ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪ್ರೀತಿಸಿ ಮದುವೆಯಾಗಿದ್ದ ದಿಲೀಪ್‌ ರಾಜ್‌ʼ; ಅಗಲಿದ ಗೆಳೆಯನನ್ನು ನೆನೆದು ನಟ ನವೀನ್‌ ಕೃಷ್ಣ ಭಾವುಕ

ನಟ ದಿಲೀಪ್ ರಾಜ್ ಅಕಾಲಿಕ ನಿಧನಕ್ಕೆ ಅವರ ಗೆಳೆಯ ನಟ ನವೀನ್ ಕೃಷ್ಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಅವರು ಹಲವು ಘಟನೆಗಳನ್ನು ನವೀನ್ ಸ್ಮರಿಸಿದ್ದಾರೆ. ತಾವು ನಿರ್ದೇಶಕರಾಗಲು ದಿಲೀಪ್ ಅವರೇ ಕಾರಣ ಎಂದು ಭಾವುಕರಾಗಿದ್ದಾರೆ.

ನಟ ದಿಲೀಪ್‌ ರಾಜ್‌ ಅವರ ಅಕಾಲಿಕ ನಿಧನವು ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪತಿಯನ್ನು ಅಪಾರವಾಗಿ ಪ್ರೀತಿ ಮಾಡುತ್ತಿದ್ದ ಪತ್ನಿ ವಿದ್ಯಾ ಅವರಂತೂ ಅಕ್ಷರಶಃ ಕಂಗಾಲಾಗಿದ್ದಾರೆ. ಪತಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇನ್ನು, ನಟ, ನಿರ್ದೇಶಕ ನವೀನ್‌ ಕೃಷ್ಣ ಅವರು ಹಲವು ವರ್ಷದ ಗೆಳೆಯನ ಸಾವಿಗೆ ಮರುಗಿದ್ದಾರೆ.‌

ಲವ್‌ ಮಾಡಿದ ಹುಡುಗಿ ಜೊತೆ ಮದುವೆಯಾದ

ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿರುವ ನವೀನ್‌ ಕೃಷ್ಣ, "ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಬಹಳ ದುಃಖವಾಗುತ್ತಿದೆ. ನಾನು ಕಾಲೇಜು ದಿನಗಳಿಂದಲೂ ದಿಲೀಪ್‌ಗೆ ಸ್ನೇಹಿತ. ನಾವಿಬ್ಬರು ಒಟ್ಟಿಗೆ ತಿರುಪತಿಗೆ ಹೋಗಿದ್ದೆವು. ಕಾಲೇಜಿನಲ್ಲಿ ದಿಲೀಪ್ ನನಗಿಂತ ಒಂದು ವರ್ಷ ಸೀನಿಯರ್.‌ ನಾವಿಬ್ಬರು ಒಟ್ಟಿಗೆ ಲವ್‌ ಮಾಡಿದೆವು. ನಾನು ಲವ್‌ ಮಾಡಿದ ಹುಡುಗಿಯನ್ನು ನಾನು ಮದುವೆಯಾದೆ, ಅವನು ಹುಡುಗಿಯನ್ನು ಅವನು ಮದುವೆಯಾದ.." ಎಂದು ಹೇಳಿದ್ದಾರೆ.

Dilip Raj: 'ಹಿಟ್ಲರ್ ಕಲ್ಯಾಣ' ಖ್ಯಾತಿಯ ನಟ ದಿಲೀಪ್ ರಾಜ್ ನಿಧನ; ಇವರ ಸಿನಿ ಪಯಣ ಹೇಗಿತ್ತು?

ನಾನು ನಿರ್ದೇಶಕನಾಗಲು ದಿಲೀಪ್‌ ಕಾರಣ

"ನಾವಿಬ್ಬರು ಕಾಲೇಜಿಂದನೂ ನಾವು ಫ್ರೆಂಡ್ಸ್. ವೈಯಕ್ತಿಕವಾಗಿಯೂ ನಾವು ತುಂಬಾ ಕ್ಲೋಸ್ ಫ್ರೆಂಡ್ಸ್. ನಾವು ಕಲಾವಿದರಾಗಿ ಬಂದೆವು. ಒಂದು ಹಂತದಲ್ಲಿ ಮುಂದೇನು ಎಂಬ ಪ್ರಶ್ನೆ ಬಂದಾಗ, ನನ್ನನ್ನು ಡೈರೆಕ್ಟರ್ ಮಾಡಿದ್ದೇ ದಿಲೀಪ್. ಒಳ್ಳೆ ಫ್ರೆಂಡ್, ಒಳ್ಳೆ ವೆಲ್ ವಿಷರ್, ನನಗೆ ಬೆನ್ನು ತಟ್ಟಿದವರು. ಎಲ್ಲದಕ್ಕಿಂತ ಹೆಚ್ಚಾಗಿ ತುಂಬಾ ಒಳ್ಳೆಯ ವ್ಯಕ್ತಿ. ಮನುಷ್ಯತ್ವಕ್ಕೆ ಒಂದು ಉದಾಹರಣೆ ಕೊಡಬೇಕು ಅಂದ್ರೆ, ಅದು ದಿಲೀಪ್.‌ ಅವನು ಎಲ್ಲಾ ರೀತಿಯಲ್ಲೂ ಪರ್ಫೆಕ್ಷನಿಸ್ಟ್. ಯಾವುದಾದರೂ ಪ್ರಾಜೆಕ್ಟ್ ಮಾಡಬೇಕಾದರೂ, ಬೇರೆಯವರನ್ನ ನಡೆಸಿಕೊಳ್ಳೋ ರೀತಿ ಹೀಗೆ ಎಲ್ಲದರಲ್ಲೂ ಪರ್ಫೆಕ್ಟ್‌.." ಎಂದು ನವೀನ್‌ ಕೃಷ್ಣ ಹೇಳಿದ್ದಾರೆ.

ʻನಮ್ಮ ತಂಡದಲ್ಲಿ ದಿಲೀಪ್‌ ರಾಜ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ; ಹಳೆಯ ದಿನಗಳನ್ನು ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ದಿಲೀಪ್‌ಗೆ ಯಾವುದೇ ಒತ್ತಡ ಇರಲಿಲ್ಲ

"ಎಲ್ಲರಿಗೂ ಒತ್ತಡ ಇರುತ್ತೆ. ಆದ್ರೆ ದಿಲೀಪ್‌ ಒತ್ತಡವನ್ನು ತಗೊಂಡಿದ್ದನ್ನ ನಾನು ಲೈಫ್ ಅಲ್ಲಿ ನೋಡೆ ಇಲ್ಲ. ಯಾವಾಗಲೂ ನಗಿಸಿಕೊಂಡು, ಕಾಲೆಳ್ಕೊಂಡು, ರೇಗಿಸ್ಕೊಂಡು... ಇರುತ್ತದ್ದ. ನಾನು 100% ಸ್ಟ್ರೆಸ್ ತಗೋತೀನಿ ಅಂದ್ರೆ ಅವನು 0% ಸ್ಟ್ರೆಸ್ ತಗೋತಾನೆ. ಜೀವನದಲ್ಲಿ ಇದು ನನ್ನ ಕೆಟ್ಟ ದಿನ ಅಂತ ಅವನು ಹೇಳಿದ್ದನ್ನೇ ನಾನು ನೋಡಿಲ್ಲ. 'ಗುರು ನಂಗೆ ಹಿಂಗಾಗ್ತಾ ಇದೆ ಲೈಫ್ ಅಲ್ಲಿ, ಹಂಗಾಗ್ತಾ ಇದೆ' ಅಂತ ಏನೇನೋ ನಾವು ಹೇಳ್ಕೊಂಡಿರ್ತೀವಿ. ಒಂದೇ ಒಂದು ಕ್ಷಣಕ್ಕೂ "ಇಲ್ಲ, ಆಗ್ತಿಲ್ಲ" ಅನ್ನೋ ಪದನೂ ಅವನ ಬಾಯಿಂದ ಬಂದಿಲ್ಲ. 'ನಂಗ್ ಆಗುತ್ತೆ, ಮಾಡಬೇಕು, ಮಾಡ್ತೀನಿ‌ ಅಷ್ಟೇ' ಅಂತ ಮಾಡಿ ತೋರಿಸಿದ್ದಾರೆ. ಎಷ್ಟೊಂದು ಸೀರಿಯಲ್‌ ನಿರ್ಮಾಣ ಮಾಡಿದ್ರು. ಅವರಿಂದ ಎಷ್ಟೋ ಜನ ಅನ್ನ ತಿನ್ನುತ್ತಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಎರಡು ದೇಹ ಒಂದು ಜೀವ ಥರ ಇದ್ರು. ಮನೆ ಕಟ್ಟಬೇಕು ಅಂದುಕೊಂಡ್ರು, ಕಟ್ಟಿದ್ರು. ಜೀವನದಲ್ಲಿ ಎಲ್ಲಾ ರೀತಿ ಸಾಧನೆ ಮಾಡಿದ್ದಾರೆ. ಇನ್ನಷ್ಟು ಎತ್ತರಕ್ಕೆ ಹೋಗಬೇಕಾಗಿತ್ತು... ಆದರೆ ತುಂಬಾ ಎತ್ತರಕ್ಕೆನೇ ಹೋಗಿಬಿಟ್ರು" ಎಂದು ನವೀನ್‌ ಕೃಷ್ಣ ಹೇಳಿದ್ದಾರೆ.

ದಿಲೀಪ್ ರಾಜ್ ನೆನೆದು ನವೀನ್ ಕೃಷ್ಣ ಭಾವುಕ



ದಿಲೀಪ್‌ಗೆ ಆ ಕೊರಗು ಇರಲಿಲ್ಲ

"ದಿಲೀಪ್‌ ತುಂಬಾ ಪ್ರಾಕ್ಟಿಕಲ್ ವ್ಯಕ್ತಿ. 'ನಾನು ಹೀರೋ ಆಗಿ ಸಾಧನೆ ಮಾಡ್ಲಿಲ್ಲ ಅಂದ್ರೂ ನನ್ನ ಸಾಧನೆಯ ಗುರಿ ಬೇರೆ ಇದೆ' ಅಂತ ಪ್ರೊಡಕ್ಷನ್ ಹೌಸ್ ಮಾಡಿ ಸಾಧನೆ ಮಾಡಿ ತೋರಿಸಿದರು. 'ನಾನೊಬ್ಬ ಒಳ್ಳೆ ಕಲಾವಿದ, ನನ್ನನ್ನ ಯಾರೂ ಉಪಯೋಗಿಸಿಕೊಳ್ಳಲಿಲ್ಲ' ಎಂದೆಲ್ಲಾ ಕೊರಗಲಿಲ್ಲ. ʻನನ್ನನ್ನ ನಾನೇ ಉಪಯೋಗಿಸಿಕೊಳ್ತೀನಿʼ ಅಂತ ಉಪಯೋಗಿಸಿಕೊಂಡು ಸಾಧನೆ ಮಾಡುತ್ತ ಹೋದ. ಹೀರೋ ಆಗಿ ಗೆಲ್ಲಲಿಲ್ಲ ಎಂಬ ಕೊರಗನ್ನು ನಾನು ಒಂದು ದಿವಸಕ್ಕೂ ನಾನು ನೋಡಿಲ್ಲ" ಎಂದಿದ್ಧಾರೆ ನವೀನ್‌ ಕೃಷ್ಣ.