ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HIT The Third Case: ಹಿಟ್‌ ಲಿಸ್ಟ್‌ಗೆ ಸೇರ್ತಾ ನಾನಿ-ಶ್ರೀನಿಧಿ ಶೆಟ್ಟಿ ಜೋಡಿಯ ʼಹಿಟ್ 3ʼ? ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟಾಯ್ತು?

ತೆಲುಗು ನಟ ನಾನಿಯ ಹೊಸ ಚಿತ್ರ‌ 'ಹಿಟ್‌ 3' ಮೇ 1ರಂದು ಬಿಡುಗಡೆಯಾಗಿ ಭರ್ಜರಿ ಗಳಿಕೆ ಕಾಣುತ್ತಿದೆ. ಸ್ಯಾಂಡಲ್‌ವುಡ್‌ನ ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀನಿಧಿ ಶೆಟ್ಟಿ ಈ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗುವ ಮೂಲಕ ಟಾಲಿವುಡ್‌ಗೆ ಕಾಲಿಟ್ಟದ್ದಾರೆ. ಇದೀಗ ಇವರಿಬ್ಬರ ಕಾಂಬಿನೇಷನ್‌ಗೆ ಪ್ರೇಕ್ಷಕರು ಸೈ ಎಂದಿದ್ದಾರೆ.

HIT The Third Case box office collection

ಹೈದರಾಬಾದ್‌: ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಮತ್ತು ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ ಅಭಿನಯದ  ಬಹುನಿರೀಕ್ಷಿತ ಚಿತ್ರ ʼಹಿಟ್: ದಿ ಥರ್ಡ್ ಕೇಸ್ʼ (HIT The Third) ಮೇ 1ರಂದು ಬಿಡುಗಡೆಯಾಗಿದೆ. ನಾನಿ ನಟನೆಯ ಸಿನಿಮಾಗಳಲ್ಲಿ ಅತ್ಯುತ್ತಮ ಆರಂಭ ಪಡೆದ ಚಿತ್ರ ಇದಾಗಿದೆ. ಶೈಲೇಶ್ ಕೊಲನು ನಿರ್ದೇಶನ ಮತ್ತು ವಾಲ್ ಪೋಸ್ಟರ್ ಸಿನಿಮಾ ಮತ್ತು ಯುನಾನಿಮಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ನಾನಿ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಆ್ಯ ಕ್ಷನ್ ಥ್ರಿಲ್ಲರ್‌ನಲ್ಲಿ ಸೂರ್ಯ ಶ್ರೀನಿವಾಸ್, ರಾವ್ ರಮೇಶ್, ನೆಪೋಲಿಯನ್, ಕೊಮಲೀ ಪ್ರಸಾದ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುವತ್ತ ದಾಪುಗಾಲು ಇಟ್ಟಿದೆ.

ಇದೇ ಮೊದಲ ಬಾರಿಗೆ ನಾನಿ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ದೇಶಾದ್ಯಂತ ನಡೆಯುವ ಸರಣಿ ಕೊಲೆಗಳನ್ನು ಎಸ್‌ಪಿ ಅರ್ಜುನ್ ಸರ್ಕಾರ್ (ನಾನಿ) ಹೇಗೆ ಭೇದಿಸುತ್ತಾನೆ ಎನ್ನುವುದು ಕಥೆಯ ತಿರುಳು. ಈ ಹತ್ಯೆಗಳ ಹಿಂದಿನ ರಹಸ್ಯವು‌ ಸರಣಿ ಕೊಲೆಗಾರನ ಪಾತ್ರಕ್ಕಿಂತ ಹೆಚ್ಚು ಭಯಾನಕವಾಗಿದ್ದು ಕುತೂಹಲ‌ ಕೆರಳಿಸುವಂತಿದೆ. ಶ್ರೀನಿಧಿ ಶೆಟ್ಟಿ ಈ ಸಿನಿಮಾದಲ್ಲಿ ಮೃದುಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ದಿನವಾದ ಮೇ 1ರಂದು 'ಹಿಟ್‌ 3ʼ ಭರ್ಜರಿ ಗಳಿಕೆ ಮಾಡಿದೆ.‌ ತಮಿಳಿನ 'ರೆಟ್ರೋ' ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಈ ಚಿತ್ರಕ್ಕೆ ಪೈಪೋಟಿ ಕೊಟ್ಟಿದೆ. ವರದಿ ಪ್ರಕಾರ ನಾನಿ ʼಹಿಟ್ʼ ಮೊದಲ ದಿನ 21 ಕೋಟಿ ರೂ. ಗಳಿಕೆ ಮಾಡಿದೆ. ತೆಲುಗಿನಿಂದ ‌20.25 ಕೋಟಿ ರೂ., ತಮಿಳಿನಿಂದ 0.35 ಕೋಟಿ ರೂ., ಕನ್ನಡದಿಂದ ರೂ 0.05 ಕೋಟಿ ರೂ., ಹಿಂದಿಯಿಂದ ರೂ 0.25 ಕೋಟಿ ರೂ. ಮತ್ತು ಮಲಯಾಳಂನಿಂದ ರೂ 0.1 ಕೋಟಿ ರೂ. ಹರಿದು ಬಂದಿದೆ. 2ನೇ ದಿನದಂದು‌ 10.5 ಕೋಟಿ ರೂ. ಗಳಿಸಿದೆ. 3ನೇ ದಿನ 8.57 ಕೋಟಿ ರೂ. ಗಳಿಸಿದೆ. ಆ ಮೂಲಕ 3 ದಿನಗಳಲ್ಲಿ ಒಟ್ಟು 40.07 ಕೋಟಿ ರೂ. ಬಾಚಿಕೊಂಡಿದೆ.

ಇದನ್ನು ಓದಿ: Maadeva Movie: ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ʼಮಾದೇವʼ ಚಿತ್ರ ಮೇ‌ 30ರಂದು ತೆರೆಗೆ

ನಾನಿ ನಟನೆಯ ಸಿನಿಮಾಗಳಲ್ಲಿ ಅತ್ಯುತ್ತಮ ಆರಂಭ ಪಡೆದ ಸಿನಿಮಾ ಇದಾಗಿದೆ. 2023ರಲ್ಲಿ ಬಿಡುಗಡೆಯಾದ 'ದಸರಾ' ಸಿನಿಮಾವು ಮೊದಲ ದಿನ 23.2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ʼಹಿಟ್‌ 3ʼ ಸಿನಿಮಾ ಕೂಡ ಇದೇ ಹಾದಿಯಲ್ಲಿದೆ.‌ ʼಹಿಟ್‌ 3ʼ ಸಿನಿಮಾದ ಮೊದಲ ದಿನದ ಗಳಿಕೆಯಿಂದ ನಾನಿ ಖುಷಿಗೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ʼʼಇದು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತಹ ಕ್ಷಣ" ಎಂದು ನಾನಿ ಬರೆದುಕೊಂಡಿದ್ದಾರೆ.