ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ (Elimination) ಬಚಾವ್ ಆಗಬೇಕಿದೆ. ಪತ್ರಗಳು ಮನೆಯೊಳಗೆ ಬರುತ್ತಿದೆ. ಇದೀಗ ಜಾಹ್ನವಿ ಹಾಗೂ ಅಶ್ವಿನಿ (Ashwini Gowda) ಅವರಿಗೂ ಪತ್ರ ಬಂದು ಮುಟ್ಟಿದೆ. ಇಬ್ಬರೂ ತಮ್ಮ ಮಕ್ಕಳ ಪತ್ರವನ್ನು ಓದುವ ತವಕದಲ್ಲಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯ ಪತ್ರಗಳನ್ನು ಓದಿ ನಾಮಿನೇಶನ್‌ನಿಂದ ಪಾರಾಗುವ ಟ್ವಿಸ್ಟ್ ಕೊಟ್ಟಿದ್ದಾರೆ.
ಮೊದಲಿಂದಲೂ ಬಿಗ್ ಬಾಸ್ ಸೀಸನ್ 12ರ ಮೊದಲಿಗೆ ಅತ್ಯಂತ ಸ್ನೇಹಿತರಾಗಿ ಇದ್ದವರು ಅಶ್ವಿನಿ ಹಾಗೂ ಜಾಹ್ನವಿ. ‘ಬಿಗ್ ಬಾಸ್’ ನೀಡಿದ ಒಂದೇ ಒಂದು ಟಾಸ್ಕ್‌ನಿಂದಾಗಿ (Task) ಇಬ್ಬರ ಮಧ್ಯೆ ಸ್ನೇಹ ಸಂಬಂಧ ಮುರಿದುಬಿದ್ದಿತ್ತು.
ನನ್ನ ಸ್ಟ್ರಾಟೆಜಿ ಬಳಸಿಕೊಂಡು ನಾನು ಇಲ್ಲಿಯವರೆಗೂ ನ್ಯಾಯಯುತವಾಗಿ ಆಟ ಆಡಿಕೊಂಡು ಬಂದಿದ್ದೇನೆ. ಜಾಹ್ನವಿ ಅವರು ಸ್ನೇಹ ಎಂಬ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡು ಎಲ್ಲೋ ಒಂದು ಚೂರು, ಅವರ ವ್ಯಕ್ತಿತ್ವವಲ್ಲದ ವ್ಯಕ್ತಿತ್ವವನ್ನ ಪ್ರೊಜೆಕ್ಟ್ ಮಾಡ್ತಿದ್ದಾರೆ ಅನಿಸುತ್ತದೆ ಎಂದು ಹಿಂದೆ ಅಶ್ವಿನಿ ಅವರು ಗರಂ ಆಗಿದ್ದರು.
ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!
ಗೊಂದಲಮಯ ಪರಿಸ್ಥಿತಿ
ಆದರೆ ಈಗ ವಾತಾವರಣ ಮತ್ತೆ ಬದಲಾಗಿದೆ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಪರಸ್ಪರ ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ. ತಮ್ಮ ಕುಟುಂಬದವರಿಂದ ಬಂದ ಪತ್ರವನ್ನು ಪಡೆಯಬೇಕೋ ಅಥವಾ ತ್ಯಾಗ ಮಾಡಬೇಕೋ ಎಂಬ ಗೊಂದಲಮಯ ಪರಿಸ್ಥಿತಿಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಈ ರೀತಿ ನಡೆದುಕೊಂಡಿದ್ದಾರೆ.
ಒಬ್ಬ ತಾಯಿ ಎಷ್ಟು ಮುಖ್ಯವೋ ಒಬ್ಬ ತಂದೆ ಅಷ್ಟೇ ಮುಖ್ಯ. ಇವತ್ತು ನನ್ನ ತಂದೆ ಬೇಕು ಅಂದರೂ ಅವರು ನನ್ನ ಜೊತೆ ಇಲ್ಲ ಎಂದು ಅಶ್ವಿನಿ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮಾಳು ಖಡಕ್ ಮಾತು!
ಸದ್ಯ ಫ್ಯಾಮಿಲಿಗಳಿಂದ ಪತ್ರಗಳು ಮನೆಯೊಳಗೆ ಬರುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಈ ಮನೆಗೆ ಆಗಮಿಸಿದ್ದಾರೆ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದರು. ಇಷ್ಟೂ ದಿನ ಸೈಲೆಂಟ್ ಆಗಿರುತ್ತಿದ್ದ ಮಾಳು ಅವರು ಒಂದು ಕ್ಷಣ ಅಬ್ಬರಿಸಿದ್ದಾರೆ.ಜನರ ಎದುರಿನಲ್ಲಿ ಮಾಳು ನಿಪನಾಳ ಖಡಕ್ ಆಗಿ ಮಾತನಾಡಿದ್ದಾರೆ.
ಇಷ್ಟೂ ದಿನ ಸೈಲೆಂಟ್ ಆಗಿರುತ್ತಿದ್ದ ಮಾಳು ಅವರು ಒಂದು ಕ್ಷಣ ಅಬ್ಬರಿಸಿದ್ದಾರೆ. . ಮುಂದಿನ ವಾರದ ಕ್ಯಾಪ್ಟನ್ ಯಾರಾಗಬೇಕು ಎಂಬುದು ನಿರ್ಧರಿಸಲು ಜನರು ವೋಟ್ ಮಾಡಲು ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಜನರ ಎದುರಿನಲ್ಲಿ ಮಾಳು ನಿಪನಾಳ ಖಡಕ್ ಆಗಿ ಮಾತನಾಡಿದ್ದಾರೆ.
ಮಾಳು ಸ್ಟ್ಯಾಂಡ್
ಬಂದ ದಿನದಿಂದ ಮಾಳು ಸ್ಟ್ಯಾಂಡ್ ತೆಗೆದುಕೊಳ್ಳಲ್ಲ. ಯಾಕೆಗೆ ಜಗಳ ಮಾಡ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಜಗಳಕ್ಕೆ ಸ್ಟ್ಯಾಂಡ್ ತೆಗೆದುಕೊಂಡರೇ ಹುಚ್ಚು ಹಿಡಿಯೋದು ಗ್ಯಾರಂಟಿ. ಕ್ಯಾಪ್ಟನ್ ಆಗುತ್ತೇನೆ. ಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರ ಮಾತು ಕೇಳಿ ವೀಕ್ಷಕರಿಗೆ ಖುಷಿ ಆಗಿದೆ.
ಇದನ್ನೂ ಓದಿ: BBK 12: ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್; ಮನೆಯ ಪತ್ರ ನುಚ್ಚುನೂರು!
ಈ ಮನೆಗೆ ಬಂದಾಗಿನಿಂದ ಮಾಳು ನಿಪನಾಳ ಅವರು ಅಷ್ಟು ಕಾಣಿಸಿಕೊಂಡಿಲ್ಲ ಎಂದು ಅಲ್ಲಿರುವ ಸ್ಪರ್ಧಿಗಳೇ ಆರೋಪ ಮಾಡುತ್ತಾರೆ. ಇನ್ನೊಂದು ಕಡೆ ಮಾಳು ನಿಪನಾಳ ಅವರು ಮನೆಗೆ ಹೋಗಬೇಕು ಎಂದು ಕೂಡ ಹೇಳಿದ್ದರು.