ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannappa Movie: 'ಕಣ್ಣಪ್ಪ' ಸಿನಿಮಾ ಬಗ್ಗೆ ಅನಗತ್ಯ ವಿಮರ್ಶೆ ಮಾಡಿದರೆ ಕಾನೂನು ಕ್ರಮ; ಚಿತ್ರತಂಡದಿಂದ ಖಡಕ್ ಎಚ್ಚರಿಕೆ

ʼಕಣ್ಣಪ್ಪʼ ತೆಲುಗು ಸಿನಿಮಾ ತಂಡವು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಇದೀಗ ಬಿಡುಗಡೆಗೆ ಮುನ್ನವೇ ಸಿನಿಮಾ ಬಗ್ಗೆ ತಪ್ಪು ಪ್ರಚಾರ ನೀಡದಂತೆ ವಿಮರ್ಶಕರಿಗೆ, ಟ್ರೋಲರ್ಸ್‌ಗೆ ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ.

Kannappa Movie

ಹೈದರಾಬಾದ್‌: ಮಂಚು ವಿಷ್ಣು ಅಭಿನಯದ ಬಹುಕೋಟಿ ರೂ. ಬಜೆಟ್‌ನ ಟಾಲಿವುಡ್‌ ಚಿತ್ರ ʼಕಣ್ಣಪ್ಪʼ (Kannappa Movie) ವಿಭಿನ್ನವಾದ ಕಥಾ ಹಂದರ ಮೂಲಕವೇ ಗಮನ ಸೆಳೆಯುತ್ತಿದೆ. ಈ ಸಿನಿಮಾಕ್ಕೆ ಮೋಹನ್ ಬಾಬು ಬಂಡವಾಳ ಹೂಡಿದ್ದು ಮಂಚು ವಿಷ್ಣು, ಶರತ್ ಕುಮಾರ್, ಮೋಹನ್ ​ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್, ಕಾಜಲ್ ಅಗರ್ವಾಲ್‌, ಪ್ರೀತಿ ಮುಕುಂದನ್ ಮತ್ತಿತರರು ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಇದೀಗ ಬಿಡುಗಡೆಗೂ ಮುನ್ನವೇ ಸಿನಿಮಾ ಬಗ್ಗೆ ತಪ್ಪು ಪ್ರಚಾರ ಮಾಡದಂತೆ ವಿಮರ್ಶಕರಿಗೆ, ಟ್ರೋಲರ್ಸ್‌ಗಳಿಗೆ ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ.

ʼಕಣ್ಣಪ್ಪʼ ಸಿನಿಮಾ ತಂಡವು ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. 'ʼಕಣ್ಣಪ್ಪ' ಚಿತ್ರವು ಜೂನ್ 27ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಲೈಸೆನ್ಸ್ ತೆಗೆದುಕೊಂಡಿದ್ದೇವೆ. ಸಿನಿಮಾದ ಕತೆಗೆ ಹಕ್ಕು ಸ್ವಾಮ್ಯಗಳನ್ನು ಪಡೆದಿದ್ದೇವೆ. ಚಿತ್ರ ಅಥವಾ ಚಿತ್ರತಂಡದ ವಿರುದ್ಧ ಅನಗತ್ಯ ಹೇಳಿಕೆ, ವಿಮರ್ಶೆ ನೀಡುವವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೇರಿ ಕಾನೂನು ಕ್ರಮ ಕೈಗೊಳ್ಳಲಾಗುದು'' ಎಂದು ಹೇಳಿದೆ.



ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಮಗೂ ಗೌರವವಿದೆ. ಸಿನಿಮಾ ನೋಡುವ ಪ್ರೇಕ್ಷಕರ ಬಳಗವು ಅನಗತ್ಯವಾಗಿ ನೆಗೆಟಿವ್ ವಿಮರ್ಶೆ ನೀಡಬೇಡಿ. ಪೂರ್ತಿ ಸಿನಿಮಾ ನೋಡಿದ್ದ ಬಳಿಕ ಆ ಸಿನಿಮಾ ಹಿಂದಿನ ಉದ್ದೇಶ ಅರ್ಥ ಮಾಡಿಕೊಂಡು ಗೌರವಯುತವಾಗಿ ಅಭಿಪ್ರಾಯ ವ್ಯಕ್ತಪಡಿಸಿ. ಬೇಕೆಂದೇ ನೆಗೆಟಿವ್ ರಿವ್ಯೂವ್ ನೀಡುವುದನ್ನು ಸಿನಿಮಾ ತಂಡ ಸಹಿಸುವುದಿಲ್ಲ. ಪೂರ್ತಿ ಸಿನಿಮಾವನ್ನು ಸೋಶಿಯಲ್ ಮಿಡಿಯಾದಲ್ಲಿ ಪ್ರದರ್ಶಿಸುವುದರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದೆ.

ಇದನ್ನು ಓದಿ:Madness Movie: ʼಪುಷ್ಪಕ ವಿಮಾನʼ ನಿರ್ದೇಶಕರ ಹೊಸ ಸಿನಿಮಾ ಅನೌನ್ಸ್

ನಟ ವಿಷ್ಣು ಮಂಚು ಶಿವನ ಪರಮ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೀತಿ ಮುಕುಂದನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಶಿವನ ಪಾತ್ರವನ್ನು ನಿರ್ವಹಿಸಿದರೆ, ಹಿರಿಯ ನಟ ಮೋಹನ್ ಲಾಲ್ ಕಿರಾತಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಭಾಸ್ ರುದ್ರ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ.

ʼಮಹಾ ಭಾರತಂʼ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ಮುಖೇಶ್ ಕುಮಾರ್ ಸಿಂಗ್ ʼಕಣ್ಣಪ್ಪʼ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸ್ಟೀಫನ್ ದೇವಸ್ಸಿ ಸಂಗೀತ ಸಂಯೋಜಿಸಿದ್ದು, ಶೆಲ್ಡನ್ ಚಾವು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.