ಶೀಘ್ರದಲ್ಲೇ ಶುರುವಾಗಲಿರುವ ‘ಜಗದ್ಧಾತ್ರಿ’ (Jagadhatri Serial) ಧಾರಾವಾಹಿಯಲ್ಲಿ ಕವಿತಾ ಗೌಡ ನಟಿಸುತ್ತಿರುವುದು ಫೈನಲ್ ಆಗಿದೆ. ಆದರೆ ಈಗಾಗಲೇ ಎಲ್ಲೆಡೆ ವೈರಲ್ ಆಗಿರುವಂತೆ ಮೋಕ್ಷಿತಾ ಪೈ (Mokshitha Pai) ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ‘ಜಗದ್ಧಾತ್ರಿ’ ಪ್ರೊಮೋ ರಿಲೀಸ್ ಆಗಿದೆ. ಆದರೆ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದರೆ ವಾಯ್ಸ್ ಕೇಳಿ ಎಲ್ಲರೂ ಇದು ಮೋಕ್ಷಿತಾ ಪೈ ಅವರೇ ಎಂದು ಹೇಳಿದ್ದಾರೆ. ಈಗ ಈ ಬಹುನಿರೀಕ್ಷಿತ ಪ್ರೊಜೆಕ್ಟ್‌ನಿಂದ ಮತ್ತೊಂದು ದೊಡ್ಡ (Hero) ಸುದ್ದಿ ಹೊರ ಬಿದ್ದಿದೆ.
ಈ ಧಾರಾವಾಹಿಗೆ ನಾಯಕನಾಗಿ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಾ ಇದೆ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ಧಾರ್ಥ್ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ವಿಜಯ್ ಸೂರ್ಯ ‘ಜಗದ್ಧಾತ್ರಿ’ ತಂಡವನ್ನು ಸೇರಿಕೊಂಡಿರುವುದು ಸೀರಿಯಲ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇದನ್ನೂ ಓದಿ: Ram Charan: ರಾಮ್‌ಚರಣ್ ಕಡೆ ನುಗ್ಗಿದ ವ್ಯಕ್ತಿ; ಗಾಬರಿ ಆದ ಜಾನ್ವಿ ಕಪೂರ್, ವಿಡಿಯೋ ವೈರಲ್
ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಫ್ರೆಶ್ ಕಾಂಬಿನೇಷನ್ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ‘ಅಗ್ನಿಸಾಕ್ಷಿ’ ಬಳಿಕ ವಿಜಯ್ ಸೂರ್ಯ ಹಾಗೂ ‘ಪಾರು’ ನಂತರ ಮೋಕ್ಷಿತಾ ಪೈ ಅವರನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಕವಿತಾ ಗೌಡ ಮತ್ತು ಮೋಕ್ಷಿತಾ ಪೈ ಇಬ್ಬರೂ ಕೂಡ ‘ಜಗದ್ಧಾತ್ರಿ’ಯಲ್ಲಿ ನಟಿಸುತ್ತಿದ್ದಾರೆ. ಮೋಕ್ಷಿತಾ ನಾಯಕಿಯಾಗಿ ನಟಿಸಿದರೆ, ನಾಯಕನ ಅಕ್ಕನಾಗಿ ಕವಿತಾ ಗೌಡ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಸಹ ಧಾರಾವಾಹಿಯಲ್ಲಿ ಅತ್ಯಂತ ಮುಖ್ಯವಾದ ಪಾತ್ರವಾಗಿದೆ.
ಕಿರುತೆರೆಯಲ್ಲಿ ಮೋಡಿ ಮಾಡಿದ ಕವಿತಾ ಗೌಡ '' ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'' ಚಿತ್ರದ ಮೂಲಕ ನಾಯಕಿಯೂ ಆದರು. ಇದರ ನಡುವೆ ''ಬಿಗ್ ಬಾಸ್'' ಕನ್ನಡ ಆರನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಕೂಡ ಭಾಗವಹಿಸಿದರು.
ಇದನ್ನೂ ಓದಿ: Actor Yash: 24 ಕೋಟಿ ರೂ. ಮೌಲ್ಯದ ಜಮೀನು ಖರೀದಿಸಿದ ಯಶ್ ದಂಪತಿ; ಎಲ್ಲಿ?
ಆದರೆ, ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ ಕವಿತಾ ಗೌಡ, ''ಲಕ್ಷ್ಮೀ ಬಾರಮ್ಮ'' ಹೀರೋ ಚಂದನ್ ಗೌಡ ಮನ ಸೋತರು. 2021ರಲ್ಲಿ ಸಪ್ತಪದಿಯನ್ನು ತುಳಿದರು. 2024ರಲ್ಲಿ ತಾಯಿಯಾಗಿ ಬಡ್ತಿಯನ್ನು ಕೂಡ ಪಡೆದರು. ''ವಿದ್ಯಾ ವಿನಾಯಕ'' ಈ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ.