ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dileep Raj: ಒಂದು ಧಾರಾವಾಹಿ, ಇಬ್ಬರು ಕಲಾವಿದರು, 1 ವರ್ಷದ ಅವಧಿಯಲ್ಲಿ ಹೃದಯಾಘಾತದಿಂದ ಅಕಾಲಿಕ ‌ಸಾವು! ಛೇ.. ಇದು ಕಾಕತಾಳೀಯವೋ? ವಿಧಿಯಾಟವೋ?

ಕನ್ನಡದ ಜನಪ್ರಿಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಪರ್ಯಾಸವೆಂದರೆ, ಕಳೆದ ವರ್ಷ ಮೇ 12 ರಂದು ಇದೇ ಧಾರಾವಾಹಿಯ ನಟ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.

ʻಹಿಟ್ಲರ್‌ ಕಲ್ಯಾಣʼ ಧಾರಾವಾಹಿ ನಟ, ನಿರ್ಮಾಪಕ ದಿಲೀಪ್‌ ರಾಜ್‌ ಅವರ ಅಕಾಲಿಕ ಸಾವು ಬರಸಿಡಿಲಿನಂತೆ ಅಪ್ಪಳಿಸಿದೆ. ಇಂದು (ಮೇ 13) ಮುಂಜಾನೆ ತೀವ್ರ ಹೃದಯಾಘಾತದಿಂದ ದಿಲೀಪ್‌ ರಾಜ್‌ ಸಾವನ್ನಪ್ಪಿದ್ದಾರೆ. ಕಳೆದ 25 ವರ್ಷಗಳಿಂದ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ದಿಲೀಪ್‌ ರಾಜ್‌, ಇಂದು ತಮ್ಮ ಇಹಲೋಕ ತ್ಯಜಿಸಿದ್ದಾರೆ. ಅಂದಹಾಗೆ, ಕಳೆದ ವರ್ಷ ಇದೇ ಸಂದರ್ಭದಲ್ಲಿ ಮತ್ತೊಬ್ಬ ನಟ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರೇ ನಟ ರಾಕೇಶ್‌ ಪೂಜಾರಿ!

ಒಂದೇ ಧಾರಾವಾಹಿಯಲ್ಲಿ ನಟನೆ

ಹೌದು, ದಿಲೀಪ್‌ ರಾಜ್‌ ನಟಿಸಿ, ನಿರ್ಮಾಣ ಮಾಡಿದ್ದ ʻಹಿಟ್ಲರ್‌ ಕಲ್ಯಾಣʼ ಧಾರಾವಾಹಿಯಲ್ಲಿ ರಾಕೇಶ್‌ ಪೂಜಾರಿ ಕೂಡ ಬಣ್ಣ ಹಚ್ಚಿದ್ದರು. ‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿಯಲ್ಲಿ ಎಜೆ (ಅಭಿರಾಮ್‌ ಜಯಶಂಕರ್‌) ಎಂಬ ಪಾತ್ರವನ್ನ ದಿಲೀಪ್ ರಾಜ್‌ ನಿರ್ವಹಿಸಿದ್ದರೇ, ಅವರ ಪಿಎ ವಿಶ್ವರೂಪ್‌ ಪಾತ್ರವನ್ನು ನಟ ರಾಕೇಶ್ ಪೂಜಾರಿ ನಿಭಾಯಿಸಿದ್ದರು. ದುರಂತವೆಂದರೆ, ಈ ಇಬ್ಬರೂ ಪ್ರತಿಭಾವಂತ ನಟರು ಹೃದಯಾಘಾತದಿಂದಲೇ ಸಾವನ್ನಪ್ಪಿರುವುದು.

ಅಂದು ಸೀರಿಯಲ್‌ನಲ್ಲಿ ‌ʻಸ್ಟಾರ್‌ʼ ಆಗಿದ್ದ ದಿಲೀಪ್‌ ರಾಜ್‌ಗೆ ʻಬಾಯ್‌ಫ್ರೆಂಡ್‌ʼ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಿದ್ದೇಗೆ? ದರ್ಶನ್‌‌, ಪ್ರೇಮ್‌ಗೂ ಹೋಗಿತ್ತು ಈ ಚಿತ್ರದ ಆಫರ್!‌

ಒಂದು ವರ್ಷದ ಅವಧಿಯಲ್ಲಿ ಎರಡು ಸಾವು

2025ರ ಮೇ 12ರಂದು ಸ್ನೇಹಿತರೊಬ್ಬರ ಮದುವೆ ಸಮಾರಂಭಕ್ಕೆ ಹೋಗಿದ್ದ ರಾಕೇಶ್ ಪೂಜಾರಿ ಅವರಿಗೆ ಬೆಳಗಿನಜಾವ ಹೃದಯಾಘಾತವಾಗಿತ್ತು. ಆಗ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ರಾಕೇಶ್‌ ಪೂಜಾರಿ ಪ್ರಾಣಪಕ್ಷಿ ಹಾರಿಹೋಗಿತ್ತು. ಇದೀಗ 2026ರ ಮೇ 13ರಂದು ಬೆಳಗಿನಜಾವ ನಟ ದಿಲೀಪ್‌ ರಾಜ್‌ ಅವರು ತೀವ್ರ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಾಕೇಶ್‌ ಪೂಜಾರಿ ವಿಧಿವಶರಾಗಿ ಒಂದು ವರ್ಷಕ್ಕೆ ಸರಿಯಾಗಿ ದಿಲೀಪ್‌ ರಾಜ್‌ ಕೂಡ ಇಹಲೋಕ ತ್ಯಜಿಸಿದ್ದಾರೆ. ‌

ʻನಮ್ಮ ತಂಡದಲ್ಲಿ ದಿಲೀಪ್‌ ರಾಜ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ; ಹಳೆಯ ದಿನಗಳನ್ನು ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ಹೃದಯಾಘಾತಕ್ಕೆ ಬಲಿಯಾದ ಸೆಲೆಬ್ರಿಟಿಗಳು

  • 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರು 2021ರ ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಕೇವಲ 46ನೇ ವಯಸ್ಸಿನಲ್ಲಿ ಅವರು ನಿಧನರಾದದ್ದು ಇಡೀ ದೇಶಕ್ಕೆ ಆಘಾತ ತಂದಿತ್ತು.
  • ನಟ ಚಿರಂಜೀವಿ ಸರ್ಜಾ ಅವರು 202ರ ಜೂನ್ 7ರಂದು ಹೃದಯಾಘಾತದಿಂದ ನಿಧನರಾದರು. ಅವರ ನಿಧನದ ಸಮಯದಲ್ಲಿ ಅವರ ಪತ್ನಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು.
  • ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದರು. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿತ್ತು.
  • ಹಿರಿಯ ನಟ ಲಕ್ಷ್ಮಣ್ ಅವರು ಹೃದಯಾಘಾತದಿಂದ 2023ರಲ್ಲಿ ನಿಧನರಾದರು. ಇವರು ನೂರಾರು ಚಿತ್ರಗಳಲ್ಲಿ ಖಳನಟನಾಗಿ ಮತ್ತು ಪೋಷಕ ನಟನಾಗಿ ಮಿಂಚಿದ್ದರು.