ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವ್ಯಾಲೆಂಟೈನ್ಸ್ ಡೇಯಂದು ಜೈಲಿನಿಂದಲೇ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಐಷಾರಾಮಿ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌ ಚಂದ್ರಶೇಖರ್‌

Sukesh Chandrashekhar: ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಪ್ರೇಯಸಿ, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಫೆಬ್ರವರಿ 14ರಂದು ಐಷಾರಾಮಿ ಹೆಲಿಕಾಫ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ʼಬೇಬಿ ಬೊಮ್ಮ ಜಾಕ್ವೆಲ್‌ʼ ಎಂದು ಕರೆದು ಭಾವನಾತ್ಮಕ ಪತ್ರ ಬರೆದಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ ನೀಡಿದ ಹೆಲಿಕಾಫ್ಟರ್‌

ದೆಹಲಿ, ಫೆ. 14: 200 ಕೋಟಿ ರುಪಾಯಿ ಸುಲಿಗೆ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜೈಲಿನಲ್ಲಿದ್ದರೂ ಈ ಬಾರಿಯ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತಾವು ಸೆರೆವಾಸ ಅನುಭವಿಸುತ್ತಿದ್ದರೂ ಪ್ರೇಯಸಿ, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ (Jacqueline Fernandez) ದುಬಾರಿ ಉಡುಗೊರೆ ನೀಡಿದ್ದಾರೆ. ಜತೆಗೆ ಪ್ರೇಮ ಸಂದೇಶವನ್ನು ಬರೆದುಕೊಂಡಿದ್ದಾರೆ. ಹೌದು, ಸುಕೇಶ್ ಚಂದ್ರಶೇಖರ್ ಫೆಬ್ರವರಿ 14ರಂದು ಐಷಾರಾಮಿ ಹೆಲಿಕಾಫ್ಟರ್‌ ಅನ್ನು ಜಾಕ್ವೆಲಿನ್‌ಗೆ ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ʼಬೇಬಿ ಬೊಮ್ಮ ಜಾಕ್ವೆಲ್‌ʼ ಎಂದು ಕರೆದು ಪತ್ರ ಬರೆದಿದ್ದಾರೆ.

ಏರ್‌ಬಸ್‌ ಲಕ್ಷುರಿ ಹೆಲಿಕಾಫ್ಟರ್‌ ಉಡುಗೊರೆಯಾಗಿ ನೀಡಲಾಗಿದೆ. ಜತೆಗೆ ಭಾವನಾತ್ಮಕ ಪತ್ರವನ್ನು 2026ರ ಫೆಬ್ರವರಿ 14ರಂದು ಬರೆದಿರುವುದು ಕಂಡು ಬಂದಿದೆ. ಸದ್ಯ ಈ ಲೆಟರ್‌ ಮತ್ತು ನೀಡಿರುವ ದುಬಾರಿ ಉಡುಗೊರೆಯ ಸುದ್ದಿ ಸಂಚಲನ ಸೃಷ್ಟಿಸಿದೆ.

ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ದುಬಾರಿ ಉಡುಗೊರೆ ನೀಡಿದ ಸುಕೇಶ್‌:



ಲೆಟರ್‌ನಲ್ಲಿ ಏನಿದೆ?

ʼʼನನ್ನ ಬೇಬಿ ಬೊಮ್ಮ ಜಾಕ್ವೆಲಿನ್‌ʼʼ ಎಂದು ಸುಕೇಶ್‌ ಪತ್ರ ಆರಂಭವಿಸಿದ್ದಾರೆ. ʼʼನನ್ನ ಪ್ರತಿ ಹೃದಯ ಮಿಡಿತ ವಿಶೇಷವಾಗಿ ಇಂದು ನಮ್ಮಿಬ್ಬರ ನಡುವಿನ ಅಂತರವನ್ನು ನೆನಪಿಸುತ್ತದೆ. ನಮ್ಮ ಪ್ರೀತಿಗೆ ಯಾವುದೇ ಘಟನೆ ತಡೆ ಒಡ್ಡಲು ಸಾಧ್ಯವಿಲ್ಲʼʼ ಎಂದಿದ್ದಾರೆ. ಜತೆಗೆ ಜಾಕ್ವೆಲಿನ್‌ ತನ್ನಿಂದ ಎದುರಿಸುತ್ತಿರುವ ಒತ್ತಡ, ಅವಮಾನ ಮತ್ತು ಕಾನೂನು ತೊಡಕಿಗಾಗಿ ಕ್ಷಮೆ ಕೋರಿದ್ದಾರೆ. ʼʼನನ್ನನ್ನು ಪ್ರೀತಿಸುವ ಕಾರಣಕ್ಕೆ ನೀನು ಕಾನೂನು ತೊಡಕು ಎದುರಿಸುವಂತಾಗಿದೆ. ಇದಕ್ಕಾಗಿ ಹೃದಯಾಂತರಾಳದಿಂದ ಕ್ಷಮೆ ಕೋರುತ್ತೇನೆ. ಸದ್ಯದಲ್ಲೇ ಪರಿಸ್ಥಿತಿ ತಹಬದಿಗೆ ಬರಲಿದೆʼʼ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಜೈಲಿನಿಂದಲೇ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಬಿಡ್‌ ಸಲ್ಲಿಸಿದ ಸುಕೇಶ್; ನಟಿ ಜಾಕ್ವೆಲಿನ್‌ಗೆ ಉಡುಗೊರೆ ನೀಡಲು ನಿರ್ಧಾರ

ಐಷಾರಾಮಿ ಹೆಲಿಕಾಫ್ಟರ್‌

ಸುಕೇಶ್‌ ಚಂದ್ರಶೇಖರ್‌ ವಾಲೈಂಟೈನ್‌ ಡೇ ವಿಶೇಷ ಉಡುಗೊರೆ ಬಗ್ಗೆಯೂ ಬರೆದುಕೊಂಡಿದ್ದಾರೆ. ಏರ್‌ಬಸ್‌-ಎಚ್‌ ಸೀರೀಸ್‌ನ ಹೆಲಿಕಾಫ್ಟರ್‌ ನೀಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ʼʼಬೇಬಿ ನಿನಗಾಗಿ ವಿಶೇಷ ಉಡುಗೊರೆಯೊಂದನ್ನು ವ್ಯವಸ್ಥೆ ಮಾಡಿದ್ದೇನೆ. ಅದುವೇ ಏರ್‌ಬಸ್‌-ಎಚ್‌ ಸೀರೀಸ್‌ನ ಹೆಲಿಕಾಫ್ಟರ್‌. ನಿನಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಇಂಟೀರಿಯರ್‌ ವ್ಯವಸ್ಥೆಯನ್ನೊಳಗೊಂಡ ಐಷಾರಾಮಿ ಹೆಲಿಕಾಫ್ಟರ್‌ ಇದುʼʼ ಎಂದು ಹೇಳಿದ್ದಾರೆ.

ಹೆಲಿಕಾಪ್ಟರ್‌ನ ಒಳಭಾಗ ಮತ್ತು ಹೊರಭಾಗದಲ್ಲಿ ಜಾಕ್ವೆಲಿನ್‌ ಮೊದಲಾಕ್ಷರಗಳನ್ನು (JF) ಕೆತ್ತಲಾಗಿದೆ. ದೂರದ ಸ್ಥಳಗಳಲ್ಲಿ ನಡೆಯುವ ಚಿತ್ರೀಕರಣಕ್ಕೆ ತೆರಳಲು, ಮುಂಬೈಯ ಟ್ರಾಫಿಕ್‌ ಕಿರಿಕಿರಿಯಿಂದ ಪಾರಾಗಲು ಈ ಹೆಲಿಕಾಫ್ಟರ್‌ ನೆರವಾಗುತ್ತದೆ ಎಂದೂ ಹೇಳಿದ್ದಾರೆ. ಸುಕೇಶ್‌ ಚಂದ್ರಶೇಖರ್ ಹೆಲಿಕಾಪ್ಟರ್ ಅನ್ನು "ನನ್ನ ಪರಿಶ್ರಮದಿಂದ ಖರೀದಿಸಲಾಗಿದೆ. ಯಾವುದೋ ಅಪರಾಧದ ಹಣದಿಂದಲ್ಲʼʼ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯೆ ನೀಡದ ಜಾಕ್ವೆಲಿನ್‌

ಅದಾಗ್ಯೂ ಈ ಪತ್ರ ಮತ್ತು ದುಬಾರಿ ಉಡುಗೊರೆಗೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸುಕೇಶ್‌ ಚಂದ್ರಶೇಖರ್ ಈ ಹಿಂದೆಯೂ ಜೈಲಿನಿಂದ ಜಾಕ್ವೆಲಿನ್‌ಗೆ ಅನೇಕ ಪತ್ರಗಳನ್ನು ಬರೆದಿದ್ದಾರೆ. ತನ್ನ ವಿರುದ್ಧದ ಪ್ರಕರಣಗಳಲ್ಲಿ ಯಾವುದೇ ಹುರುಳಿಲ್ಲ ಎಂದೂ ಪದೇ ಪದೆ ಉಚ್ಚರಿಸುತ್ತಲೇ ಬಂದಿದ್ದಾರೆ. ಹಲವು ಕೋಟಿ ರುಪಾಯಿ ಅವ್ಯವಹಾರದ ಆರೋಪದ ಮೇಲೆ 2015ರಿಂದ ಅವರು ಜೈಲಿನಲ್ಲಿದ್ದಾರೆ.

ಮನರಂಜನೆ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author