ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಗಗನ್ ಶರ್ಟ್‌ ತೆಗೆದ್ರೆ ಪ್ರಶಾಂತ್ ಬೇರೇನೋ ತೆಗಿತಾರಂತೆ! ಬಿದ್ದು ಬಿದ್ದು ನಕ್ಕ ಸೋನಿಕಾ

Bigg Boss Kannada 13: ಪ್ರಶಾಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದರು. ಗಾನವಿ ಮತ್ತು ಪ್ರಶಾಂತ್ ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಅನುಭವ ಹೊಂದಿರುವವರಾದ್ದರಿಂದ, “ಸ್ಟ್ರಾಟಜಿ ಹೆಸರಿನಲ್ಲಿ ಫೇಕ್ ಪರ್ಸನಾಲಿಟಿ ತೋರಿಸದೇ ನೈಜ ಆಟವಾಡಿ” ಎನ್ನುತ್ತಿದ್ದಾರೆ ಪ್ರೇಕ್ಷಕರು. ಇದೀಗ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ ನಡುವೆ ತಮಾಷೆಯ ಮಾತುಕಥೆ ನಡೆದಿದೆ.

ಬಿಗ್‌ ಬಾಸ್‌ ಕನ್ನಡ

ಪ್ರಶಾಂತ್ (Prashanth) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದರು. ಗಾನವಿ (Ganavi) ಮತ್ತು ಪ್ರಶಾಂತ್ ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಅನುಭವ ಹೊಂದಿರುವವರಾದ್ದರಿಂದ, “ಸ್ಟ್ರಾಟಜಿ ಹೆಸರಿನಲ್ಲಿ ಫೇಕ್ ಪರ್ಸನಾಲಿಟಿ ತೋರಿಸದೇ ನೈಜ ಆಟವಾಡಿ” ಎನ್ನುತ್ತಿದ್ದಾರೆ ಪ್ರೇಕ್ಷಕರು. ಇದೀಗ ಪ್ರಶಾಂತ್, ಸೋನಿಕಾ ಗೌಡ ಮತ್ತು ಗಗನ್ ಚಿನ್ನಪ್ಪ (Gagan Chinnappa) ನಡುವೆ ತಮಾಷೆಯ ಮಾತುಕಥೆ ನಡೆದಿದೆ.

ನಾನು ಪ್ಯಾಂಟ್ ತೆಗೆಯುತ್ತೇನೆ

‘ಟಾಸ್ಕ್​ನಲ್ಲಿ ನೀವು ಗೆಲ್ಲಲೇ ಬೇಕು. ಆದರೆ ಟಾಸ್ಕ್ ಗೆದ್ದ ಬಳಿಕ ನೀವು ಶರ್ಟ್ ತೆಗೆಯುವಂತಿಲ್ಲ. ಒಂದು ವೇಳೆ ನೀವು ಶರ್ಟ್ ತೆಗೆದರೆ ನಾನು ಪ್ಯಾಂಟ್ ತೆಗೆಯುತ್ತೇನೆ. ಕರ್ನಾಟಕದ ಜನ ನೋಡಿ ನನ್ನ ಮರ್ಯಾದೆ ಹೋದರೂ ಪರವಾಗಿಲ್ಲ. ನನಗೆ ಕೋಪ ಬಂದರೆ ಹಾಗೆಯೇ ಮಾಡುತ್ತೇನೆ’ ಎಂದು ಪ್ರಶಾಂತ್ ಅವರು ಗಗನ್ ಚಿನ್ನಪ್ಪಗೆ ಹೇಳಿದ್ದಾರೆ. ಅವರ ಮಾತು ಕೇಳಿದ ಸೋನಿಕಾ ಗೌಡ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ: Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?

ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಗಳು, ಚರ್ಚೆಗಳು ಹಾಗೂ ಜಗಳಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಕಾಮಿಡಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಶಾಂತ್ ಗೌಡ ಎಂಟ್ರಿ ನೀಡಿದರೆ, ಕಾರ್ಯಕ್ರಮಕ್ಕೆ ಹಾಸ್ಯದ ಸ್ಪರ್ಶ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದರಂತೆ ಆಗಿದೆ.



ತಮ್ಮ ವಿಭಿನ್ನ ಕಾಮಿಡಿ ಪಂಚ್‌ಗಳು, ಸಮಯಪ್ರಜ್ಞೆ ಹಾಗೂ ಹಾಸ್ಯಮಯ ಮಾತಿನ ಶೈಲಿಯಿಂದ ಪ್ರಶಾಂತ್ ಗೌಡ ಅವರು ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.

ಇನ್ನೊಂದು ಕಡೆ ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಆಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲಿ ಗಾನವಿ ಬಲು ಜೋರಾಗಿ ಆಟ ಆಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 13: ದೊಡ್ಮನೆಯಲ್ಲಿ ಯಶಸ್ ನಡವಳಿಕೆಗೆ ವೀಕ್ಷಕರು ಫುಲ್ ಗರಂ; ಗಾನವಿ ಜೊತೆ ಅಡಲ್ಟ್ ಟಾಕ್

ಮನೆಯ ಹಲವರೊಡನೆ ಈಗಾಗಲೇ ಜಗಳ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇದೀಗ ಮನೆ ಮಂದಿ ಸೇರಿಕೊಂಡು ಗಾನವಿಗೆ ಕಳಪೆ ಪಟ್ಟ ನೀಡಿದ್ದಾರೆ. ಇದರಿಂದ ಸಿಟ್ಟಾಗಿರುವ ಗಾನವಿ ಮನೆ ಮಂದಿಯ ಜೊತೆಗೆ ಜಗಳ ಮಾಡಿದ್ದಾರೆ. ಅದರಲ್ಲೂ ಗಗನ್ ವಿರುದ್ಧ ಗಾನವಿ ಜೋರು ಜಗಳ ಮಾಡಿದ್ದಾರೆ.

Yashaswi Devadiga

View all posts by this author