ಗಿಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿತ್ತು. ಆಂಕರ್ ಅನುಶ್ರೀ, ಹಾಸ್ಯ ಕಲಾವಿದರ ಜೊತೆ ಮಾತನಾಡ್ತಿದ್ದ ವಿಡಿಯೋ ಅದು. ಇದ್ರಲ್ಲಿ ಚಂದ್ರಪ್ರಭ, ಹಾಸ್ಯ ನಟಿ ನಯನಾ, ಜಗ್ಗಪ್ಪ ಹಾಗೂ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ, ಅನುಶ್ರೀ ಜೊತೆ ಮಾತನಾಡಿದ್ದಾರೆ. ಅನುಶ್ರೀ, ಗಿಲ್ಲಿ ನಟನಿಗೆ ಮದುವೆ ಆಗೋದು ಕಷ್ಟ ಇದೆ ಅಂತ ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಯೊಬ್ಬ ಕಲಾವಿದರೂ ನೋ ಎನ್ನುವ ಉತ್ತರ ನೀಡಿದ್ದರು. ಸಾಧ್ಯವೇ ಇಲ್ಲ ಎಂದ ನಯನಾ, ಕಾರಣ ವಿವರಿಸಿದ್ದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಶೋ ಮಾಡ್ಬಹುದು, ಆದ್ರೆ ಗಿಲ್ಲಿಯನ್ನು ಸಹಿಸಿಕೊಳ್ಳೋದು ಕಷ್ಟ. ಮದುವೆಯಾದ ಹುಡುಗಿ ಜೀವನ ಪೂರ್ತಿ ಹೇಗೆ ಸಹಿಸಿಕೊಳ್ತಾಳೆ. ನನ್ನಂಥವಳು ಸಿಕ್ಕಿದ್ರೆ ಫಸ್ಟ್ ನೈಟ್ ನಲ್ಲಿ ವಿಷ ಹಾಕಿ ಸಾಯಿಸ್ತೇನೆ ಅಂತ ನಯನಾ ಹೇಳಿದ್ದರು. ಅಷ್ಟೇ ಅಲ್ಲ ಜಗ್ಗಪ್ಪ ಮಾತಾಡಿರುವ ಬಗ್ಗೆ ಟ್ರೋಲ್ ಕೂಡ ಆಗಿದ್ದರು. ಈ ಬಗ್ಗೆ ವಿಶ್ವವಾಣಿ ಜೊತೆ ಮಾತನಾಡಿ ಕ್ಲಾರಿಟಿ ಕೊಟ್ಟಿದ್ದಾರೆ. ʼವಿಶ್ವವಾಣಿ ನಿರೂಪಕ ಸುಜಯ್ ರಾಜ್ ಚಿಟ್ ಚಾಟ್ ವೇಳೆ ಜಗ್ಗಪ್ಪ ಹೇಳಿದ್ದು ಹೀಗೆ.