ಇರಾನ್-ಇಸ್ರೇಲ್ (US-Israel Attacks on Iran) ಯುದ್ಧದ ಹಿನ್ನೆಲೆಯಲ್ಲಿ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಾಯ ಉಂಟಾಗಿದೆ. ಗಲ್ಫ್ ರಾಷ್ಟ್ರಗಳ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅನೇಕರ ಕನ್ನಡಿಗರು ಈಗ ಸಂಕಷ್ಟದಲ್ಲಿದ್ದಾರೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ದಾಳಿ ನಡೆಸುತ್ತಿದ್ದು, ದುಬೈನ (Dubai International Airport) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ದುಬೈನಲ್ಲಿರೋ ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
Israel-Iran Conflict: ಇರಾನ್-ಇಸ್ರೇಲ್ ಸಂಘರ್ಷಕ್ಕೆ ಬ್ರೇಕ್; ಕದನ ವಿರಾಮ ಘೋಷಣೆ
ಡ್ರೋನ್ ಪ್ರತಾಪ್ ಅವರು ಸದ್ಯ ಈಚೆಗೆ ದುಬೈಗೆ ಹೋಗಿದ್ದರು. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಫೆ.28ರಂದು ಅವರು ಬೆಂಗಳೂರಿಗೆ ವಾಪಸಾಗಬೇಕಿತ್ತು. ಅಷ್ಟರೊಳಗೆ ಯುದ್ಧದ ಕರಿನೆರಳು ಅವರ ಮೇಲೆ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಗಲ್ಫ್ ರಾಷ್ಟ್ರಗಳ ವಿಮಾನ ನಿಲ್ದಾಣಗಳು ಸ್ತಬ್ಧಗೊಂಡಿವೆ.
Israel-Iran conflict: ಇರಾನ್-ಇಸ್ರೇಲ್ ಸಂಘರ್ಷ: ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಬೆಂಬಲ ಯಾರಿಗೆ?
ಡ್ರೋನ್ ಪ್ರತಾಪ್ ಹೇಳಿದ್ದೇನು?
"ನಾನು ಈಗ ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಇದ್ದೇನೆ. ಇರಾನ್ ಮತ್ತು ಅಮೆರಿಕದ ಯುದ್ಧದ ಮಧ್ಯೆ ನಾವಿಲ್ಲಿ ಸಿಲುಕಿಕೊಂಡಿದ್ದೇವೆ. ನಾವು ಇಂದು ರಾತ್ರಿ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಎಲ್ಲಾ ವಿಮಾನಗಳು ಕ್ಯಾನ್ಸಲ್ ಆಗಿವೆ. ಏನು ಮಾಡಬೇಕು ಎಂದು ನಮಗೆ ತಿಳಿಯುತ್ತಿಲ್ಲ. ಇರಾನ್ ಮತ್ತು ಅಮೆರಿಕ ಯುದ್ಧ ಮಾಡುತ್ತಿರುವುದರಿಂದ ಇಲ್ಲಿನ ಏರ್‌ಸ್ಪೇಸ್ ಅನ್ನು ಕಂಪ್ಲೀಟ್ ಆಗಿ ಕ್ಲೋಸ್ ಮಾಡಿದ್ದಾರೆ. ನಾವೀಗ ಏರ್‌ಪೋರ್ಟ್‌ನಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆ ಇದೆ. ಮುಂದಿನ ಅಪ್ಡೇಟ್‌ಗಾಗಿ ಕಾಯಿರಿ ಅಂತಲೂ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅನೌನ್ಸ್ಮೆಂಟ್ ಮಾಡುತ್ತಿದ್ದಾರೆ" ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.
ಡ್ರೋನ್ ಪ್ರತಾಪ್ ಹಂಚಿಕೊಂಡ ವಿಡಿಯೋ
ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕ್ರೀಡಾ ತಾರೆ
ಡ್ರೋನ್ ಪ್ರತಾಪ್ ಮಾತ್ರವಲ್ಲ, ಕರ್ನಾಟಕದ ಎಂಎಲ್‌ಸಿ ಬೋಜೇಗೌಡ ಅವರು ಕೂಡ ದುಬೈನಲ್ಲಿ ಸಿಲುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಭಾರತದ ಖ್ಯಾತ ಕ್ರೀಡಾ ತಾರೆ ಪಿ ವಿ ಸಿಂಧು ಅವರು ಕೂಡ ದುಬೈನ ಏರ್‌ಪೋರ್ಟ್‌ನಲ್ಲೇ ಇದ್ದಾರೆ. ಮಂಗಳವಾರ (ಮಾ.3) ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್‌ಗಾಗಿ ಸಿಂಧು ಬರ್ಮಿಂಗ್ಹ್ಯಾಮ್‌ಗೆ ತೆರಳುತ್ತಿದ್ದರು. ದುಬೈನಿಂದ ಅವರು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಇರಾನ್ ದಾಳಿಯ ಕಾರಣ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ರದ್ಧ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಸಿಂಧು ಅವರು ಅಲ್ಲಿಯೇ ಸಿಲುಕಿದ್ದಾರೆ.