ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CM Vijay: ʻಜನ ನಾಯಗನ್ʼ ಸಿನಿಮಾಗೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ! ಅಸಲಿ ಸತ್ಯ ಇಲ್ಲಿದೆ

ʻದಳಪತಿʼ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದೆ ಎಂಬ ವರದಿಗಳನ್ನು ಚಿತ್ರತಂಡ ನಿರಾಕರಿಸಿದೆ. ಸೆನ್ಸಾರ್‌ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿರುವ ಚಿತ್ರತಂಡ, ನಂತರ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ. ಮತ್ತೊಂದೆಡೆ, ಸೆನ್ಸಾರ್ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದ ಈ ಸಿನಿಮಾವನ್ನು 1.20 ಕೋಟಿಗೂ ಅಧಿಕ ಮಂದಿ ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ತಮಿಳುನಾಡು ಸಿಎಂ ʻದಳಪತಿʼ ವಿಜಯ್‌ ಅವರ 'ಜನ ನಾಯಗನ್' ಸಿನಿಮಾಕ್ಕೆ ಸೆನ್ಸಾರ್‌ ಆಗಿದ್ದು, ಈಗಾಗಲೇ ಎ ಪ್ರಮಾಣ ಪತ್ರ ಸಿಕ್ಕಿದೆ ಎಂಬ ವದಂತಿ ಜೋರಾಗಿ ಹಬ್ಬಿದೆ. ಸಿನಿಮಾಗೆ ಸೆನ್ಸಾರ್‌ ಪ್ರಕ್ರಿಯೆ ಮುಗಿದಿರುವುದರಿಂದ ಜುಲೈನಲ್ಲೇ ತೆರೆಗೆ ಬರುವುದು ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈಗ ಕೇಳಿಬಂದಿರುವ ಆಪ್ತ ಮೂಲಗಳ ಮಾಹಿತಿ ಪ್ರಕಾರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಇನ್ನೂ ಸೆನ್ಸಾರ್‌ ಪ್ರಮಾಣ ಪತ್ರ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಅದೆಲ್ಲಾ ಬರೀ ವದಂತಿ!

ಹೌದು, ʻಜನ ನಾಯಗನ್‌ʼ ಚಿತ್ರತಂಡವು ಇನ್ನೂ ಸೆನ್ಸಾರ್ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದ್ದು, ಮುಂದಿನ ವಾರದೊಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ನಿರೀಕ್ಷೆಯಿದೆ ಎಂದು ಚಿತ್ರಕ್ಕೆ ಹತ್ತಿರವಿರುವ ಮೂಲವೊಂದು ತಿಳಿಸಿದೆ. "ನಾವು ಇನ್ನೂ ಸೆನ್ಸಾರ್‌ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೇವೆ, ಅದು ಮುಂದಿನ ವಾರದೊಳಗೆ ಮುಗಿಯುವ ನಿರೀಕ್ಷೆಯಿದೆ. ಸದ್ಯಕ್ಕೆ ಚಿತ್ರಕ್ಕೆ 'ಎ' ಪ್ರಮಾಣಪತ್ರ ಸಿಕ್ಕಿದೆ ಎಂಬ ಸುದ್ದಿಗಳೆಲ್ಲವೂ ಕೇವಲ ವದಂತಿಗಳಷ್ಟೇ. ನಮಗೆ ಶೀಘ್ರದಲ್ಲೇ ಪ್ರಮಾಣಪತ್ರ ಸಿಗುವ ಭರವಸೆ ಇದೆ, ಆ ನಂತರ ನಾವು ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ" ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

CM vijay: 'ಜನ ನಾಯಗನ್' ಸಿನಿಮಾ ಬಿಡುಗಡೆ ಯಾವಾಗ? ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಎಚ್. ವಿನೋದ್

ಜುಲೈ 16ಕ್ಕೆ ಬಿಡುಗಡೆ ಎನ್ನಲಾಗಿತ್ತು!

'ಜನ ನಾಯಗನ್' ಚಿತ್ರಕ್ಕೆ ಕೆಲವು ಕಟ್‌ಗಳನ್ನು ಸೂಚಿಸಿ, 'ಎ' ಪ್ರಮಾಣಪತ್ರವನ್ನು ಸಿಬಿಎಫ್‌ಸಿ ನೀಡಿದೆ ಎಂದು ವರದಿ ಆಗಿತ್ತು. ನಿರ್ಮಾಪಕರು ಚಿತ್ರವನ್ನು ಜುಲೈ 16 ರಂದು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಒಂದು ವೇಳೆ ಈ ದಿನಾಂಕ ಬದಲಾದರೆ, ಜುಲೈ 24 ರಂದು ರಿಲೀಸ್‌ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ಜುಲೈ 31 ರಂದು ರಿಲೀಸ್‌ ಮಾಡುವ ಬಗ್ಗೆಯೂ ಚರ್ಚೆಗಳು ಜಾರಿಯಲ್ಲಿವೆ. ಆದರೆ, ಅದೇ ದಿನ ವಿಜಯ್‌ ಅವರ ಮಗ ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರವು ರಿಲೀಸ್‌ ಆಗುತ್ತಿರುವುದರಿಂದ ಅಂತಿಮ ನಿರ್ಧಾರ ಆಗಿಲ್ಲ ಎಂದೆಲ್ಲಾ ಸುದ್ದಿ ಹಬ್ಬಿಸಲಾಗಿತ್ತು.

ಪೈರಸಿ ಕಾಪಿಯ ಭರ್ಜರಿ ವೀಕ್ಷಣೆ

ಅಂದಹಾಗೆ, 'ಜನ ನಾಯಗನ್' ಚಿತ್ರವು ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಮೊದಲೇ‌ ಲೀಕ್‌ ಆಗಿತ್ತು. ಏಪ್ರಿಲ್ 9 ರಂದು ಆನ್‌ಲೈನ್‌ನಲ್ಲಿ 'ಜನ ನಾಯಗನ್' ಲೀಕ್‌ ಆಗಿದ್ದು, ಬರೋಬ್ಬರಿ 1.20 ಕೋಟಿ ಮಂದಿ ಈ ಸಿನಿಮಾವನ್ನು ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. 'ಜನ ನಾಯಗನ್' ಸಿನಿಮಾವನ್ನು ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಆರೋಪಿಗಳನ್ನು ಆರೆಸ್ಟ್‌ ಮಾಲಾಗಿದೆ.

ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಎಚ್.‌ ವಿನೋದ್‌ ನಿರ್ದೇಶಿಸಿದ್ದು, ತೆಲುಗಿನ ಭಗವಂತ್ ಕೇಸರಿ ಚಿತ್ರವನ್ನುಸ್ಪೂರ್ತಿಯಾಗಿಟ್ಟುಕೊಂಡು, ಜನ ನಾಯಗನ್‌ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆಯಂತೆ. ಅನಿರುದ್ಧ್‌ ರವಿಚಂದರ್‌ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.