ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IIFA Awards 2026: ಧುರಂಧರ್‌ಗೆ ಪ್ರಶಸ್ತಿಗಳ ಸುರಿಮಳೆ; ರಣವೀರ್ ಸಿಂಗ್‌ಗೆ ಅತ್ಯುತ್ತಮ ನಟ, ಅತ್ಯುತ್ತಮ ನಟಿ ಯಾರು?

IIFA Awards 2026: 26ನೇ ಆವೃತ್ತಿಯ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟವಾಗಿದೆ. ಶುಕ್ರವಾರ ಪ್ರಶಸ್ತಿಗಳ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗಿದೆ.ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಸ್ಪೈ ಆಕ್ಷನ್ ಡ್ರಾಮಾ ‘ಧುರಂಧರ್’ ಈ ಬಾರಿಯ ಪ್ರಶಸ್ತಿ ಸಮಾರಂಭದಲ್ಲಿ ಭರ್ಜರಿ ಸಾಧನೆ ಮಾಡಿದೆ. ಪ್ರಮುಖ ವಿಭಾಗಗಳ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ‘ಸೈಯಾರಾ’ ಮತ್ತು ‘ಛಾವಾ’ ಚಿತ್ರಗಳೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಡಿಜಿಟಲ್ ಸರಣಿಗಳ ವಿಭಾಗದಲ್ಲಿ ಆರ್ಯನ್ ಖಾನ್ ನಿರ್ದೇಶನದ ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ (The Ba**ds of Bollywood) ಹಲವು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ.

ಧುರಂಧರ್ ಸಿನಿಮಾ

26ನೇ ಆವೃತ್ತಿಯ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟವಾಗಿದೆ. ಶುಕ್ರವಾರ ಪ್ರಶಸ್ತಿಗಳ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗಿದೆ.ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಸ್ಪೈ ಆಕ್ಷನ್ ಡ್ರಾಮಾ ‘ಧುರಂಧರ್’ ಈ ಬಾರಿಯ ಪ್ರಶಸ್ತಿ ಸಮಾರಂಭದಲ್ಲಿ ಭರ್ಜರಿ ಸಾಧನೆ ಮಾಡಿದೆ. ಪ್ರಮುಖ ವಿಭಾಗಗಳ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ‘ಸೈಯಾರಾ’ ಮತ್ತು ‘ಛಾವಾ’ ಚಿತ್ರಗಳೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಡಿಜಿಟಲ್ ಸರಣಿಗಳ ವಿಭಾಗದಲ್ಲಿ ಆರ್ಯನ್ ಖಾನ್ ನಿರ್ದೇಶನದ ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ (The Ba**ds of Bollywood) ಹಲವು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ.

ಈ ಬಾರಿಯ IIFA ಪ್ರಶಸ್ತಿಗಳ ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ.

ಜನಪ್ರಿಯ ವಿಭಾಗಗಳು (Popular Categories)

  • ಅತ್ಯುತ್ತಮ ಸಿನಿಮಾ: ಜ್ಯೋತಿ ದೇಶಪಾಂಡೆ, ಆದಿತ್ಯ ಧರ್ ಮತ್ತು ಲೋಕೇಶ್ ಧರ್ – ಧುರಂಧರ್
  • ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ: 20th Century Studios, ಜಾನ್ ಲ್ಯಾಂಡೌ ಮತ್ತು ಜೇಮ್ಸ್ ಕ್ಯಾಮೆರಾನ್ – ಅವತಾರ್: ಫೈರ್ ಆ್ಯಂಡ್ ಆ್ಯಶ್
  • ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ – ಧುರಂಧರ್
  • ಅತ್ಯುತ್ತಮ ನಾಯಕಿ: ಅನೀತ್ ಪಡ್ಡಾ – ಸೈಯಾರಾ
  • ಅತ್ಯುತ್ತಮ ನಾಯಕ: ರಣವೀರ್ ಸಿಂಗ್ – ಧುರಂಧರ್
  • ಅತ್ಯುತ್ತಮ ಪೋಷಕ ನಟಿ: ಹುಮಾ ಖುರೇಷಿ – ಜಾಲಿ ಎಲ್‌ಎಲ್‌ಬಿ 3
  • ಅತ್ಯುತ್ತಮ ಪೋಷಕ ನಟ: ಸಂಜಯ್ ದತ್ – ಧುರಂಧರ್
  • ಅತ್ಯುತ್ತಮ ಖಳನಟ: ಅಕ್ಷಯ್ ಖನ್ನಾ – ಧುರಂಧರ್
  • ಅತ್ಯುತ್ತಮ ಸಂಗೀತ ನಿರ್ದೇಶನ: ಶಾಶ್ವತ್ ಸಚ್‌ದೇವ್ – ಧುರಂಧರ್
  • ಅತ್ಯುತ್ತಮ ಮೂಲ ಕಥೆ: ಆದಿತ್ಯ ಧರ್ – ಧುರಂಧರ್
  • ಅತ್ಯುತ್ತಮ ರೂಪಾಂತರಗೊಂಡ ಕಥೆ: ಬಷಾರತ್ ಪೀರ್, ಸುಮಿತ್ ರಾಯ್ ಮತ್ತು ನೀರಜ್ ಘಾಯ್ವಾನ್ – ಹೋಮ್‌ಬೌಂಡ್
  • ಅತ್ಯುತ್ತಮ ಗೀತರಚನೆ: ಇರ್ಶಾದ್ ಕಾಮಿಲ್ – ಸೈಯಾರಾ
  • ಅತ್ಯುತ್ತಮ ಹಿನ್ನೆಲೆ ಗಾಯಕ: ಫಹೀಮ್ ಅಬ್ದುಲ್ಲಾ – ಸೈಯಾರಾ
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್ – ಸೈಯಾರಾ (ರಿಪ್ರೈಸ್ – ಫೀಮೇಲ್)

ತಾಂತ್ರಿಕ ವಿಭಾಗಗಳು (Technical Categories)

  • ಅತ್ಯುತ್ತಮ ಛಾಯಾಗ್ರಹಣ: ವಿಕಾಶ್ ನೋಲಾಖಾ – ಧುರಂಧರ್
  • ಅತ್ಯುತ್ತಮ ಚಿತ್ರಕಥೆ: ಆದಿತ್ಯ ಧರ್ – ಧುರಂಧರ್
  • ಅತ್ಯುತ್ತಮ ಸಂಭಾಷಣೆ: ಆದಿತ್ಯ ಧರ್ – ಧುರಂಧರ್
  • ಅತ್ಯುತ್ತಮ ಸಂಕಲನ: ಶಿವಕುಮಾರ್ ವಿ. ಪಣಿಕ್ಕರ್ – ಧುರಂಧರ್
  • ಅತ್ಯುತ್ತಮ ನೃತ್ಯ ಸಂಯೋಜನೆ: ಬಾಸ್ಕೋ ಲೆಸ್ಲಿ ಮಾರ್ಟಿಸ್ – 'ಆವಾನ್ ಜಾವಾನ್', ವಾರ್ 2
  • ಅತ್ಯುತ್ತಮ ಧ್ವನಿ ವಿನ್ಯಾಸ: ಬಿಶ್ವದೀಪ್ ಚಟರ್ಜಿ – ಧುರಂಧರ್
  • ಅತ್ಯುತ್ತಮ ಧ್ವನಿ ಮಿಶ್ರಣ: ಅಲೋಕ್ ಡೇ – ಛಾವಾ
  • ಅತ್ಯುತ್ತಮ ಹಿನ್ನೆಲೆ ಸಂಗೀತ: ಎ.ಆರ್. ರೆಹಮಾನ್ – ಛಾವಾ
  • ಅತ್ಯುತ್ತಮ ದೃಶ್ಯ ಪರಿಣಾಮಗಳು (VFX): ಅಸೆಂಬ್ಲೇಜ್ ಎಂಟರ್‌ಟೈನ್‌ಮೆಂಟ್ ಮತ್ತು ರಿಡಿಫೈನ್ – ಛಾವಾ



ಚೊಚ್ಚಲ ಪ್ರವೇಶ ವಿಭಾಗ (Debut Categories)

  • ಅತ್ಯುತ್ತಮ ಚೊಚ್ಚಲ ನಟಿ: ರಾಶಾ ಥಡಾನಿ – ಆಜಾದ್
  • ಅತ್ಯುತ್ತಮ ಚೊಚ್ಚಲ ನಟ: ಅಹಾನ್ ಪಾಂಡೆ – ಸೈಯಾರಾ

ಡಿಜಿಟಲ್ ಸಿನಿಮಾ ವಿಭಾಗ (Digital Film Category)

  • ಅತ್ಯುತ್ತಮ ಸಿನಿಮಾ: ಬರಾಮುಲ್ಲಾ
  • ಅತ್ಯುತ್ತಮ ಮೂಲ ಕಥೆ: ಬರಾಮುಲ್ಲಾ
  • ಅತ್ಯುತ್ತಮ ನಿರ್ದೇಶನ: ಕರಣ್ ತೇಜ್‌ಪಾಲ್ – ಸ್ಟೋಲನ್
  • ಅತ್ಯುತ್ತಮ ನಾಯಕ ನಟ: ಅಭಿಷೇಕ್ ಬ್ಯಾನರ್ಜಿ – ಸ್ಟೋಲನ್
  • ಅತ್ಯುತ್ತಮ ನಾಯಕಿ: ಸಾನ್ಯಾ ಮಲ್ಹೋತ್ರಾ – ಮಿಸೆಸ್
  • ಅತ್ಯುತ್ತಮ ಪೋಷಕ ನಟಿ: ಮೋನಿಕಾ ಪನ್ವಾರ್ – ನಿಶಾಂಚಿ 2
  • ಅತ್ಯುತ್ತಮ ಪೋಷಕ ನಟ: ಅವಿನಾಶ್ ತಿವಾರಿ – ದಿ ಮೆಹ್ತಾ ಬಾಯ್ಸ್

ಡಿಜಿಟಲ್ ಸರಣಿ ವಿಭಾಗ (Digital Series Category)

  • ಅತ್ಯುತ್ತಮ ವೆಬ್ ಸರಣಿ: ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್
  • ಅತ್ಯುತ್ತಮ ನಿರ್ದೇಶನ: ಆರ್ಯನ್ ಖಾನ್ – ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್
  • ಅತ್ಯುತ್ತಮ ಪೋಷಕ ನಟಿ: ಅನ್ಯಾ ಸಿಂಗ್ – ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್
  • ಅತ್ಯುತ್ತಮ ಪೋಷಕ ನಟ: ರಾಘವ್ ಜುಯಲ್ – ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್
  • ಅತ್ಯುತ್ತಮ ನಾಯಕ ನಟ: ಜೈದೀಪ್ ಅಹ್ಲಾವತ್ – ಪಾತಾಳ್ ಲೋಕ 2
  • ಅತ್ಯುತ್ತಮ ನಾಯಕಿ: ತಿಲೋತ್ತಮಾ ಶೋಮ್ – ಪಾತಾಳ್ ಲೋಕ 2
  • ಅತ್ಯುತ್ತಮ ಮೂಲ ಕಥೆ: ಪಾತಾಳ್ ಲೋಕ 2
  • ಅತ್ಯುತ್ತಮ ಡಾಕ್ಯುಸರಣಿ / ಡಾಕ್ಯುಫಿಲ್ಮ್: ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವೀಸಸ್ ಇಂಡಿಯಾ ಎಲ್‌ಎಲ್‌ಪಿ, ರಾಕೇಶ್ ರೋಷನ್ ಮತ್ತು ಶಶಿ ರಂಜನ್ – ದಿ ರೋಷನ್ಸ್
  • ಅತ್ಯುತ್ತಮ ರಿಯಾಲಿಟಿ / ಸ್ಕ್ರಿಪ್ಟ್ ರಹಿತ ಕಾರ್ಯಕ್ರಮ: ಬಿಬಿಸಿ ಸ್ಟುಡಿಯೋಸ್, ಆಲ್3ಮೀಡಿಯಾ ಮತ್ತು ಪ್ರೈಮ್ ವಿಡಿಯೋ – ದಿ ಟ್ರೇಟರ್ಸ್
  • ಅತ್ಯುತ್ತಮ ಶೀರ್ಷಿಕೆ ಗೀತೆ: ಉಜ್ವಲ್ ಗುಪ್ತಾ – ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್

ಧುರಂಧರ್‌ಗೆ ಭರ್ಜರಿ ಯಶಸ್ಸು!

ಈ ಬಾರಿಯ IIFA ಪ್ರಶಸ್ತಿಗಳಲ್ಲಿ ‘ಧುರಂಧರ್’ ಚಿತ್ರದ ಪ್ರಾಬಲ್ಯ ಎದ್ದು ಕಾಣಿಸಿದೆ. ನಟನೆಯಿಂದ ಹಿಡಿದು ನಿರ್ದೇಶನ, ಸಂಗೀತ, ತಾಂತ್ರಿಕ ವಿಭಾಗಗಳವರೆಗೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಚಿತ್ರ ತನ್ನದಾಗಿಸಿಕೊಂಡಿದೆ.

ಇನ್ನೊಂದೆಡೆ, ‘ಸೈಯಾರಾ’ ಚಿತ್ರದ ಮೂಲಕ ಅನೀತ್ ಪಡ್ಡಾ ಮತ್ತು ಅಹಾನ್ ಪಾಂಡೆ ಪ್ರಶಸ್ತಿ ಗೆದ್ದಿರುವುದು ವಿಶೇಷ. ‘ಛಾವಾ’ ಚಿತ್ರವೂ ಸಂಗೀತ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. OTT ವಿಭಾಗದಲ್ಲಿ ಆರ್ಯನ್ ಖಾನ್ ಅವರ ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ಸರಣಿ ಗಮನಾರ್ಹ ಸಾಧನೆ ಮಾಡಿದೆ.

Yashaswi Devadiga

View all posts by this author