ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌NTR ಫ್ಯಾನ್ಸ್‌ಗೆ ಇಷ್ಟವಾಯ್ತಾ 'ಡ್ರಾಗನ್' ಸಿನಿಮಾದ ಫಸ್ಟ್‌ ಗ್ಲಿಂಪ್ಸ್‌? ಸೋಶಿಯಲ್‌ ಮೀಡಿಯಾದಲ್ಲಿ ಹೇಗಿದೆ ರೆಸ್ಪಾನ್ಸ್?‌

ಜೂನಿಯರ್ ಎನ್‌ಟಿಆರ್ ಅವರ 42ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರಾಗನ್’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ತಾರಕ್ ಅವರನ್ನು ಅಫ್ಘಾನ್ ಟ್ರೇಡಿಂಗ್ ಕಂಪನಿಯ ಮುಖ್ಯ ಕೊಲೆಗಾರ 'ಲುಗರ್' ಎಂಬ ರಗಡ್ ಪಾತ್ರದಲ್ಲಿ ಪರಿಚಯಿಸಲಾಗಿದೆ.

ಜೂ, ಎನ್‌ಟಿಆರ್ ಅವರು ಮೇ 20ರಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಮೇ 19ರ ರಾತ್ರಿ ಅವರ ಹೊಸ ಚಿತ್ರದ ಫಸ್ಟ್ ಗ್ಲಿಂಪ್ಸ್ ಮತ್ತು ಟೈಟಲ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಮಾಸ್ ಮತ್ತು ಆಕ್ಷನ್‌ನಿಂದ ಕೂಡಿರುವ ಈ ಗ್ಲಿಂಪ್ಸ್ ಎಲ್ಲರ ಕಣ್ಮನ ತಣಿಸಿದೆ.

ಇಷ್ಟು ದಿನ 'NTRNeel' ಎಂದು ಕರೆಯಲ್ಪಡುತ್ತಿದ್ದ ಚಿತ್ರದ ಶೀರ್ಷಿಕೆಯನ್ನು 'ಡ್ರಾಗನ್' (Dragon) ಎಂಬುದಾಗಿ ಚಿತ್ರತಂಡ ಖಚಿತಪಡಿಸಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ಗ್ಲಿಂಪ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ತಾರಕ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳು ವ್ಯಾಪಕವಾಗಿ ಕೊಂಡಾಡುತ್ತಿದ್ದಾರೆ.

Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

ಎನ್‌ಟಿಆರ್ ಲುಕ್‌ಗೆ ಫ್ಯಾನ್ಸ್ ಫಿದಾ!

'ಡ್ರಾಗನ್' ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾದ ಬೆನ್ನಲ್ಲೇ, ಜೂನಿಯರ್ ಎನ್‌ಟಿಆರ್ ಅವರ ಇಂಟೆನ್ಸ್ ಟ್ರಾನ್ಸ್‌ಫಾರ್ಮೇಷನ್, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಖಡಕ್ ಡೈಲಾಗ್ ಡೆಲಿವರಿ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈಯುತ್ತಿದ್ದಾರೆ. ಎನ್‌ಟಿಆರ್ - ಪ್ರಶಾಂತ್ ನೀಲ್ ಜೋಡಿಯ ಈ ಸಿನಿಮಾದ ವಿಶುವಲ್ಸ್ ಮತ್ತು ತಾಂತ್ರಿಕ ಗುಣಮಟ್ಟ ಅದ್ಭುತವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಲ್ಲಿವೆ ಓದಿ, ಕೆಲವು ಕಾಮೆಂಟ್‌ಗಳು.

  • "ಇದು ನಿಜಕ್ಕೂ ಕ್ರೇಜಿಯಾಗಿದೆ! ಶೂಟ್ ಮಾಡಲಾದ ಪ್ರತಿಯೊಂದು ಸೀನ್ ಕೂಡ ಮೈ ನವಿರೇಳಿಸುವಂತಿದೆ. ದೇವರೇ.. ಎನ್‌ಟಿಆರ್ ಮತ್ತೊಮ್ಮೆ ಗ್ರೇ-ಶೇಡ್ (ನೆಗೆಟಿವ್ ಛಾಯೆ) ಪಾತ್ರದಲ್ಲಿ ಅಬ್ಬರಿಸುತ್ತಿದ್ದಾರೆ. ಸಿನಿಮಾಟೋಗ್ರಫಿ ಮತ್ತು ಮ್ಯೂಸಿಕ್ ಅಂತೂ ಬೆಂಕಿ.."
  • "ಇಂಡಿಯನ್ ಸಿನಿಮಾದ ಮಾಸ್ ಗಾಡ್ ಎನ್‌ಟಿಆರ್! ಎಂತಹ ಟ್ರಾನ್ಸ್‌ಫಾರ್ಮೇಷನ್, ಎಂತಹ ಡೈಲಾಗ್ ಮಾಡ್ಯುಲೇಶನ್ ಮತ್ತು ಸ್ಕ್ರೀನ್ ಪ್ರೆಸೆನ್ಸ್.. ನನ್ನ ಮಾತು ಬರೆದಿಟ್ಟುಕೊಳ್ಳಿ, 'ಡ್ರಾಗನ್' ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡಲಿದೆ. ಇದು ಪ್ರಶಾಂತ್ ನೀಲ್ ಅವರ ಬೆಸ್ಟ್ ವರ್ಕ್ ಆಗಲಿದೆ.."
  • "ಎನ್‌ಟಿಆರ್ ಲುಕ್ ಸ್ವಲ್ಪ ಫೇಕ್ ಎನಿಸುತ್ತಿದೆ, ಪ್ರಭಾಸ್ ಅವರಂತಹ ನಟರು ಈ ಪಾತ್ರ ಮಾಡಬೇಕಿತ್ತು.."
  • "ಡ್ರಾಗನ್ ಗ್ಲಿಂಪ್ಸ್ ಸೂಪರ್ ಆಗಿದೆ. ತಾಂತ್ರಿಕವಾಗಿ ಇದು ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಲಿದೆ. ಆ ನೈಟ್ ಶಾಟ್‌ಗಳ ಲೈಟಿಂಗ್ ಮತ್ತು ಕಲರ್ ಗ್ರೇಡಿಂಗ್ ಅದ್ಭುತವಾಗಿದೆ. ಹೊಸ ಜಗತ್ತನ್ನೇ ಸೃಷ್ಟಿಸುವ ಪ್ರಶಾಂತ್ ನೀಲ್ ಇಲ್ಲಿ ಭರ್ಜರಿಯಾಗಿಯೇ ಉಣಬಡಿಸಿದ್ದಾರೆ. ಎನ್‌ಟಿಆರ್ 'ಲುಗರ್' ಪಾತ್ರದಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ. ನಾಯಕನ ಇನ್ನೊಂದು ಮುಖವನ್ನು ನೋಡಲು ಕಾಯುತ್ತಿದ್ದೇನೆ.."

ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?

ಸದ್ಯ ಈ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು 'ಆಫ್ಘನ್ ಟ್ರೇಡಿಂಗ್ ಕಂಪನಿ'ಯ ಚೀಫ್ ಅಸಾಸಿನ್ (ಮುಖ್ಯ ಕೊಲೆಗಾರ) ಆಗಿರುವ 'ಲುಗರ್' (Luger) ಎಂಬ ಪಾತ್ರದ ಮೂಲಕ ಪರಿಚಯಿಸಲಾಗಿದೆ. ಇದು ಸಿನಿಮಾ ಕಂಪ್ಲೀಟ್ ರಗಡ್ ಆಗಿರಲಿದ್ದು, ನಾಯಕನ ಪಾತ್ರದಲ್ಲಿ ಸಾಕಷ್ಟು ಲೇಯರ್‌ಗಳು ಹಾಗೂ ಮೊರಲಿ ಗ್ರೇ-ಶೇಡ್ ಇರಲಿದೆ ಎಂಬುದರ ಸುಳಿವು ನೀಡಿದೆ. ಜೊತೆಗೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಪಟ್ಟಿ ಬಹಿರಂಗವಾಗಿದೆ.

ಎನ್‌ಟಿಆರ್ ಜೊತೆಗೆ ಅನಿಲ್ ಕಪೂರ್, ಬಿಜು ಮೆನನ್, ರುಕ್ಮಿಣಿ ವಸಂತ್, ಖುಷ್ಬೂ ಸುಂದರ್, ಗುರು ಸೋಮಸುಂದರಂ, ರಾಜೀವ್ ಕನಕಾಲ, ಅಶುತೋಷ್ ರಾಣಾ, ಅಂಶುಮಾನ್ ಪುಷ್ಕರ್, ಸಿದ್ಧಾಂತ್ ಗುಪ್ತಾ, ಪ್ರಭಾಸ್ ಶ್ರೀನು, ಶತ್ರು, ಶಿವ, ಭೀಮಲ್ ಜೀತ್ ಒಬೆರಾಯ್, ನ್ತುಥುಜೆಲೊ ಪ್ರಿನ್ಸ್ ಗ್ರೂಟ್‌ಬೂಮ್, ಅಲೆಕ್ಸಾಂಡರ್ ಮಿಜೆವ್, ಬೆನೆಡಿಕ್ಟ್ ಪಾಲ್ ಗ್ಯಾರೆಟ್ ಮುಂತದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.