ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

John Abraham: ಜಾನ್ ಅಬ್ರಾಹಂ ನೋಡಿ ಫ್ಯಾನ್ಸ್ ಶಾಕ್ ! ಆರೋಗ್ಯದ ಬಗ್ಗೆ ನೆಟ್ಟಿಗರ ಕಮೆಂಟ್‌

John Abraham New Look: ನಟ ಜಾನ್ ಅಬ್ರಹಾಂ ಅವರ ಇತ್ತೀಚಿನ ಕ್ಲೀನ್-ಶೇವ್‌ನಲ್ಲಿ ಕಂಡಿದ್ದಾರೆ. ನಟನ ಈ ಲುಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಸರಳವಾದ ಕಪ್ಪು ಟಿ-ಶರ್ಟ್ ಧರಿಸಿ ತಮ್ಮ ತಂಡದೊಂದಿಗೆ ನಗುತ್ತಿರುವ ನಟನ ಹೊಸ ಫೋಟೋಗಳು ಕಂಡು ಅಭಿಮಾನಿಗಳು ಶಾಕ್‌ ಕೂಡ ಆಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿದ್ದಾರೆ ನಟ. ಸಿನಿಮಾಗಳ ಮೂಲಕ ಅಬ್ಬರಿಸಿದ ಜಾನ್ ಅಬ್ರಾಹಂ ನಿಜಕ್ಕೂ ಇವರೇನಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಜಾನ್ ಅಬ್ರಾಹಂ

ನಟ ಜಾನ್ ಅಬ್ರಹಾಂ (John Abraham) ಅವರ ಇತ್ತೀಚಿನ ಕ್ಲೀನ್-ಶೇವ್‌ನಲ್ಲಿ (Clean Shave) ಕಂಡಿದ್ದಾರೆ. ನಟನ ಈ ಲುಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಸರಳವಾದ ಕಪ್ಪು ಟಿ-ಶರ್ಟ್ (Black Shirt) ಧರಿಸಿ ತಮ್ಮ ತಂಡದೊಂದಿಗೆ ನಗುತ್ತಿರುವ ನಟನ ಹೊಸ ಫೋಟೋಗಳು ಕಂಡು ಅಭಿಮಾನಿಗಳು ಶಾಕ್‌ ಕೂಡ ಆಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿದ್ದಾರೆ ನಟ. ಸಿನಿಮಾಗಳ ಮೂಲಕ ಅಬ್ಬರಿಸಿದ ಜಾನ್ ಅಬ್ರಾಹಂ ನಿಜಕ್ಕೂ ಇವರೇನಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಜಾನ್ ಅಬ್ರಾಹಂ ಅವರ ಆರೋಗ್ಯದಲ್ಲಿ (Health) ಏನಾದರೂ ಸಮಸ್ಯೆ ಉಂಟಾಗಿರಬಹುದಾ ಅಂತ ನೆಟ್ಟಿಗರು ಕಮೆಂಟ್‌ ಕೂಡ ಮಾಡುತ್ತಿದ್ದಾರೆ.

ಟ್ರೇಡ್‌ಮಾರ್ಕ್ ಲುಕ್‌ನಲ್ಲಿನ ಬದಲಾವಣೆ

ಜಾನ್ ಅಬ್ರಾಹಂ ಅವರು ಇತ್ತೀಚೆಗೆ ತಮ್ಮ ತಂಡದ ಸದಸ್ಯರ ಜೊತೆ ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಕ್ಲೀನ್ ಶೇವ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಅವರ ಟ್ರೇಡ್‌ಮಾರ್ಕ್ ಲುಕ್‌ನಲ್ಲಿನ ಬದಲಾವಣೆಗೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Shruti Haasan: ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್‌ ಪೋಸ್ಟರ್ ಔಟ್‌

ಅಭಿಮಾನಿಗಳಲ್ಲಿ ಪ್ರಶ್ನೆ

"ಕೇವಲ ಸಸ್ಯಾಹಾರಿ ಆಹಾರದ ಫಲಿತಾಂಶ " ಎಂದು ಬರೆದರೆ, ಇನ್ನೊಬ್ಬರು, ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ, ಫಿಟ್ ಆಗಿದ್ದಾರೆ ಮತ್ತು ಅವರ ವಯಸ್ಸಿಗೆ ನೈಸರ್ಗಿಕರಾಗಿದ್ದಾರೆ. ಎಂದು ಬರೆದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾನ್ ಅಬ್ರಾಹಂ ಅವರಿಗೆ ಈ ರೀತಿ ಆಗಿರಬಹುದಾ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

53ನೇ ವಯಸ್ಸಿನಲ್ಲಿ ಅನೇಕ ಹೀರೋಗಳು ತುಂಬಾ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಜಾನ್ ಅಬ್ರಾಹಂ ಅವರು ಈ ರೀತಿ ಬದಲಾಗಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.

ಸಿನಿಮಾಗಳಲ್ಲಿ ನಟ ಬ್ಯುಸಿ

ಏತನ್ಮಧ್ಯೆ, ಕೆಲಸದ ಮುಂಭಾಗದಲ್ಲಿ, ಜಾನ್ ಅಬ್ರಹಾಂ ಇತ್ತೀಚೆಗೆ ಆಕ್ಷನ್ ಥ್ರಿಲ್ಲರ್ ಟೆಹ್ರಾನ್‌ನಲ್ಲಿ ವಿಶೇಷ ಅಧಿಕಾರಿ ರಾಜೀವ್ ಕುಮಾರ್ ಪಾತ್ರವನ್ನು ನಿರ್ವಹಿಸಿದರು. ಅರುಣ್ ಗೋಪಾಲನ್ ನಿರ್ದೇಶಿಸಿದ ಮತ್ತು 2025 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ, 2012 ರ ದೆಹಲಿ ಬಾಂಬ್ ದಾಳಿಯ ನಂತರ ಸೇಡು ತೀರಿಸಿಕೊಳ್ಳುವ ನಿರೂಪಣೆಯಲ್ಲಿ ಅಬ್ರಹಾಂ ಕಾಣಿಸಿಕೊಂಡಿದ್ದು, ಇದರಲ್ಲಿ ಮಾನುಷಿ ಚಿಲ್ಲರ್ ಸಹನಟರಾಗಿದ್ದಾರೆ.



ಅಬ್ರಹಾಂ ಇತ್ತೀಚೆಗೆ ಗೋವಾದಲ್ಲಿ ನಡೆದ 56 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಓಸ್ಲೋ: ಎ ಟೇಲ್ ಆಫ್ ಪ್ರಾಮಿಸ್ ಎಂಬ ಸಾಕ್ಷ್ಯಚಿತ್ರದ ಟೀಸರ್ ಅನ್ನು ಪ್ರಸ್ತುತಪಡಿಸಿದರು.

ಇದನ್ನೂ ಓದಿ: Sai Pallavi: ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?

ಜಾನ್ ಅಬ್ರಹಾಂ ಕೊನೆಯ ಬಾರಿಗೆ 2025 ರಲ್ಲಿ ದಿ ಡಿಪ್ಲೊಮ್ಯಾಟ್ ಮತ್ತು ಟೆಹ್ರಾನ್‌ನಲ್ಲಿ ಕಾಣಿಸಿಕೊಂಡರು. ವರದಿಗಳ ಪ್ರಕಾರ, ಅವರು ಮುಂದಿನ ಫೋರ್ಸ್ 3 ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರ ಆಕ್ಷನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ನಟ ಇನ್ನೂ ಅಧಿಕೃತ ದೃಢೀಕರಣವನ್ನು ಮಾಡಿಲ್ಲ.

Yashaswi Devadiga

View all posts by this author