ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Jaggesh: ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌! ಚಿತ್ರರಂಗದ ಬೆಂಬಲ ಇಲ್ಲ ಎಂದು ಪೋಸ್ಟ್‌

Piracy Post : ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್‌ ಪೋಸ್ಟ್ ಈ ರೀತಿ ಇದೆ.

ನಟ ಜಗ್ಗೇಶ್‌

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Actor Jaggesh) ಅವರು ಪೈರಸಿ (Piracy) ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ (piracy) app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗು ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್‌ ಪೋಸ್ಟ್ (Jaggesh Post) ಈ ರೀತಿ ಇದೆ.

ಋಣ ತೀರಿಸುವ ನನ್ನ ಯತ್ನ

ರಾಜ್ಯಸಭೆಯಲ್ಲಿ ಸಿನಿಮಾ piracy ಕಳ್ಳರ ಮಟ್ಟಹಾಕಲು ಶೂನ್ಯ ವೇಳೆಯಲ್ಲಿ ರಾಷ್ಟ್ರಸರ್ಕಾರವನ್ನು ಒತ್ತಾಯ ಮಾಡಿದ ಪ್ರತಿಫಲಕ್ಕೆ ರಾಷ್ಟ್ರಸರ್ಕಾರ ಒಪ್ಪಿಗೆ ಸೂಚಿಸಿ ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗು ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ.

ಇದನ್ನೂ ಓದಿ: Bigg Boss Kannada 12: ಎಂತಾ ಗೊತ್ತುಂಟಾ...? ರಕ್ಷಿತಾ ಆಟದಲ್ಲೂ ಸೈ, ಎಂಟರ್ಟೈನಮೆಂಟ್‌ಗೂ ಜೈ! ಹೀಗಿತ್ತು ಪುಟ್ಟಿ ಪಯಣ

ಬೆಂಬಲ ವ್ಯಕ್ತಪಡಿಸಲಿಲ್ಲ

ಚಿತ್ರರಂಗದ ಅನ್ನ 45 ವರ್ಷದಿಂದ ತಿಂದು ಬೆಳೆದ ನಾನು ಅದರ ಋಣ ತೀರಿಸುವ ನನ್ನ ಯತ್ನಕ್ಕೆ ಚಿತ್ರರಂಗದ ಯಾರೊಬ್ಬರೂ ಬೆಂಬಲ ವ್ಯಕ್ತಪಡಿಸಲಿಲ್ಲ (ಭಾಮಾಹರೀಶ್, ಬಣಕಾರ್, ಯೂಟೂಬ್ ಅನಿಲ್ ಯಾದವ್ ಗೆಳೆಯರು ಹಾಗು ಕೋಣ ನಿರ್ಮಾಪಕರ ಸಹಕಾರ ಹೊರತುಪಡಿಸಿ) ಎಂಬ ದುಃಖ ಕಾಡಿತು, ಆದರೂ ಪರವಾಗಿಲ್ಲ ನನ್ನ ಜೀವನದ ಪ್ರತಿ ಘಟ್ಟದಲ್ಲಿಯೂ ನಾನು ಏಕಾಂಗಿ ಹೋರಾಟಮಾಡಿ ನನ್ನ ಕನ್ನಡದ ಜನರ ಆಶೀರ್ವಾದದಿಂದ ಗಟ್ಟಿನೆಲೆ ಪಡೆದು ಕಂಬದಂತೆ ನಿಂತಿರುವೆ.

ಜಗ್ಗೇಶ್‌ ಪೋಸ್ಟ್‌



ಚಿತ್ರರಂಗದ ಉಳಿವಿಗೆ

ನನ್ನ ಕೊನೆ ಉಸಿರಿನವರೆಗೂ ಉತ್ತಮ ಕಾರ್ಯಕ್ಕೆ ರಾಯರ ಆಶೀರ್ವಾದ ಪಡೆದು ನುಗ್ಗಿ ಕಾರ್ಯಮಾಡಿ ದೇವರು ಹಾಗು ದೇವರ ರೂಪದ ಜನರು ಮೆಚ್ಚುವಂತೆ ಬಾಳುವೆ.ಹರಸಿ ಹಾರೈಸಿ ಕನ್ನಡ ಚಿತ್ರರಂಗದ ಉಳಿವಿಗೆ ಎಂದು ಬರೆದುಕೊಂಡಿದ್ದಾರೆ.

ಪೈರಸಿಯಿಂದಾಗಿ ಕನ್ನಡದ ಎಷ್ಟೋ ಸಿನಿಮಾಗಳಿಗೆ ತೊಂದರೆ ಆಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದ ‘ದಿ ಡೆವಿಲ್’ ಸಿನಿಮಾ ಪೈರಸಿ ಆಯಿತು. ಇದಾದ ಬಳಿಕ ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು.

ಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಈ ಹಿಂದೆ ಒಪ್ಪಿಸಿದ್ದರು. ಕೆಲವೇ ನಿಮಿಷಗಳಲ್ಲಿ ಪೈರಸಿ ಮಾಡುತ್ತಾರೆ. ಎಷ್ಟು ನೋಡುತ್ತಾ ಕೂರಲು ಸಾಧ್ಯವಿಲ್ಲ. ಪೈರಸಿ ಅನ್ನೋದು ಕೊಲೆ ಅಥವಾ ಬ್ಯಾಂಕ್‌ ದರೋಡೆಗೆ ಸಮ ಎಂದು ಜಗ್ಗೇಶ್ ಲೈವ್‌ ಬಂದು ಹೇಳಿದ್ದರು. ಸಿನಿಮಾಗಳನ್ನ ಕದಿಯೋರಿಗೆ ಶಿಕ್ಷೆ ಕೂಡ ಇದೆ.

ಇದನ್ನೂ ಓದಿ: Bigg Boss Kannada 12: ಮಾತಿನಲ್ಲೇ ಕೌಂಟರ್‌, ಡೈಲಾಗ್‌ನಲ್ಲಿ ಪಂಚಿಂಗ್ ಪಂಟರ್! ಮಾತಿನ ಮಲ್ಲ ಗಿಲ್ಲಿ ರೋಚಕ ಜರ್ನಿ

ಸಿನಿಮಾ ಕದಿಯೋರಿಗೆ 3 ವರ್ಷ ಜೈಲು ಆಗುತ್ತದೆ. ಅದನ್ನ ಬೇರೆಯವರಿಗೂ ಫಾರ್ವರ್ಡ್ ಮಾಡಿದರೆ ಆಯಿತು. ಅವರೂ ಒಳಗೆ ಹೋಗುತ್ತಾರೆ. ಹಾಗಾಗಿಯೇ ಸಿನಿಮಾಗಳನ್ನ ಕದಿಯಬೇಡಿ. ಹಾಗೆ ಬಂದಿರೋ ಚಿತ್ರದ ಲಿಂಕ್ ಅನ್ನು ಫಾರ್ವರ್ಡ್ ಮಾಡ್ಬೇಡಿ ಅಂತಲೂ ಜಗ್ಗೇಶ್ ಕೇಳಿಕೊಂಡಿದ್ದರು.

Yashaswi Devadiga

View all posts by this author