NTRNeel Update: ಪ್ರಶಾಂತ್ ನೀಲ್, ಜೂ. ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ʼಎನ್‌ಟಿಆರ್‌ನೀಲ್ʼ ಚಿತ್ರದಿಂದ ಹೊರಬಂತು ಎಕ್ಸೈಟಿಂಗ್ ಅಪ್‌ಡೇಟ್
Prashanth Neel: ಸದ್ಯ ಕುತೂಹಲ ಕೆರಳಿಸಿರುವ ಬಹು ನಿರೀಕ್ಷಿತಗಳ ಪೈಕಿ ತೆಲುಗಿನ ʼಎನ್‌ಟಿಆರ್‌ನೀಲ್ʼ ಕೂಡ ಒಂದು. ಮೊದಲ ಬಾರಿ ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್ ಒಂದಾಗುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಏ. 22ರಿಂದ ಜೂ. ಎನ್‌ಟಿಆರ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್.

ಹೈದರಾಬಾದ್: ʼಕೆಜಿಎಫ್ʼ ಸರಣಿ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದ, ಜಾಗತಿಕವಾಗಿ ಸ್ಯಾಂಡಲ್‌ವುಡ್‌ನ ಕಂಪು ಬೀರಿದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಇದೀಗ ತೆಲುಗಿನಲ್ಲಿ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ (Jr NTR) ಚಿತ್ರವನ್ನು ಕೈಗೆತ್ತಿಕೊಂಡಿರುವ ಅವರು ಮತ್ತೊಮ್ಮೆ ಗಲ್ಲಾ ಪೆಟ್ಟಿಗೆ ದೋಚಲು ಸಜ್ಜಾಗಿದ್ದಾರೆ. ಸದ್ದಿಲ್ಲದೆ ತಯಾರಿ ನಡೆಸಿದ್ದ ಚಿತ್ರತಂಡ ಈ ವರ್ಷದ ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭಿಸಿತ್ತು. ಬರೋಬ್ಬರಿ 2 ಸಾವಿರ ಜೂನಿಯರ್ ಆರ್ಟಿಸ್ಟ್‌ಗಳೊಂದಿಗೆ ಶೂಟಿಂಗ್ ಶುರು ಮಾಡಿದ್ದ ಚಿತ್ರತಂಡ ಇದೀಗ ಹೊಸ ಅಪ್‌ಡೇಟ್ (NTRNeel Update) ನೀಡಿದೆ.
ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್ ಅವರಿಗೆ ಅವರದ್ದೇ ಆದ ಫ್ಯಾನ್ಸ್ ಇದ್ದಾರೆ. ಒಬ್ಬರು ತೆರೆ ಹಿಂದಿನ ದೈತ್ಯ ಪ್ರತಿಭೆಯಾದರೆ ಮತ್ತೊಬ್ಬರು ತೆರೆ ಮೇಲೆ ಅಬ್ಬರಿಸುವ ಸ್ಟಾರ್. ಹೀಗಾಗಿ ಇವರಿಬ್ಬರು ಜತೆಯಾಗುತ್ತಾರೆ ಎನ್ನುವಾಗಲೇ ಕುತೂಹಲ, ನಿರೀಕ್ಷೆಗಳೆಲ್ಲ ಗರಿಗೆದರಿದೆ. ಮೊದಲ ಬಾರಿಗೆ ಇವರು ಒಂದಾಗುತ್ತಿರುವುದು ಕೂಡ ಹೈಪ್ ಸೃಷ್ಟಿಸಿದೆ.
ʼಎನ್‌ಟಿಆರ್‌ನೀಲ್ʼ ಚಿತ್ರದ ಅಪ್‌ಡೇಟ್ ಇಲ್ಲಿದೆ:
#NTRNeel is entering its most explosive phase 💥💥
— #NTRNeel (@NTRNeelFilm) April 9, 2025
Man of Masses @Tarak9999 steps into the destructive soil from April 22nd ❤️🔥❤️🔥#PrashanthNeel @MythriOfficial @NTRArtsOfficial @NTRNeelFilm pic.twitter.com/4GHyxgrmNu
ಈ ಸುದ್ದಿಯನ್ನೂ ಓದಿ: Kesari 2 Movie: ಕೇಸರಿ 2 ಚಿತ್ರದ ನೈಜ ಕಥೆಯೇನು? ಇದರ ಹಿಂದಿನ ರಿಯಲ್ ಹೀರೋ ಯಾರು?
ಏ. 22ರಿಂದ ಚಿತ್ರೀಕರಣದಲ್ಲಿ ಭಾಗಿ
ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಜತೆಯಾಗಿ ಈ ಬಹು ನಿರೀಕ್ಷಿತ, ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದೆ. ತಾತ್ಕಾಲಿಕವಾಗಿ ಸಿನಿಮಾಕ್ಕೆ ʼಎನ್‌ಟಿಆರ್‌ನೀಲ್ʼ (NTRNeel) ಎಂದು ಹೆಸಡಿಲಾಗಿದೆ. ಏ. 22ರಿಂದ ಜೂ.ಎನ್‌ಟಿಆರ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ಸಿನಿಮಾತಂಡ ಇದೀಗ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಇದು ʼಕೆಜಿಎಫ್ʼ ಸರಣಿ ಚಿತ್ರಗಳಂತೆ ಪಕ್ಕಾ ಕಮರ್ಷಿಯಲ್ಲಿ ರೀತಿಯಲ್ಲೇ ಮೂಡಿ ಬರಲಿದ್ದು, ಭರಪೂರ ಆ್ಯಕ್ಷನ್ ದೃಶ್ಯಗಳಿವೆ ಎಂದು ಮೂಲಗಳು ತಿಳಿಸಿವೆ.
ರುಕ್ಮಿಣಿ ವಸಂತ್ ನಾಯಕಿ
ವಿಶೇಷ ಎಂದರೆ ʼಎನ್‌ಟಿಆರ್‌ನೀಲ್ʼ ಚಿತ್ರಕ್ಕೆ ನಾಯಕಿಯನ್ನಾಗಿ ಕನ್ನಡತಿ ರುಕ್ಮಿಣಿ ವಸಂತ್‌ಗೆ ಪ್ರಶಾಂತ್ ನೀಲ್ ಮಣೆ ಹಾಕಿದ್ದಾರೆ. ಈ ಚಿತ್ರಕ್ಕಾಗಿ ರುಕ್ಮಿಣಿ ಕೆಲವೊಂದು ಸಿನಿಮಾಗಳ ಅವಕಾಶವನ್ನೂ ಬಿಟ್ಟಿದ್ದಾರಂತೆ. ಸದ್ಯ ನಾಯಕಿ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಅದಾಗಲೇ ರುಕ್ಮಿಣಿ ವಸಂತ್ ಫ್ಯಾನ್ಸ್ ಇದುವ ಅವರ ಸಿನಿ ಕೆರಿಯರ್‌ಗೆ ಬೂಸ್ಟ್ ನೀಡಲಿದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. ತೆಲುಗಿನ ಜತೆಗೆ ಬಹು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಸದ್ಯ ಜೂ.ಎನ್‌ಟಿಆರ್ ಬಾಲಿವುಡ್‌ಗೂ ಕಾಲಿಟ್ಟಿದ್ದು, ಹೃತಿಕ್ ರೋಷನ್ ಜತೆ ʼವಾರ್ 2ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಅಪ್ಪಳಿಸಲಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಇದೊಂದಿಗೆ ಜೂ.ಎನ್‌ಟಿಆರ್ ʼದೇವರ ಪಾರ್ಟ್ 2ʼ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗ ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು.
ಇತ್ತ ಪ್ರಶಾಂತ್ ನೀಲ್ ಪ್ರಭಾಸ್ ಅಭಿನಯದ ʼಸಲಾರ್: ಪಾರ್ಟ್ 2ʼ ಸಿನಿಮಾವನ್ನೂ ಕೈಗೆತ್ತಿಕೊಳ್ಳಲಿದ್ದಾರೆ. ಪ್ರಭಾಸ್ ಸದ್ಯ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕೆಲವು ತಿಂಗಳ ಬಳಿಕ ಈ ಚಿತ್ರ ಸೆಟ್ಟೇರಲಿದೆ.