ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಂಗೀಗ 50 ವರ್ಷ ಅಂದ್ರೆ ಯಾರೂ ನಂಬಲ್ಲ..ʼ; ವಯಸ್ಸಾದ್ರೂ ಯಂಗ್‌ ಆಗಿ ಕಾಣಿಸಲು ಟಿಪ್ಸ್‌ ಕೊಟ್ಟ ನಟಿ ಸಂಗೀತಾ ಅನಿಲ್

ಹಿರಿತೆರ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸಂಗೀತಾ ಅನಿಲ್ ಅವರು ಇದೇ ಮೇ 19ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ವಯಸ್ಸು ಅರ್ಧ ಶತಕ ದಾಟುತ್ತಿದ್ದರೂ ಇಂದಿಗೂ ಯಂಗ್‌ ಆಗಿ ಕಾಣುವ ಸಂಗೀತಾ, ತಾವು ಯಾರ ಮೇಲೂ ಡಿಪೆಂಡ್‌ ಆಗದೇ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು ತಮ್ಮ ಆರೋಗ್ಯದ ಗುಟ್ಟು ಎಂದಿದ್ದಾರೆ.

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಗೀತಾ ಅನಿಲ್‌, ಆನಂತರ ನಾಯಕಿಯಾಗಿ ಮಿಂಚಿದವರು. ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಫೇಮಸ್‌ ಆಗಿರುವ ಸಂಗೀತಾ, ಸಿನಿಮಾಗಳಲ್ಲಿ ಬೇಡಿಕೆಯ ಪೋಷಕ ನಟಿ. ಸದ್ಯ ಅವರಿಗೆ ಇದೇ ಮೇ 19ಕ್ಕೆ 50 ವರ್ಷ ತುಂಬಲಿದೆ. ಆದರೆ ಅವರನ್ನು ನೋಡಿದವರು, ʻಇವರಿಗೆ 50 ವರ್ಷನಾʼ ಎಂದು ಅಚ್ಚರಿಪಡ್ತಾರೆ. ಅಷ್ಟೊಂದು ಯಂಗ್‌ ಆಗಿ ಕಾಣಿಸುತ್ತಾರೆ ಸಂಗೀತಾ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ನಂಗೆ ವಯಸ್ಸಾಗಿದೆ ಎಂದರೆ ಯಾರೂ ನಂಬಲ್ಲ

ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ ನಟಿ ಸಂಗೀತಾ, "ಮೇ 19ರಂದು ನನ್ನ 50 ವರ್ಷ ತುಂಬಲಿದೆ. ಇದರಿಂದ ನನಗೆ ಡ್ರಾಬ್ಯಾಕ್‌ ಏನಪ್ಪ ಅಂದ್ರೆ, ನನಗೆ ಚೂರು ಕಾಲು ನೋವು ಅಂದ್ರೆ ಯಾರೂ ನಂಬೋದಿಲ್ಲ. ʻಇಷ್ಟು ಯಂಗ್‌ ಆಗಿದ್ದಾರೆ, ಇವಾಗ್ಯಾಕೆ ಇವರಿಗೆ ಕಾಲು ನೋವುʼ ಅಂತಾರೆ. ನಾನು ಈ ಬಾರಿ 50 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೇನೆ. ದೇವರು ಉತ್ತಮವಾದ ಆರೋಗ್ಯ ನೀಡಿದ್ದಾನೆ" ಎನ್ನುತ್ತಾರೆ.

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

ನನಗೂ ವಯಸ್ಸಾಗಿದೆ, ನನಗೂ ಸುಸ್ತಾಗುತ್ತದೆ

"ಉತ್ತಮವಾದ ಆರೋಗ್ಯ ಇಲ್ಲವಾದರೇ, ಏನೂ ಮಾಡೋಕೆ ಸಾಧ್ಯವಿಲ್ಲ. ನನಗೆ ಯಾವಾಗಲೂ ಯಾರ ಮೇಲೂ ಡಿಪೆಂಡ್‌ ಆಗಲು ಇಷ್ಟವಿಲ್ಲ. ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುವೆ. ಆರೋಗ್ಯವಾಗಿರಬೇಕು ಎಂಬುದು ನನ್ನ ಉದ್ದೇಶ. ನಮ್ಮ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳುವುದರಿಂದ ತುಂಬಾ ಫಿಟ್‌ ಆಗಿದ್ದೇನೆ. ಮನೆ ಊಟಕ್ಕೆ ಜಾಸ್ತಿ ಆದ್ಯತೆ ನೀಡುತ್ತೇನೆ. ಇದೆಲ್ಲದರಿಂದ ನಾನು ಆರೋಗ್ಯವಾಗಿದ್ದೇನೆ. ಶೂಟಿಂಗ್‌ ಇರುವಾಗ ಬೇಗ ಹೋಗಬೇಕು, ಸುಸ್ತಾಗಿದೆ ಎಂದರೆ, ನಿಮಗೇನು ಭಾರಿ ವಯಸ್ಸಾಗಿರೋದು ಅಂತಾರೆ. ಎಲ್ಲರಲ್ಲೂ ವಿನಂತಿ ಏನಂದರೆ, ನನಗೂ ವಯಸ್ಸಾಗಿದೆ, ನನಗೂ ಸುಸ್ತಾಗುತ್ತದೆ" ಎಂದು ತಮಾಷೆ ಮಾಡುತ್ತಾರೆ ಸಂಗೀತಾ ಅನಿಲ್.‌

ನಾನು ತುಂಬಾ ಫುಡ್ಡಿ, ಸಿಕ್ಕಿದ್ದೆಲ್ಲಾ ತಿಂತಿನಿ

"ನಾನು ಯಾವಾಗಲೂ ಒಳ್ಳೆಯದನ್ನೇ ಯೋಚನೆ ಮಾಡುತ್ತೇನೆ. ಒಬ್ಬ ವ್ಯಕ್ತಿಯಲ್ಲಿ ನಾನು ಬರೀ ಒಳ್ಳೆಯದನ್ನೇ ನೋಡುತ್ತೇನೆ. ಪಾಸಿಟಿವ್‌ ವಿಚಾರಗಳನ್ನೇ ಗಮನಿಸುತ್ತೇನೆ. ನಾನು ತುಂಬಾ ಊಟ ಮಾಡುತ್ತೇನೆ. ಅದು ತಿನ್ನಲ್ಲ, ಇದು ತಿನ್ನಲ್ಲ ಅಂತ ನಾನು ಹೇಳೋದೇ ಇಲ್ಲ. ಜಂಕ್‌ ಫುಡ್‌ನೂ ಜಾಸ್ತಿ ತಿನ್ನುತ್ತೇನೆ. ಜಾಸ್ತಿ ವಾಕ್‌ ಮಾಡುತ್ತೇನೆ. ನಾವು ಒಳ್ಳೆಯದನ್ನೇ ಯೋಚನೆ ಮಾಡಿದಾಗ, ನಮಗೆ ಒಳ್ಳೆಯದೇ ವಾಪಸ್‌ ಬರುತ್ತದೆ" ಎಂದು ಸಂಗೀತಾ ಹೇಳುತ್ತಾರೆ.

ಸಂಗೀತಾ ಅನಿಲ್‌ ಸಂದರ್ಶನ



ಲವ್‌ ಸೀಸನ್ಸ್‌ನಲ್ಲಿ ಸಂಗೀತಾ ನಟನೆ

ಸದ್ಯ ʻಲವ್‌ ಸೀಸನ್ಸ್‌ʼ ಸಿನಿಮಾದಲ್ಲಿ ಸಂಗೀತಾ ನಟಿಸಿದ್ದು, ಈ ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ. ಈಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಲವ್‌ ಸೀಸನ್ಸ್‌ ಚಿತ್ರಕ್ಕೆ ಹೀರೋ ಆಗಿ ನಟಿಸಿದರೆ, ನಾಯಕಿಯರಾಗಿ ದಿಯಾ ಕೀರ್ತಿ ಮತ್ತು ಚಂದನಾ ಗೌಡ ಬಣ್ಣ ಹಚ್ಚಿದ್ದಾರೆ.