ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಂದೆ ಮೇಲೆ ಅಸಮಾಧಾನಗೊಂಡರೇ ʻದಳಪತಿʼ ವಿಜಯ್‌ ಪುತ್ರ? ದಿಢೀರ್‌ ಅಂತ ಎಲ್ಲರ ಕಣ್ಣು ಮಗ ಜೇಸನ್‌ ಸಂಜಯ್‌ ಮೇಲೆ ಬಿದ್ದಿದ್ದೇಕೆ?

Vijay Family Crisis: ತಮಿಳು ನಟ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸಂಗೀತ ಸ್ವರ್ಣಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ, ಮಗ ಜೇಸನ್ ಸಂಜಯ್ ಅವರು ತಮ್ಮ ತಂದೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

ತಮಿಳು ನಟ ದಳಪತಿ ವಿಜಯ್‌ ಅವರ ಕುಟುಂಬದಲ್ಲಿ ಈಗ ಅಲ್ಲೋಲ ಕಲ್ಲೋಲವೇ ನಡೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಎದುರಾಗಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ವಿಜಯ್‌ ಸಜ್ಜುಗೊಳಿಸುತ್ತಿರುವ ಹೊತ್ತಿನಲ್ಲಿಯೇ ಅವರ ಕುಟುಂಬದಲ್ಲಿ ವಿಚ್ಛೇದನದ ಕೂಗು ಕೇಳಿಬಂದಿರುವುದು ಬೇಸರದ ವಿಚಾರ. ಈ ಮಧ್ಯೆ ವಿಜಯ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಮಗ ಜೇಸನ್‌ ಸಂಜಯ್‌ ಅನ್‌ಫಾಲೋ ಮಾಡಿರುವ ಮಾಹಿತಿ ಕೇಳಿಬಂದಿದೆ.

ಅಪ್ಪನ ಮೇಲೆ ಸಂಜಯ್‌ಗೆ ಕೋಪವೇ?

ವಿಜಯ್‌ ಅವರಿಂದ ವಿಚ್ಚೇದನ ಬೇಕು ಎಂದು ಪತ್ನಿ ಸಂಗೀತ ಸ್ವರ್ಣಲಿಂಗಂ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದಾರೆ. ನಟಿಯ ಜೊತೆ ವಿಜಯ್‌ಗೆ ಸಂಬಂಧ ಇದೆ ಎಂದು ನೇರವಾಗಿ ಹೇಳಿದ್ದಾರೆ. ಹಾಗಾಗಿ, ಅವರ ಮಕ್ಕಳಿಗೂ ವಿಜಯ್‌ ಮೇಲೆ ಕೋಪ ಬಂದಿದೆಯಾ ಎಂಬ ಮಾತುಗಳು ಕೇಳಿಬಂದಿವೆ. ಕಾರಣ, ವಿಜಯ್‌ ಪುತ್ರ ಸಂಜಯ್‌ಗೆ ಈಗ 25 ವರ್ಷ. ಸದ್ಯ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಅದರಲ್ಲಿ ಮಗ್ನರಾಗಿದ್ದಾರೆ. ಇನ್ನು, ಅವರ ಇನ್‌ಸ್ಟಾಗ್ರಾಮ್‌ ಖಾತೆಗೆ 4.70 ಲಕ್ಷ ಮಂದಿ ಫಾಲೋವರ್ಸ್‌ ಇದ್ದಾರೆ.

Vijay wife Sangeetha: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ-ರಾಜಕಾರಣಿ ವಿಜಯ್ ದಳಪತಿ ಪತ್ನಿ ಸಂಗೀತಾ

ಆದರೆ ಸಂಜಯ್‌ ಮಾತ್ರ 36 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ತಮಿಳು ನಟ ವಿಜಯ್‌ ಸೇತುಪತಿ ಸೇರಿದಂತೆ ಅನೇಕರು ಈ ಲಿಸ್ಟ್‌ನಲ್ಲಿ ಇದ್ದಾರೆ. ಆದರೆ ತಮ್ಮ ತಂದೆ ದಳಪತಿ ವಿಜಯ್‌ ಅವರನ್ನೇ ಸಂಜಯ್‌ ಫಾಲೋ ಮಾಡುತ್ತಿಲ್ಲ. ತಮ್ಮ ತಾಯಿಗೆ ತಂದೆಯಿಂದ ಮೋಸವಾಗಿದೆ ಎಂಬ ಕಾರಣಕ್ಕೆ ಅವರನ್ನು ಸಂಜಯ್‌ ಅನ್‌ಫಾಲೋ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಯಾವಾಗ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಹಾಕಿದರೋ, ಆಗಿನಿಂದ ವಿಜಯ್‌ರನ್ನು ಸಂಜಯ್‌ ಫಾಲೋ ಮಾಡುತ್ತಿಲ್ಲ ಎಂಬ ವಿಚಾರ ಕೂಡ ಹೈಲೈಟ್‌ ಆಗಿದೆ. ಮತ್ತೊಂದು ವಾದದ ಪ್ರಕಾರ, ಜೇಸನ್‌ ಸಂಜಯ್‌ ಆರಂಭದಿಂದಲೂ ತಮ್ಮ ತಂದೆ ವಿಜಯ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿರಲಿಲ್ಲ. ಅಲ್ಲದೇ, ಅವರು ಸೋಶಿಯಲ್‌ ಮೀಡಿಯಾಗಳಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ವಿಚ್ಛೇದನದ ವಿಚಾರಕ್ಕೆ ಇದನ್ನು ತಳುಕು ಹಾಕುವುದು ಸರಿ ಅಲ್ಲ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಸಂಗೀತಾ ಮಾಡಿರುವ ಗಂಭೀರ ಆರೋಪಗಳೇನು?

ವಿಜಯ್ ಅವರು ಮತ್ತೊಬ್ಬ ನಟಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತ ಆರೋಪಿಸಿದ್ದು, ಅಗತ್ಯಬಿದ್ದರೆ ಆ ನಟಿಯನ್ನು ಈ ಪ್ರಕರಣದಲ್ಲಿ ಎರಡನೇ ಪ್ರತಿವಾದಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಿರಂತರ ಮಾನಸಿಕ ಹಿಂಸೆ ಮತ್ತು ನಿಂದನೆ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿದ್ದರೂ ವಿಜಯ್ ತಮ್ಮನ್ನು ದೂರವಿಟ್ಟಿದ್ದಾರೆ.

ಈ ನಡುವೆ ನಟಿಯೊಬ್ಬರ ಜೊತೆ ಬಹಿರಂಗವಾಗಿ ಓಡಾಡುತ್ತಿರುವುದು ಕುಟುಂಬಕ್ಕೆ ಮತ್ತು ಮಕ್ಕಳಿಗೆ ಮುಜುಗರ ತಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 1954ರ ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಸಂಗೀತ, ತಮ್ಮ ದಾಂಪತ್ಯ ಸರಿಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.