Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ
ಸ್ಟಾರ್ ಸುವರ್ಣ ವಾಹಿನಿಯು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯರೊಂದಿಗೆ ಹಂಚಿ ಸಂತೋಷವನ್ನು ಪಡುತ್ತಾರೆ. ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು "ಸುವರ್ಣ ಸಂಕ್ರಾಂತಿ ಸಂಭ್ರಮ" ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ಪರಿವಾರದ ಎಲ್ಲಾ ತಾರೆಗಳು ಭಾಗಿಯಾಗಲಿದ್ದಾರೆ. ಇದೇ ಶುಕ್ರವಾರ (ಜ.16) ಸಂಜೆ 6.30 ರಿಂದ 9.30 ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
1/8
ಸ್ಟಾರ್ ಸುವರ್ಣ ವಾಹಿನಿಯ ತಾರೆಯರಿಂದ ಅದ್ದೂರಿ ಸಂಕ್ರಾಂತಿ ಹಬ್ಬದ ಆಚರಣೆ
2/8
ಎಳ್ಳು ಬೆಲ್ಲ ಹಂಚಿ ಎಲ್ಲರಿಗೂ ಶುಭ ಕೋರಿದ ಸುವರ್ಣ ಪರಿವಾರದ ಕಲಾವಿದರು
3/8
ಸಾಂಪ್ರದಾಯಿಕ ಉಡುಗೆಯಲ್ಲಿ ಕಣ್ಮನ ಸೆಳೆದ ಆಸೆ ಜೋಡಿ
4/8
ಈ ಬಾರಿಯ ಸುಗ್ಗಿಯ ಸಂಭ್ರಮವು 'ಆಸೆ' ಧಾರಾವಾಹಿಯ ಮನೆಯಲ್ಲಿ ಜರುಗುತ್ತಿದೆ
5/8
ಸಾಂಪ್ರದಾಯಿಕ ಹಳ್ಳಿಯ ಸೊಗಡಿನ ಆಚರಣೆ ಎಲ್ಲರ ಗಮನಸೆಳೆದಿದೆ
6/8
ಸುವರ್ಣ ವಾಹಿನಿಯ ಜನಪ್ರಿಯ ಸೀರಿಯಲ್‌ಗಳಾದ ನೀ ಇರಲು ಜೊತೆಯಲ್ಲಿ, ಶಾರದೆ, ಜೈ ಲಲಿತಾ ಮತ್ತು ಸ್ನೇಹದ ಕಡಲಲ್ಲಿ ತಂಡದ ಕಲಾವಿದರು ಭಾಗಿಯಾಗಲಿದ್ದಾರೆ.
7/8
ಹಾಡು, ಹರಟೆ, ಹಾಸ್ಯದ ಜೊತೆಗೆ ಸಾಂಪ್ರದಾಯಿಕ ಹಬ್ಬದೂಟದ ಸವಿಯು ಕಾರ್ಯಕ್ರಮದ ಕಳೆ ಹೆಚ್ಚಿಸಿದೆ
8/8
ಖ್ಯಾತ ನಟ ಶಿವರಾಜ್ ಕೆ.ಆರ್. ಪೇಟೆ ತಮ್ಮ ಚಮತ್ಕಾರಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.