ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಅರ್ಧಶತಕ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಮುರಿದ ತಿಲಕ್‌ ವರ್ಮಾ!

Tilak Verma Breaks Rohit sharma's Record: ದಕ್ಷಿಣ ಆಫ್ರಿಕಾ ಎದುರು ಐದನೇ ಟಿ20ಐ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸುವ ಮೂಲಕ ಭಾರತ ತಂಡದ ತಿಲಕ್‌ ವರ್ಮಾ, ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಅರ್ಧಶತಕ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಮುರಿದ ತಿಲಕ್‌ ವರ್ಮಾ!

ರೋಹಿತ್‌ ಶರ್ಮಾ ದಾಖಲೆ ಮುರಿದ ತಿಲಕ್‌ ವರ್ಮಾ. -

Profile
Ramesh Kote Dec 20, 2025 9:03 AM

ಅಹಮದಾಬಾದ್:‌ ದಕ್ಷಿಣ ಆಫ್ರಿಕಾ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ (IND vs SA) ಕೊನೆಯ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ (Tilak Verma) ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ 42 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 73 ರನ್‌ಗಳನ್ನಯು ಬಾರಿಸಿದರು. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit sharma) ಅವರ ದೊಡ್ಡ ದಾಖಲೆಯೊಂದನ್ನು ತಿಲಕ್‌ ವರ್ಮಾ ಮುರಿದಿದ್ದಾರೆ.

ಸ್ಪೋಟಕ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ ಮುರಿಯದ ನಾಲ್ಕನೇ ವಿಕೆಟ್‌ಗೆ ಹಾರ್ದಿಕ್‌ ಪಾಂಡ್ಯ ಅವರ ಜೊತೆ 105 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಹಾರ್ದಿಕ್‌ ಕೂಡ ಕೇವಲ 25 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 5 ಬೌಂಡರಿಗಳನ್ನು ಬಾರಿಸಿದ್ದರು. ಅಂದ ಹಾಗೆ 73 ರನ್‌ಗಳನ್ನು ಬಾರಿಸುವ ಮೂಲಕ ತಿಲಕ್‌ ವರ್ಮಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್‌ ಶರ್ಮಾ ಹರಿಣ ಪಡೆಯ ಎದುರು ತಮ್ಮ ಟಿ20ಐ ವೃತ್ತಿ ಜೀವನದಲ್ಲಿ 429 ರನ್‌ಗಳನ್ನು ಸಿಡಿಸಿದ್ದಾರೆ.

IND vs SA: ಹಾರ್ದಿಕ್‌ ಪಾಂಡ್ಯ ಅಬ್ಬರ, 5ನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!

ದಕ್ಷಿಣ ಆಫ್ರಿಕಾ ಎದುರು ರೋಹಿತ್‌ ಶರ್ಮಾ 2007 ರಿಂದ 2024ರವರೆಗೆ ಒಟ್ಟು 18 ಪಂದ್ಯಗಳಿಂದ 429 ರನ್‌ಗಳನ್ನು ಗಳಿಸಿದ್ದಾರೆ. ಇದೀಗ ತಿಲಕ್‌ ವರ್ಮಾ 10 ಟಿ20ಐ ಪಂದ್ಯಗಳಿಂದ 496 ರನ್‌ಗಳನ್ನು ಸಿಡಿಸಿದ್ದಾರೆ. ಶುಕ್ರವಾರ ರೋಹಿತ್‌ ಶರ್ಮಾ ದಾಖಲೆಯನ್ನು ಮುರಿಯಲು ಹೈದರಾಬಾದ್‌ ಮೂಲದ ಬ್ಯಾಟ್ಸ್‌ಮನ್‌ಗೆ ಕೇವಲ 7 ರನ್‌ ಅಗತ್ಯವಿತ್ತು.ತಾವು ಎದುರಿಸಿದ ಎರಡನೇ ಎಸೆತದಲ್ಲಿಯೇ ತಿಲಕ್‌ ವರ್ಮಾ ಈ ದಾಖಲೆಯನ್ನು ಮುರಿದರು.



ದಕ್ಷಿಣ ಆಫ್ರಿಕಾ ಎದುರು ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು

ತಿಲಕ್ ವರ್ಮಾ : 10 ಪಂದ್ಯಗಳು- 496 ರನ್‌- ಬೆಸ್ಟ್‌ ಸ್ಕೋರ್‌ 120*

ರೋಹಿತ್ ಶರ್ಮಾ: 18 ಪಂದ್ಯಗಳು- 429 ರನ್‌-ಬೆಸ್ಟ್‌ ಸ್ಕೋರ್‌ 106

ಸೂರ್ಯಕುಮಾರ್ ಯಾದವ್: 15 ಪಂದ್ಯಗಳು- 406 ರನ್‌- ಬೆಸ್ಟ್‌ ಸ್ಕೋರ್‌ 100

ವಿರಾಟ್ ಕೊಹ್ಲಿ: 14 ಪಂದ್ಯಗಳು- 394 ರನ್‌- ಬೆಸ್ಟ್‌ ಸ್ಕೋರ್‌ 76

ಹಾರ್ದಿಕ್ ಪಾಂಡ್ಯ : 20 ಪಂದ್ಯಗಳು- 373 ರನ್‌- ಬೆಸ್ಟ್‌ ಸ್ಕೋರ್‌ 63

IND vs SA: 37 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಎರಡು ದಾಖಲೆ ಬರೆದ ಸಂಜು ಸ್ಯಾಮ್ಸನ್!

ಅಗ್ರ ಸ್ಥಾನದಲ್ಲಿ ಜೋಸ್‌ ಬಟ್ಲರ್‌

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಸ್ಟಾರ್ ವಿಕೆಟ್‌ ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಹೆಸರಿನಲ್ಲಿದೆ. ಬಟ್ಲರ್ ದಕ್ಷಿಣ ಆಫ್ರಿಕಾ ವಿರುದ್ಧ 23 ಟಿ20ಐಗಳಲ್ಲಿ 606 ರನ್ ಗಳಿಸಿದ್ದಾರೆ. ಬಟ್ಲರ್ ನಂತರ ಪಾಕಿಸ್ತಾನದ ಬಾಬರ್ ಆಝಮ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಇದ್ದಾರೆ. ತಿಲಕ್, ಪ್ರಸ್ತುತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.