ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

TG Nandish: ಕನ್ನಡದ ಖ್ಯಾತ ಸಿನಿಮಾ, ಧಾರಾವಾಹಿ ಸಂಭಾಷಣೆಗಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಮೂಲದವರಾದ ಟಿ.ಜಿ. ನಂದೀಶ್ ಅವರು, ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಇವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡ ಸಿನಿಮಾ, ಕಿರುತೆರೆ ಸಂಭಾಷಣೆಗಾರ ಟಿ.ಜಿ.ನಂದೀಶ್‌.

ಶಿವಮೊಗ್ಗ: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಂಭಾಷಣೆ ಬರಹಗಾರರಾಗಿ ತಮ್ಮದೇ ಛಾಪು ಮೂಡಿಸಿದ್ದ ಪ್ರತಿಭಾವಂತ ಲೇಖಕ ಟಿ.ಜಿ. ನಂದೀಶ್ (37) ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದ ಟಿ.ಜಿ. ನಂದೀಶ್‌ (TG Nandish), ಸಾಹಿತ್ಯ ಹಾಗೂ ಸಿನಿಮಾ ಬರವಣಿಗೆಯ ಮೂಲಕ ಗಮನ ಸೆಳೆದಿದ್ದರು.

ಮಂಗಳವಾರ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ತೀರ್ಥಹಳ್ಳಿ ತಾಲೂಕಿನ ಮಾಳೂರು ಮೂಲದ ನಂದೀಶ್ ಅವರು, ಚಿತ್ತಾರ ಸಂಸ್ಥೆಯ ಜತೆಗೆ ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಮಾಳೂರಿನಿಂದಲೇ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಕಥೆಯನ್ನು ನಂದಿಶ್ ಒದಗಿಸುತ್ತಿದ್ದರು. ಹೊಗೆಸೊಪ್ಪು ಗಂಗಾಧರಯ್ಯ ಎಂಬ ಹೆಸರಿನಿಂದ ಮಾಳೂರು ಭಾಗದಲ್ಲಿ ಅವರ ತಂದೆ ಪ್ರಸಿದ್ಧರಾಗಿದ್ದರು. ಅವರು ತಾಯಿ, ಪತ್ನಿ ಸೇರಿ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ.

ಪಂಜಾಬಿ ಗಾಯಕಿ ಇಂದರ್ ಕೌರ್ ಕಾಲುವೆಯಲ್ಲಿ ಶವವಾಗಿ ಪತ್ತೆ; ಮದುವೆ ಪ್ರಪೋಸಲ್‌ ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿದ್ನಾ ಪಾಪಿ?

ಸ್ವಗೃಹ ಮಾಳೂರಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಗುರುವಾರ ಮಧ್ಯಾಹ್ನ 12.30 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.