ʻನವರಸ ನಾಯಕʼ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ದಂಪತಿಗೆ ಇಂದು 42ನೇ ಮದುವೆ ವಾರ್ಷಿಕೋತ್ಸವ. 1984ರ ಮಾರ್ಚ್ 22ರಂದು ಈ ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿತ್ತು. ಅಂದು ಇವರ ಮದುವೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಈಗ ಇತಿಹಾಸ. ತಮ್ಮ ಮದುವೆ ವಾರ್ಷಿಕೋತ್ಸವ ದಿನದಂದು ಪತ್ನಿಗೆ ಶುಭ ಹಾರೈಸಿರುವ ಜಗ್ಗೇಶ್, ಜೊತೆಗೆ ಒಂದು ಪ್ರಸ್ತು ಸಮಾಜ ಎದುರಿಸುತ್ತಿರುವ ಒಂದು ವಿಚಾರವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"1984 ಮಾರ್ಚ್ 22 ಮದುವೆಯಾದ ದಿನ.. ಇಂದಿಗೆ 42ವರ್ಷ.. ಮದುವೆ ಆಗುವುದು ಮುಖ್ಯವಲ್ಲಾ, ಅನ್ಯೋನ್ಯವಾಗಿ ಇದ್ದುದ್ದರಲ್ಲೇ ಸುಖವಾಗಿ ಬಾಳೋದು ಜೀವನ ಗೆಲ್ಲೋದು ಮುಖ್ಯ. ಇಂದು ಪ್ರತಿ ಮನೆಗಳಲ್ಲಿ ಮದುವೆ ಆಗದ ಅನೇಕ ಹುಡುಗರು ಸಿಗುತ್ತಾರೆ. ಯಾಕೆ ಎಂದು ಪ್ರಶ್ನೆ ಕೇಳಿದಾಗ, ಅವರ ಉತ್ತರ ಕೇಳಿ ಗಾಬರಿಯಾಗುತ್ತೆ. ಕಾರಣ, ಹುಡುಗಿ ಹಾಗೂ ಅವರ ಮನೆಯವರು ಮದುವೆಗೆ ಹಾಕುವ ಕ್ಲಾಸ್‌ಗಳು"
Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್! ತಾತನನ್ನು ನೆನದು ಭಾವುಕ
ಹುಡುಗ ಸಿಟಿಯಲ್ಲಿ ಇರಬೇಕು
"ಹುಡುಗನಿಗೆ ಅಮ್ಮ ಇರಬಾರದು, ಮನೆಯಲ್ಲಿ ವಯಸ್ಸಾದವರು ಅಥವಾ ಖಾಯಿಲೆ ಇದ್ದವರು ಇರಬಾರದು. ಹುಡುಗನಿಗೆ ಸರ್ಕಾರಿ ಉದ್ಯೋಗ ಅಥವಾ ಲಕ್ಷದ ಮೇಲೆ ವರಮಾನ ಇರಬೇಕು. ಮದುವೆ ಆದಮೇಲೆ ಬೇರೆ ಮನೆ ಮಾಡಬೇಕು. ಹಳ್ಳಿಯಲ್ಲಿ ಹುಟ್ಟಿದರೂ ಹಳ್ಳಿಯ ಹುಡುಗನಿಗೆ ಹೆಣ್ಣು ನೀಡುವುದಿಲ್ಲಾ. ಒಟ್ಟಿನಲ್ಲಿ ಹುಡುಗ ಸಿಟಿಯಲ್ಲಿ ಇರಬೇಕು ಮತ್ತು ಸ್ವಂತ ಮನೆ ಕಡ್ಡಾಯ.. ಇಂದು ಮದುವೆಯ ವಯಸ್ಸು 36 ನಂತರ ಹುಡುಗ. 30ನಂತರ ಹುಡುಗಿ ಅಂತೆ... ಅದರಲ್ಲೂ ಎಲ್ಲದಕ್ಕೂ ಎಲ್ಲರ ಮೇಲೆ ಅನುಮಾನ. ಓ ದೇವರೆ ಎತ್ತ ಸಾಗುತ್ತಿದೆ ಮನುಷ್ಯರ ಚಿಂತನೆ?"
ʻಸರ್.. ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿʼ; ಅಂದು ರವಿಚಂದ್ರನ್ ಮಾಡಿದ್ದ ಸಹಾಯವನ್ನು ಸದಾ ನೆನೆಯುವ ನಟ ಜಗ್ಗೇಶ್!
ನನ್ನ ಮೇಲೆ ಇಟ್ಟ ನಂಬಿಕೆ ಕಾಪಾಡಿಕೊಂಡಿರುವೆ
"ನನ್ನ ಮಡದಿ ಪರಿಮಳ ಹಣವಂತಳು. ಆದರೂ ನನ್ನ ಆಯ್ಕೆ ಮಾಡಿಕೊಂಡು ದೃಢವಾಗಿ ನನ್ನ ನಂಬಿ ಬಂದಳು.. ನನ್ನ ಶಕ್ತಿಮೀರಿ ಅವಳು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಇಂದಿಗೂ ಕಾಪಾಡಿಕೊಂಡು ಬದುಕುತ್ತಿರುವೆ.. ಅವಳ ಎಲ್ಲಾ ಸಾಧನೆಗೆ ಭುಜ ನೀಡುವೆ. ಮದುವೆ ಲೆಕ್ಕ ಹಾಕಿ ಏನು ಸಿಗುತ್ತದೆ? ಏನು ಆಗುತ್ತದೆ? ಎಂದು ಆದವರು ವಿಚ್ಚೇದನ ಕಟಕಟೆಯಲ್ಲಿ"
ಜಗ್ಗೇಶ್ ಹಂಚಿಕೊಂಡಿರುವ ಪೋಸ್ಟ್
"ಮದುವೆ ಮನಗಳು ಒಪ್ಪಿ ಇದ್ದುದ್ದರಲ್ಲೇ ಸುಖಸಂಸಾರ ನಡೆಸುವವರು. ಇರುವಲ್ಲೇ ಸ್ವರ್ಗ ಸ್ಥಾಪನೆ. ಕಾಲಕ್ಕೆ ತಕ್ಕಂತೆ ಏನು ಆಗಬೇಕು ಎಂದು ಯುಗಗಳಿಂದ ನಿರ್ಣಯ ಆಗಿದೆ ಹಾಗೆ ಬಾಳಿದರೆ ಮನುಷ್ಯ ಜನ್ಮ ಸಾರ್ಥಕ. ನಾನು1984 ರಲ್ಲಿ ಹುಡುಗ ಇಂದು 2026 ಮೊಮ್ಮಗನಿಗೆ ತಾತ. ಅರ್ಥಮಾಡಿಕೊಂಡರೆ ಬದುಕು ಸುಂದರ. ರಾಯರಲ್ಲಿ ಬೇಡುವೆ. ಕರುನಾಡಿನ ನನ್ನ ಆತ್ಮೀಯ ಯುವಮಿತ್ರರಿಗೂ ಬೇಗ ಮದುವೆಯಾಗಿ ಅದ್ಭುತ ಸಂಸಾರ ಸುಖ ಸಿಗುವಂತಾಗಲಿ.. ಶುಭದಿನ" ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.