ಜೂನಿಯರ್ ಎನ್‌ಟಿಆರ್ (Jr NTR’s Drastic Weight Loss ) ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.
ಫ್ಯಾನ್ಸ್ ಬೇಸರ
ಈ ಹಿಂದೆ ವಾರ್ 2 ರ ಸಮಯದಲ್ಲಿ ಉತ್ತಮವಾದ, ಫಿಟ್‌ನೆಸ್ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದ ನಟ,ಈಗ ಈ ರೀತಿ ನೋಡಿ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: Suryavamsha Serial : ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್ ಜತ್ಕರ್ ಭಾವುಕ ಪೋಸ್ಟ್
ಪ್ರಶಾಂತ್ ನೀಲ್ ನಿರ್ದೇಶನದ ಅವರ ಮುಂಬರುವ ಚಿತ್ರ ಡ್ರ್ಯಾಗನ್‌ಗಾಗಿ ಈ ಲುಕ್ ಬಳಸಲಾಗಿದೆಯೇ ಎಂದು ಕಮೆಂಟ್ ಮಾಡ್ತಿದ್ದಾರೆ ಫ್ಯಾನ್ಸ್.
ವರದಿಗಳ ಪ್ರಕಾರ, ನಟ ಕೇವಲ ಐದು ತಿಂಗಳಲ್ಲಿ ಕಟ್ಟುನಿಟ್ಟಿನ ಆಹಾರ ಮತ್ತು ವ್ಯಾಯಾಮದ ಮೂಲಕ ಸುಮಾರು 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ, ಎನ್‌ಟಿಆರ್ ತೀರಾ ಸಣ್ಣಗೆ ಕಾಣಿಸುತ್ತಿರುವುದನ್ನು ನೋಡಿ ಕೆಲವು ಅಭಿಮಾನಿಗಳು ಶಾಕ್ ಆಗಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಪ್ರಭಾಸ್, ಯಶ್ ಅವರಂತಹ ಹೀರೋಗಳನ್ನು ಫಿಟ್ ಬಾಡಿಯೊಂದಿಗೆ ಪವರ್‌ಫುಲ್ ಆಗಿ ತೋರಿಸಿದ್ದರು. ಈ ಸಿನಿಮಾವನ್ನು ಜೂನ್ 25 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ, ಶೂಟಿಂಗ್ ಇನ್ನೂ ಪೂರ್ಣಗೊಳ್ಳದ ಕಾರಣ ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು
ಈ ಬದಲಾವಣೆಯು ಅವರ ಅಭಿಮಾನಿಗಳ ಒಂದು ವರ್ಗಕ್ಕೆ ಅವರ ಆರೋಗ್ಯದ ಬಗ್ಗೆ ಚಿಂತೆಗೀಡು ಮಾಡಿದೆ, ಈ ಲುಕ್ ತಾತ್ಕಾಲಿಕ ಮತ್ತು ದೊಡ್ಡ ಸಿನಿಮೀಯ ದೃಷ್ಟಿಕೋನದ ಭಾಗವಾಗಿದೆ ಎಂದು ಆಶಿಸಿದ್ದಾರೆ.
ಮಹದೇವಪುರದಲ್ಲಿ ಕಿಮ್ಸ್ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲು ನಟ ಬೆಂಗಳೂರಿಗೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು. ಈ ವೇಳೆ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.
ಕನ್ನಡದಲ್ಲಿ ಜ್ಯೂನಿಯರ್ ಎನ್‌ಟಿಆರ್ ಭಾಷಣ
ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಜೂನಿಯರ್ ಎನ್‌ಟಿಆರ್ ಕನ್ನಡ ನೆಲದ ಬಗ್ಗೆ ಕೊಂಡಾಡಿದ್ದರು.
ಇದನ್ನೂ ಓದಿ: Naga Chaitanya: ಹೊಸ ಹೇರ್ ಸ್ಟೈಲ್, ರಗಡ್ ಲುಕ್; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್
ಎಲ್ಲರಿಗೂ ನಮಸ್ಕಾರ. ಕರ್ನಾಟಕಕ್ಕೆ ನನಗೆ ಬರೋದು ಯಾವಾಗಲೂ ಖುಷಿ. ನಿಮಗೆ ಗೊತ್ತೇ ಇದೆ. ನನ್ನ ತಾಯಿ ಊರು ಕುಂದಾಪುರ. ಬೆಂಗಳೂರು, ಕರ್ನಾಟಕಕ್ಕೆ ಬಂದಾಗ, ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಹಾಗೇ ಇರುತ್ತದೆ. ನನಗೆ ಇದು ಯಾವಾಗಲೂ ಸ್ಪೆಷಲ್. ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ ಎಂದು ಹೇಳಿದ್ದರು.