ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jr NTR: ಜಾಹೀರಾತು ಚಿತ್ರೀಕರಣದ ವೇಳೆ ಜೂನಿಯರ್ ಎನ್‌ಟಿಆರ್‌ಗೆ ಗಾಯ; ಅಭಿಮಾನಿಗಳಲ್ಲಿ ಆತಂಕ

ಖಾಸಗಿ ಸ್ಟುಡಿಯೋದಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಜೂನಿಯರ್ ಎನ್‌ಟಿಆರ್‌ ಗಾಯಗೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಟನ ಕಾಲಿಗೆ ಗಾಯವಾಗಿತ್ತು. ಇದು ಕೇವಲ ಸಣ್ಣ ಗಾಯ ಎಂದು ತಂಡ ಸ್ಪಷ್ಟಪಡಿಸಿದ್ದು, ಅಭಿಮಾನಿಗಳು ಚಿಂತಿಸಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೈದರಾಬಾದ್‌: ಖಾಸಗಿ ಸ್ಟುಡಿಯೋದಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ಜೂನಿಯರ್ ಎನ್‌ಟಿಆರ್‌ (Jr NTR) ಗಾಯಗೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಟನ ಕಾಲಿಗೆ ಗಾಯವಾಗಿತ್ತು. ಇದು ಕೇವಲ ಸಣ್ಣ ಗಾಯ ಎಂದು ತಂಡ ಸ್ಪಷ್ಟಪಡಿಸಿದ್ದು, ಅಭಿಮಾನಿಗಳು ಚಿಂತಿಸಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನೆಚ್ಚಿನ ನಟನಿಗೆ ಗಾಯಗಳಾಗಿವೆ ಎಂಬ ಸುದ್ದಿ ತಿಳಿಯುತ್ತಲೇ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಘಟನೆಯ ನಿಖರವಾದ ವಿವರಗಳು ಸ್ಪಷ್ಟವಾಗಿಲ್ಲವಾದರೂ, ವೈದ್ಯರು ಅವರಿಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ಕುರಿತು ಜೂನಿಯರ್ ಎನ್‌ಟಿಆರ್ ಅವರ ಕಚೇರಿಯಿಂದ ಅಧಿಕೃತ ಹೇಳಿಕೆ ಕೂಡ ಬಿಡುಗಡೆಯಾಗಿದ್ದು, ಇಂದು ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಎನ್‌ಟಿಆರ್‌ಗೆ ಸಣ್ಣಪುಟ್ಟ ಗಾಯವಾಗಿದೆ. ವೈದ್ಯಕೀಯ ಸಲಹೆಯ ಮೇರೆಗೆ, ಅವರು ಸಂಪೂರ್ಣ ಚೇತರಿಕೆಗಾಗಿ ಮುಂದಿನ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ನಾವು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇವೆ. ಅಭಿಮಾನಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಂದ ದೂರವಿರಬೇಕೆಂದು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ ಎಂದು ತಿಳಿಸಲಾಗಿದೆ.

ಪ್ರಸ್ತುತ, ಜೂನಿಯರ್ ಎನ್‌ಟಿಆರ್‌ ಪ್ರಶಾಂತ್ ನೀಲ್ ನಿರ್ದೇಶನದ ತಮ್ಮ ಮುಂಬರುವ ಚಿತ್ರ ಡ್ರಾಗನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಂಡರೆ, ಶೂಟಿಂಗ್ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಬಹುದು. ಚಿತ್ರೀಕರಣಕ್ಕಾಗಿ ನಟ ಜಿಮ್ ನಲ್ಲಿ ಬೆವರು ಸುರಿಸುತ್ತಿರುವ ಹೊಸ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅವರು ತೆಳ್ಳಗೆ ಕಾಣಲು ಜಿಮ್‌ನಲ್ಲಿ ಸಾಕಷ್ಟು ಕಸರತ್ತನ್ನು ಮಾಡುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರ ಜೂನ್ 25, 2026 ರಂದು ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Kantara: Chapter 1 trailer : ಕಾಂತಾರ: ಚಾಪ್ಟರ್‌ 1' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಮೂಹೂರ್ತ ಫಿಕ್ಸ್‌; ಯಾವಾಗ ಗೊತ್ತಾ?

ಕಾಂತಾರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವರದಿಯ ಪ್ರಕಾರ, ಈ ಹೊಸ ಯೋಜನೆಯು "ಪ್ರಶಾಂತ್ ನೀಲ್ ಅವರ ಇದುವರೆಗಿನ ಅತಿದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ; ಅವರ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್‌ಗಳಾದ ಸಲಾರ್ ಮತ್ತು ಕೆಜಿಎಫ್‌ಗಿಂತಲೂ ದೊಡ್ಡದಾಗಿದೆ ಎಂದು ಹೇಳಲಾಗುತ್ತಿದೆ.