ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kannada Movie: ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ; ಮೂವಿ ಯಾವುದು?

Sangita Madhavan : 'ಯಾರೇ ನೀನು ಚೆಲುವೆ' ಸಿನಿಮಾ ಖ್ಯಾತಿ ನಟಿ ಸಂಗೀತ ಮಾಧವನ್ ಮತ್ತೆ ಸ್ಯಾಂಡಲ್‌ವುಡ್‌ ಕಡೆ ಮುಖ ಮಾಡಿದ್ದಾರೆ. ಹೊಸ ತಂಡವೊಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದೆ. ಲಾಂಗ್ ಗ್ಯಾಪ್ ಬಳಿಕ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರನ್ನ, ವಿಕ್ಟರಿ ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

ಕನ್ನಡ ಸಿನಿಮಾ

'ಯಾರೇ ನೀನು ಚೆಲುವೆ' (Yaare Neenu Chaluve) ಸಿನಿಮಾ ಖ್ಯಾತಿ ನಟಿ ಸಂಗೀತ ಮಾಧವನ್ ಮತ್ತೆ ಸ್ಯಾಂಡಲ್‌ವುಡ್‌ (Sandalwood) ಕಡೆ ಮುಖ ಮಾಡಿದ್ದಾರೆ. ಹೊಸ ತಂಡವೊಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದೆ. ಲಾಂಗ್ ಗ್ಯಾಪ್ ಬಳಿಕ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ (Kiran Vishwanath) ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರನ್ನ, ವಿಕ್ಟರಿ ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ (Direction). ಅವರ ಚೊಚ್ಚಲ ಚಿತ್ರದಲ್ಲಿ ಸಂಗೀತ ಮಾಧವನ್ ಅಭಿನಯಿಸುತ್ತಿದ್ದಾರೆ.

ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್

ಸಂಗೀತ ಭಾಗ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನ ತಾಯಿಯಾಗಿ ಅವರು ಜೀವ ತುಂಬಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ಪರಿಚಯಿಸಿತ್ತು. ಇದೀಗ ಸಂಗೀತ ಅವರು ಸಿನಿಮಾದ ಭಾಗವಾಗಿರುವ ಬಗ್ಗೆ ಮಾಹಿತಿ ನೀಡಿದೆ.



ಈ ಸಿನಿಮಾದ ನಾಯಕ ಯಾರು ಅನ್ನೋದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ದೊಡ್ಡದಾಗಿ ಹೀರೋ ಇಂಟರ್ಡ್ಯೂಸ್ ಮಾಡಲು ಯೋಜನೆ ಕೂಡ ಹಾಕಿಕೊಂಡಿದೆ.

ಇದನ್ನೂ ಓದಿ: Kis Kisko Pyaar Karoon 2 on OTT: ಕಪಿಲ್ ಶರ್ಮಾ ಈ ಕಾಮಿಡಿ ಮೂವಿ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಗೌರಿ ಆರ್ಟ್ಸ್ ಬ್ಯಾನರ್ ನಡಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಮುಂದಿನ ದಿನಗಳಲ್ಲಿ ಒಂದೊಂದೇ ಮಾಹಿತಿಯನ್ನು ಸಿನಿಮಾ ತಂಡ ನೀಡಲಿದೆ.

Yashaswi Devadiga

View all posts by this author