್ ಮಾಡಿ ಮಾರ್ಚ್ 26 ಅಥವಾ ಆಗಸ್ಟ್ 15 ಎಂದು ಬದಲಾವಣೆ ಮಾಡಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಆದಾಗ್ಯೂ ಇದೀಗ ವೈರಲ್ ಆಗುತ್ತಿರುವ ಬಿಡುಗಡೆ ದಿನಾಂಕದ ಪೋಸ್ಟರ್‌ಗಳು ಎಐ ಅಥವಾ ಫೋಟೊಶಾಪ್ ಮಾಡಿದ ಚಿತ್ರಗಳು ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಮೂಲಕ ಇದು ನಕಲಿ ಪೋಸ್ಟ್‌ಗಳಾಗಿದ್ದು, ಚಿತ್ರದ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
7 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್
ʼಧುರಂಧರ್ 2ʼ ಚಿತ್ರದ ಟೀಸರ್ ಜನವರಿ 23ರಂದು ಬಿಡುಗಡೆಯಾಗಲಿದ್ದು, ಅದೇ ದಿನ ʼಬಾರ್ಡರ್ 2ʼ ಟೀಸರ್ ಕೂಡ ರಿಲೀಸ್ ಆಗಲಿದೆ. ಸದ್ಯ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆಯಾಗಿದ್ದು ಎಲ್ಲ ಊಹಾಪೋಹಗಳಿಗೆ ಈಗ ತೆರೆಬಿದ್ದಿದೆ. ಈ ಚಿತ್ರವು ಮಾರ್ಚ್ 19ರಂದೇ ವಿಶ್ವದಾದ್ಯಂತ ತೆರೆಗೆ ಬರುವುದು ಕನ್ಫರ್ಮ್ ಆಗಿದೆ. ಒಟ್ಟಿನಲ್ಲಿ ಮಾರ್ಚ್ 19ರಂದು ಯಶ್ ಅವರ 'ಟಾಕ್ಸಿಕ್' ಮತ್ತು ರಣವೀರ್ ಸಿಂಗ್ ಅವರ 'ಧುರಂಧರ್ 2' ನಡುವೆ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾದಂತಾಗಿದೆ.