ಕನ್ನಡ (Kannada), ತುಳು ಸಿನಿರಸಿಕರ ಮನಗೆದ್ದ ‘ಅಪ್ಪೆ ಟೀಚರ್’, ‘ಲವ್ ಕಾಕ್ಟೇಲ್’, ‘ಮಾಲ್ಗುಡಿ ಡೇಸ್’ ಚಿತ್ರದ ಯಶಸ್ಸಿನ ನಂತರ, ಇದೀಗ ಮತ್ತೊಂದು ವಿಭಿನ್ನ ಹಾಗೂ ಮನೋರಂಜನೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ ಸ್ವಯಂ ಪ್ರಭಾ (Swayam Prabha) ಎಂಟರ್‌ಟೈನ್‌ಮೆಂಟ್ ಅಂಡ್ ಪ್ರೊಡಕ್ಷನ್ಸ್‘. ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹೊಸ ಕಾಮಿಡಿ ಸಿನಿಮಾ 'ಹೌದ್ದೋ ಹುಲಿಯ' ಇದೇ ಬರುವ ಜನವರಿ 30 ರಂದು ಪ್ರಪ್ರಥಮ ಬಾರಿಗೆ ಜಗತ್ತಿನಾದ್ಯಂತ ಏಕಕಾಲದಲ್ಲಿ ಚಿತ್ರಮಂದಿರ ಮತ್ತು ಟಾಕೀಸ್ ಆ್ಯಪ್ ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ. ಚಿತ್ರಕ್ಕೆ ಟೈಟಲ್ (Title) ಸ್ಪಾನ್ಸರ್ ಆಗಿ ಹೆಸರಾಂತ ಅಮೃತ್ ನೋನಿ ಮತ್ತು ಐಸ್ ಕ್ರೀಮ್ ಪಾರ್ಟರ್ ಆಗಿ ಹ್ಯಾಂಗ್ಯೊ ಐಸ್ ಕ್ರೀಮ್ ಜೊತೆಯಾಗಿದ್ದಾರೆ.
ಕಥಾವಸ್ತು ಏನು?
ಗ್ರಾಮೀಣ ಬದುಕಿನ ಸೊಗಡು, ಹಾಸ್ಯ, ಭಾವನೆ ಮತ್ತು ಸಮಾಜದ ನೈಜ ಮುಖವನ್ನು ಒಳಗೊಂಡ ಕಥಾವಸ್ತುವನ್ನು ಹೊಂದಿರುವ ಚಿತ್ರ. ಸಂಪೂರ್ಣ ಜವಾರಿ ಭಾಷೆಯಲ್ಲಿ ಮೂಡಿ ಬಂದಿದ್ದು ತಂಡ ಯುವ ಮತ್ತು ಅನುಭವಿ ಕಲಾವಿದರನ್ನ ಒಳಗೊಂಡಿದೆ.
ಇದನ್ನೂ ಓದಿ: Ram Gopal Varma : ಎ ಆರ್ ರೆಹಮಾನ್ 'ಕೋಮುವಾದಿ' ಹೇಳಿಕೆ; ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
ಕೆ.ರತ್ನಾಕರ ಕಾಮತ್ ಮತ್ತು ಗಣೇಶ್ ಆರ್ ಕಾಮತ್ ಕೆ ನಿರ್ಮಾಣದಲ್ಲಿ, ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು 'ದಸ್ಕತ್' ಸಿನಿಮಾ ನಿರ್ದೇಶಿಸಿದ ಯುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.
ಸಂತೋಷ್ ಗುಂಪಲಾಜೆ ಮತ್ತು ದೀಕ್ಷಿತ್ ಧರ್ಮಸ್ಥಳ ಛಾಯಗ್ರಹಣವಿದ್ದು, ಚಿತ್ರಕ್ಕೆ ಕಿಶೋರ್ ಶೆಟ್ಟಿ, ಸಮರ್ಥನ್ ರಾವ್ ಸಂಗೀತವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಡಿ ಗೌಡ ಮತ್ತು ಕ್ರಿಯೇಟಿವ್ ಹೆಡ್ ಆಗಿ ಸ್ಮಿತೇಶ್ ಎಸ್ ಬಾರ್ಯ ಕೆಲಸ ಮಾಡಿದ್ದು ತಂಡದಲ್ಲಿ ಚಿದಾನಂದ ಪೈ, ನಿಶಿತ್ ಶೆಟ್ಟಿ, ಮನೋಜ್ ಆನಂದ್ ,ನೀರಜ್ ಕುಂಜರ್ಪ ಮತ್ತು ಅನೂಪ್ ಭಟ್ ಸಹಕರಿಸಿದ್ದಾರೆ.
ಯಾರೆಲ್ಲ ಇದ್ದಾರೆ?
ಹಿರಿಯ ಕಲಾವಿದರಾದ ವೈಜಾನಾಥ್ ಬಿರಾದರ್, ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಸೂರಜ್,ಮಲ್ಯ ಬಾಗಲಕೋಟೆ, ಸಂತೋಷ್ ರೋಣ,ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ, ಉಮೇಶ್ ಕಿನ್ನಾಳ್ ದಾನಪ್ಪ, ಸದಾನಂದ ಹೀಗೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು ,ದೃಶ್ಯ ವೈಭವ, ನೈಜ ಸಂಭಾಷಣೆಗಳು ಪ್ರೇಕ್ಷಕರನ್ನು ತಮ್ಮದೇ ಲೋಕಕ್ಕೆ ಕರೆದುಕೊಂಡು ಹೋಗಲಿವೆ. ಕಥೆಯ ಹರಿವು ಎಲ್ಲ ವರ್ಗದ ಪ್ರೇಕ್ಷಕರಿಗೂ ಸಂಪರ್ಕ ಸಾಧಿಸುವಂತೆ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: Mouni Roy: ಮೌನಿ ರಾಯ್‌ಗೆ ವೃದ್ಧರಿಂದ ಕಿರುಕುಳ; ಬೇಸರ ಹೊರಹಾಕಿದ ನಟಿ
ಕುಟುಂಬ ಸಮೇತರಾಗಿ ನೋಡಬಹುದಾದ ಸಂಪೂರ್ಣ ಮನರಂಜನಾ ಚಿತ್ರವಾಗಿದ್ದು ಈಗಾಗಲೇ ಚಿತ್ರದ ಜ್ವಾಲಿ ಸಾಂಗ್ ಲಚ್ಚಿ ಲಚ್ಚಿ ಟಾಕೀಸ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯದಲ್ಲು ವೈರಲ್ ಆಗಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಸಫಲವಾಗಿದೆ.