ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಸಾಥ್ ನೀಡಿದ ಹೊಂಬಾಳೆ ಫಿಲ್ಮ್ಸ್; ಕನ್ನಡ ಸಂಸ್ಥೆಯ ಮಡಿಲಿಗೆ ವಿದೇಶಿ ಹಕ್ಕುಗಳು!

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘ಹನುಮಾನ್ ಅಂಶ್’ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಪಡೆದುಕೊಂಡಿದೆ. ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 63.82 ಕೋಟಿ ರೂಪಾಯಿ ಗಳಿಸಿ ಸದ್ದು ಮಾಡಿರುವ ಈ ಭಕ್ತಿಪ್ರಧಾನ ಸಿನಿಮಾ, ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳನ್ನು ಹಾಗೂ ದೇಶದ ಶ್ರೀಮಂತ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕರ್ನಾಟಕದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಮುಂಚೂಣಿಯಲ್ಲಿದೆ. ಸದ್ಯ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಭಕ್ತಿಪ್ರಧಾನ ಚಿತ್ರ 'ಹನುಮಾನ್ ಅಂಶ್' ಸಿನಿಮಾದ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳನ್ನು ಹೊಂಬಾಳೆ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಭಾರತದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿರುವ ಈ ಚಿತ್ರವು ಇದೇ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ನೀಮ್ ಕರೋಲಿ ಬಾಬಾ ಬಯೋಪಿಕ್

ವಿಶಾಲ್ ಚತುರ್ವೇದಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ 'ಹನುಮಾನ್ ಅಂಶ್' ಚಿತ್ರವು, ಭಕ್ತರು ಹನುಮಂತನ ಸಾಕ್ಷಾತ್ ಅವತಾರವೆಂದೇ ಆರಾಧಿಸುವ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ (ಮಹಾರಾಜ್-ಜೀ) ಅವರ ಪಾವನ ಜೀವನಗಾಥೆಯನ್ನು ಆಧರಿಸಿದೆ. ಪ್ರೀತಿ, ಸೇವೆ, ಭಕ್ತಿ ಮತ್ತು ಸರಳತೆಯ ಮೂಲಕ ಆಧ್ಯಾತ್ಮಿಕತೆಯ ಸಂದೇಶ ಸಾರಿದ ಮಹಾರಾಜ್-ಜೀ ಅವರ ಪ್ರಭಾವ ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ ವಿದೇಶಗಳಿಗೂ ವಿಸ್ತರಿಸಿತ್ತು. ವಿಶೇಷವಾಗಿ 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಹಲವಾರು ಪಾಶ್ಚಿಮಾತ್ಯ ಆಧ್ಯಾತ್ಮಿಕ ಅನ್ವೇಷಕರ ಜೀವನದ ಮೇಲೆ ಬಾಬಾ ಅವರ ಪ್ರಭಾವ ಗಾಢವಾಗಿ ಮುದ್ರೆ ಒತ್ತಿತ್ತು.

60‌ ಕೋಟಿ ದಾಟಿದ ಗಳಿಕೆ

ಬಾಕ್ಸ್ ಆಫೀಸ್‌ನಲ್ಲಿ ನಿಧಾನವಾಗಿ ಶುರುವಾಗಿ ಇದೀಗ ಇತಿಹಾಸ ಸೃಷ್ಟಿಸುತ್ತಿರುವ ಈ ಚಿತ್ರ, ಮೊದಲ ದಿನ ಕೇವಲ 10 ಲಕ್ಷ ರೂಪಾಯಿಗಳ ಸಾಧಾರಣ ಗಳಿಕೆ ಕಂಡಿತ್ತು. ಆದರೆ, ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಪ್ರಚಾರದಿಂದಾಗಿ ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಿಕೊಂಡು, ಕೇವಲ 26 ದಿನಗಳಲ್ಲಿ ಬರೋಬ್ಬರಿ 63.82 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ವಿದೇಶಿ ಪ್ರೇಕ್ಷಕರಿಗೂ ಚಿತ್ರವನ್ನು ತಲುಪಿಸಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.

ʻನನ್ನ ಜೀವನದ ಬೆಳಕಿನೊಂದಿಗೆ 2026ಕ್ಕೆ ಹೆಜ್ಜೆ ಇಡುತ್ತಿದ್ದೇನೆʼ: ಅನುಷ್ಕಾ ಶರ್ಮಾ ಜತೆ ವಿರಾಟ್‌ ಕೊಹ್ಲಿ ಭಾವನಾತ್ಮಕ ಪೋಸ್ಟ್‌!

ಗಣ್ಯರಿಂದ ನೀಮ್ ಕರೋಲಿ ಬಾಬಾ ಭೇಟಿ

ನೀಮ್ ಕರೋಲಿ ಬಾಬಾ ಅವರ ಪ್ರಭಾವ ಜಾಗತಿಕ ದಿಗ್ಗಜರ ಮೇಲೂ ಆಳವಾಗಿ ಬಿದ್ದಿದೆ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ 1974ರಲ್ಲಿ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಮಹಾರಾಜ್-ಜೀ ಅವರ ದರ್ಶನ ಪಡೆಯಲೆಂದೇ ಭಾರತಕ್ಕೆ ಬಂದಿದ್ದರು. ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕೂಡ ಕೈಂಚಿ ಧಾಮ್‌ಗೆ ಭೇಟಿ ನೀಡಿ ಪ್ರೇರಣೆ ಪಡೆದುಕೊಂಡಿದ್ದರು.

ಹಾಲಿವುಡ್ ಖ್ಯಾತ ನಟಿ ಜೂಲಿಯಾ ರಾಬರ್ಟ್ಸ್ ಹಾಗೂ ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೈಂಚಿ ಧಾಮ್‌ನ ಬಾಬಾ ಭಕ್ತರಾಗಿದ್ದಾರೆ. ಇದೀಗ ಅದೇ ಕೈಂಚಿ ಧಾಮ್‌ನ ದೈವಿಕ ಸೆಳೆತವನ್ನು ಹೊಂಬಾಳೆ ಸಂಸ್ಥೆ ತನ್ನ ಜಾಗತಿಕ ವಿತರಣೆಯ ಮೂಲಕ ವಿಶ್ವದ ಮೂಲೆ ಮೂಲೆಗೂ ಪಸರಿಸಲು ಸಜ್ಜಾಗಿದೆ.