ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!

ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು ಮನೆಯೊಳಗೆ ಬರುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಈ ಮನೆಗೆ ಆಗಮಿಸಿದ್ದಾರೆ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದರು. ಇಷ್ಟೂ ದಿನ ಸೈಲೆಂಟ್‌ ಆಗಿರುತ್ತಿದ್ದ ಮಾಳು ಅವರು ಒಂದು ಕ್ಷಣ ಅಬ್ಬರಿಸಿದ್ದಾರೆ.ಜನರ ಎದುರಿನಲ್ಲಿ ಮಾಳು ನಿಪನಾಳ ಖಡಕ್ ಆಗಿ ಮಾತನಾಡಿದ್ದಾರೆ.

BBK 12: ಕ್ಯಾಪ್ಟನ್ ಓಟಕ್ಕೆ ಮಾಳು ಖಡಕ್ ಮಾತು!

-

Yashaswi Devadiga
Yashaswi Devadiga Nov 6, 2025 5:27 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ (Elimination) ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು ಮನೆಯೊಳಗೆ ಬರುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಈ ಮನೆಗೆ ಆಗಮಿಸಿದ್ದಾರೆ ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದರು.

ಇಷ್ಟೂ ದಿನ ಸೈಲೆಂಟ್‌ ಆಗಿರುತ್ತಿದ್ದ ಮಾಳು ಅವರು ಒಂದು ಕ್ಷಣ ಅಬ್ಬರಿಸಿದ್ದಾರೆ. . ಮುಂದಿನ ವಾರದ ಕ್ಯಾಪ್ಟನ್ ಯಾರಾಗಬೇಕು ಎಂಬುದು ನಿರ್ಧರಿಸಲು ಜನರು ವೋಟ್ ಮಾಡಲು ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಜನರ ಎದುರಿನಲ್ಲಿ ಮಾಳು ನಿಪನಾಳ ಖಡಕ್ ಆಗಿ ಮಾತನಾಡಿದ್ದಾರೆ.

ಮಾಳು ಸ್ಟ್ಯಾಂಡ್‌

ಬಂದ ದಿನದಿಂದ ಮಾಳು ಸ್ಟ್ಯಾಂಡ್‌ ತೆಗೆದುಕೊಳ್ಳಲ್ಲ. ಯಾಕೆಗೆ ಜಗಳ ಮಾಡ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಜಗಳಕ್ಕೆ ಸ್ಟ್ಯಾಂಡ್‌ ತೆಗೆದುಕೊಂಡರೇ ಹುಚ್ಚು ಹಿಡಿಯೋದು ಗ್ಯಾರಂಟಿ. ಕ್ಯಾಪ್ಟನ್ ಆಗುತ್ತೇನೆ. ಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರ ಮಾತು ಕೇಳಿ ವೀಕ್ಷಕರಿಗೆ ಖುಷಿ ಆಗಿದೆ.

ಈ ಮನೆಗೆ ಬಂದಾಗಿನಿಂದ ಮಾಳು ನಿಪನಾಳ ಅವರು ಅಷ್ಟು ಕಾಣಿಸಿಕೊಂಡಿಲ್ಲ ಎಂದು ಅಲ್ಲಿರುವ ಸ್ಪರ್ಧಿಗಳೇ ಆರೋಪ ಮಾಡುತ್ತಾರೆ. ಇನ್ನೊಂದು ಕಡೆ ಮಾಳು ನಿಪನಾಳ ಅವರು ಮನೆಗೆ ಹೋಗಬೇಕು ಎಂದು ಕೂಡ ಹೇಳಿದ್ದರು.

ಇದನ್ನೂ ಓದಿ: BBK 12: ʻನನ್ನ ವ್ಯಕ್ತಿತ್ವಕ್ಕೆ ಅವಮಾನ ಆಗೋ ರೀತಿ ಮಾಡಿದ್ದೇ ಅವಳುʼ ; ರಕ್ಷಿತಾಗೆ ಲೆಟರ್ ಸಿಗದಂತೆ ಮಾಡ್ತಾರಾ ಅಶ್ವಿನಿ?

ಇದನ್ನೂ ಓದಿ: Afro Tapaang: ಗಿಲ್ಲಿಯ ʻದೊಡ್ಡವ್ವʼಸಾಂಗ್‌ಗೆ ಶಿವಣ್ಣ, ರಾಜ್ ಬಿ ಶೆಟ್ಟಿ, ಉಪೇಂದ್ರ ಸ್ಟೆಪ್ಸ್ ಹಾಕಿದ್ರೆ ಹೇಗಿರತ್ತೆ? ಟ್ರೆಂಡ್‌ ಆಗ್ತಿದೆ AFRO ಟಪಾಂಗ್‌!

ಮಾಳು ಭಾವುಕ ಕ್ಷಣ

'ಬಿಗ್ ಬಾಸ್' ಮನೆಯೊಳಗೆ ಈ ಬಾರಿ ಸೂರಜ್‌, ಸ್ಪಂದನಾ, ಧ್ರುವಂತ್, ಚಂದ್ರಪ್ರಭಗೆ ಪತ್ರಗಳನ್ನು ಓದುವ ಅವಕಾಶ ಮತ್ತು ನಾಮಿನೇಷನ್‌ನಿಂದ ಬಚಾವ್ ಆಗುವ ಚಾನ್ಸ್ ಎರಡೂ ಮಿಸ್ ಆಗಿದೆ. ರಿಷಾ ಮಾತ್ರ ತಮ್ಮ ಪಾತ್ರವನ್ನು ತೆಗೆದುಕೊಂಡು, ಸ್ಪಂದನಾ ಮತ್ತು ಸೂರಜ್‌ಗೆ ಬಂದಿದ್ದ ಪತ್ರಗಳನ್ನು ಹರಿದು ಹಾಕಿದರು.

ಮತ್ತೊಂದೆಡೆ ಬಿಗ್ ಬಾಸ್ ಚಂದ್ರಪ್ರಭ, ಧ್ರುವಂತ್ ಮತ್ತು ಮಾಳು ನಿಪನಾಳ್ ಅವರಿಗೆ ಪತ್ರಗಳನ್ನು ಕಳುಹಿಸಿದರು. ಚಂದ್ರಪ್ರಭ, ಧ್ರುವಂತ್ ಮತ್ತು ಮಾಳು ತುಂಬಾ ಹೊತ್ತು ಚರ್ಚೆ ಮಾಡಿ, ಅಂತಿಮವಾಗಿ ಮಾಳು ಹೆಸರನ್ನು ಫೈನಲ್ ಮಾಡಲಾಯಿತು. ಕುಟುಂಬದವರು ಬರೆದ ಪತ್ರ ಮಾಳುಗೆ ಸಿಕ್ಕಿತು ಮತ್ತು ನಾಮಿನೇಷನ್‌ನಿಂದ ಬಚಾವ್ ಆದರು. ಚಂದ್ರಪ್ರಭ ಅವರ ಕಾಲು ಮುಟ್ಟಿ ಕ್ಷಮೆ ಕೇಳುವುದಕ್ಕೂ ಮುಂದಾದರು.

ಇದನ್ನೂ ಓದಿ: Kendall Jenner: ಬೀಚ್‌ನಲ್ಲಿ ನಗ್ನವಾಗಿಯೇ ಫೋಟೋಗೆ ಪೋಸ್‌ ಕೊಟ್ಟ ಮಾಡೆಲ್‌!

ರಕ್ಷಿತಾಗೆ ಲೆಟರ್ ಸಿಗದಂತೆ ಮಾಡ್ತಾರಾ ಅಶ್ವಿನಿ?

ರಕ್ಷಿತಾ ಹಾಗೂ ರಾಶಿಕಾ ಅವರಿಗೂ ಮನೆಯವರಿಂದ ಪತ್ರ ಬಂದಿದೆ. ಆದರೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಇಟ್ಟಿದ್ದಾರೆ. ಮನೆಯವರ ಒಮ್ಮತ ನಿರ್ಧಾರ ಮಾಡಿ, ಒಬ್ಬರಿಗೆ ಲೆಟರ್‌ ನೀಡುವಂತೆ ಆದೇಶಿಸಿದೆ. ಆದರೆ ಪ್ರೋಮೋ ನೋಡಿದರೆ ಬಹುತೇಕರು ರಾಶಿಕಾ ಎಂದು ಹೇಳಿದ್ದಾರೆ. ಆದರೆ ರಘು ಅವರು ರಕ್ಷಿತಾ ಅವರಿಗೆ ಸಪೋರ್ಟ್‌ ಮಾಡಿದ್ದಾರೆ. ಇದರಲ್ಲಿ ಅಶ್ವಿನಿ ಗೌಡ ಅವರು ಮತ್ತೆ ರಕ್ಷಿತಾ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ.