ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kannada Film: ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ

Valavaara: ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​ ಕಟ್​ ಹೇಳಿರುವ ವಲವಾರ ಸಿನಿಮಾಗೆ ಇಡೀ ಚಿತ್ರರಂಗ ಜೈ ಎಂದಿದೆ.‌ ಶಿವಣ್ಣ, ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮೆಚ್ಚಿರುವ ಈ ಚಿತ್ರಕ್ಕೆ ಚಿತ್ರ ಸಾಹಿತಿ ಕವಿರಾಜ್ ಕೂಡ ಬೆಂಬಲವಾಗಿ ನಿಂತಿದ್ದಾರೆ‌‌.

ವಲವಾರ ಸಿನಿಮಾ

ಸುತನ್ ಗೌಡ (Suthan Gowda) ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​ ಕಟ್​ ಹೇಳಿರುವ ವಲವಾರ ಸಿನಿಮಾಗೆ ಇಡೀ ಚಿತ್ರರಂಗ ಜೈ ಎಂದಿದೆ.‌ ಶಿವಣ್ಣ, ರಿಷಬ್ ಶೆಟ್ಟಿ (Rishab Shetty) ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮೆಚ್ಚಿರುವ ಈ ಚಿತ್ರಕ್ಕೆ ಚಿತ್ರ ಸಾಹಿತಿ ಕವಿರಾಜ್ (Kaviraj) ಕೂಡ ಬೆಂಬಲವಾಗಿ ನಿಂತಿದ್ದಾರೆ‌‌.

ರಿಲ್ಯಾಕ್ಸ್ ಆಗುವ ಚಿತ್ರ

ಬೆಂಗಳೂರಿನ ರೇಣುಕಾ ಸ್ಟುಡಿಯೋದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ , ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ನಾನು ಈ ಚಿತ್ರದಲ್ಲಿ ಕೆಲಸ ಮಾಡಿಲ್ಲ. ಆದರೆ ನನಗೆ ಸಿನಿಮಾ ಋಣ ಇದೆ.‌ ಇಪ್ಪತ್ತೈದು ವರ್ಷಗಳಿಂದ ನಾನು ತಿನ್ನೋ ಅನ್ನ, ಹಾಕಿರುವ ಬಟ್ಟೆ, ಓಡಾಡುವ ಕಾರು ಎಲ್ಲವನ್ನೂ ಸಿನಿಮಾ ಕೊಟ್ಟಿದೆ.

ಇದನ್ನೂ ಓದಿ: Ramayana : ಯಶ್ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಈ ನಟ ಎಂಟ್ರಿ! ಪಾತ್ರ ಏನು?

ಹೀಗಾಗಿ ಸಿನಿಮಾ ಋಣ ನನ್ನ ಮೇಲಿದೆ. ಇವರು ಒಮ್ಮೆ ಸಿಕ್ಕಿ ಸಿನಿಮಾ ನೋಡಿ ಎಂದಾಗ ನೋಡಿದೆ. ತುಂಬಾ ಖುಷಿ ಆಯ್ತು. ಬಹಳ ದಿನಗಳ ನಂತರ ರಿಲ್ಯಾಕ್ಸ್ ಆಗುವ ಚಿತ್ರ ಎನಿಸಿತು. ಈ ಚಿತ್ರ ನೋಡಿದ ನಂತರ ನಿಮ್ಮಲ್ಲಿ ಪ್ರೀತಿ, ಮಾನವೀಯತೆ, ಬದುಕಿನ ಪ್ರೀತಿ ಜಾಸ್ತಿಯಾಗುತ್ತದೆ. ನನ್ನ ಕಡೆಯಿಂದ ಈ ಚಿತ್ರಕ್ಕೆ ಏನೂ ಬೇಕು ಅದನ್ನು ಮಾಡಲು ನಾನು ರೆಡಿ ಎಂದೆ.‌‌

ಒಂದು ಶೋ ಸ್ಪಾನ್ಸರ್ ಮಾಡುತ್ತೇನೆ ಎಂದೆ. ಆದ್ರೆ ಚಿತ್ರೋತ್ಸವ ಸಮಾರೋಪ ಸಮಾರಂಭ ಇರುವುದರಿಂದ ಮುಂದೂಡಲಾಯಿತು. ಈ ಚಿತ್ರ ನೋಡಿದಾಗ ಎಲ್ಲಿಯೂ ತಪ್ಪು ಕಾಣಿಸಲಿಲ್ಲ. ಮಲೆನಾಡ ನದಿ ಹರಿಯುತ್ತಿರುವ ರೀತಿ. ಭವಿಷ್ಯದ ಭರವಸೆ ನಿರ್ದೇಶಕರು ಎನಿಸಿದರು. ಇದು ನಮ್ಮ ಹೆಮ್ಮೆಯ ಸಿನಿಮಾ ಆಗುವ ತಾಕತ್ತು ಇದೆ ಎಂದರು.

ನಿರ್ಮಾಪಕರಿಗೆ ಋಣಿ

ನಿರ್ದೇಶಕ ಸುತನ್ ಗೌಡ ಮಾತನಾಡಿ, ಸಿನಿಮಾಗೆ ಒಳ್ಳೆ ರಿವ್ಯೂ ದೊರೆತಿದೆ ಇಂಡಸ್ಟ್ರಿಯಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಪ್ಪು ಸರ್ ಕಥೆ ಕೇಳಿ ಇಷ್ಟ ಪಟ್ಟು ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ಮಾಡಲು ತಯಾರಿದ್ದರು. ಅವರು ಹೋದ್ಮೇಲೆ ಹೊಸ ಪ್ರೊಡಕ್ಷನ್ ಸಿನಿಮಾ ಮಾಡಲು ಮುಂದೆ ಬಂದರು. ಈ ರೀತಿ ಸಿನಿಮಾ ಮಾಡಲು ಮುಂದೆ ಬಂದ ನಿರ್ಮಾಪಕರಿಗೆ ಋಣಿಯಾಗಿದ್ದೇನೆ.

Kannada Film Valavar  is our proud film Kaviraj praises

ಇದು 2022ರಲ್ಲಿ ಶುರುವಾದ ಜರ್ನಿ. ಕವಿರಾಜ್ ಸರ್ ಗೆ ನಾನು ಜೀವನ ಪೂರ್ತಿ ಋಣಿಯಾಗಿ ಇರುತ್ತೇನೆ. ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಿ. ಈ ಚಿತ್ರಕ್ಕೆ ನಾನು ಸಂಭಾವನೆ ತೆಗೆದುಕೊಂಡಿಲ್ಲ. ಈ ಚಿತ್ರದ ಮೂಲಕ ಒಳ್ಳೆ ಕಥೆ ಹೇಳಬೇಕು ಎಂಬುವುದು ನಮ್ಮ ಉದ್ದೇಶ. ಇದು ಕಮರ್ಷಿಯಲ್ ಸಿನಿಮಾನೇ ಎಂದು ಹೇಳಿದರು.

ಮಾರ್ಫ್ ಪ್ರೊಡಕ್ಷನ್‌ ಅಡಿ‌ ನಿರ್ಮಾಣವಾಗಿರುವ ವಲವಾರ ಸಿನಿಮಾದಲ್ಲಿ ಮಾಸ್ಟರ್ ವೇದಿಕ್ ಕೌಶಲ್, ಮಾಸ್ಟರ್ ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Rajpal Yadav: ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್; ಏನಿದು ಪ್ರಕರಣ?

ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಪ್ರಮೋದ್‌ ಮರವಂತೆ ಸಾಹಿತ್ಯ, ಬಾಲರಾಜ್‌ ಗೌಡ ಛಾಯಾಗ್ರಹಣ, ಶ್ರೀಕಾಂತ್ ಎಸ್.ಹೆಚ್ ಸಂಕಲನ, ವಿ.ಜಿ.ರಾಜನ್ ಅವರ ಶಬ್ಧ ವಿನ್ಯಾಸವಿದೆ. ಜನವರಿ 30ರಂದು ಬಿಡುಗಡೆಯಾದ ವಲವಾರ ಪ್ರೇಕ್ಷಕರ ವಲಯದಿಂದ ಮೆಚ್ಚುಗೆ ಪಡೆದಿದೆ.

Yashaswi Devadiga

View all posts by this author