ರಿಷಬ್ ಶೆಟ್ಟಿ (Rishab Shetty) ಅಭಿನಯದ ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1 ರ ಟ್ರೈಲರ್ (Kantara: Chapter 1) ನಿನ್ನೆ ಸೆ. 22 ರಂದು ರಿಲೀಸ್ ಆಗಿದೆ. ಅಕ್ಟೋಬರ್ 2ರಂದು ಬಿಡುಗಡೆಗೊಳ್ಳಲಿರುವ ಸಿನಿಮಾಗೆ ನಿರೀಕ್ಷೆಯಂತು ಹೆಚ್ಚಿದೆ. ಕಾಂತಾರ ಚಿತ್ರದ ಪ್ರೀಕ್ವೆಲ್ ನ 2 ನಿಮಿಷ 56 ಸೆಕೆಂಡ್ ಗಳ ಟ್ರೈಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಅಜನೀಶ್ ಹಿನ್ನೆಲೆ ಸಂಗೀತ ನೀಡಿದ್ದು, ರುಕ್ಮೀಣಿ ವಸಂತ್ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಾಂತಾರ ಚಾಪ್ಟರ್ 1 ಅದ್ದೂರಿಯಾಗಿ ನಿರ್ಮಾಣವಾಗಿದೆ. ಟ್ರೈಲರ್ ರಿಲೀಸ್ ಆದ ಬಳಿಕ ಪ್ರೆಸ್ಮೀಟ್ ನಡೆಸಲಾಗಿದೆ.
ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ವಿಜಯ್ ಕಿರಗಂದೂರು ಒಟ್ಟಾರೆ ನಮ್ಮ ದೇಶದಲ್ಲಿಯೇ ಸುಮಾರು 7 ಸಾವಿರ ಪರದೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ವಿದೇಶದಲ್ಲಿ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ ಅವರು, ಒಟ್ಟು 30 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ಮುಖ್ಯವಾಗಿ ಸೌತ್ ಅಮೆರಿಕ, ಮೆಕ್ಸಿಕೋ, ಸೇರಿದಂತೆ ಕೆಲ ದೇಶಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸ್ಪಾನಿಶ್ ಹಾಗೂ ಕೊಲಂಬಿಯಾ ಭಾಷೆಗಳಲ್ಲಿ ಸಿನಿಮಾ ಡಬ್ಬ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿತ್ರದ ಕುರಿತು ರಿಷಬ್ ಶೆಟ್ಟಿ ಮಾತನಾಡಿದ್ದು, ಬಾಲ್ಯದಿಂದಲೇ ನಾನು ಅದೇ ಪರಿಸರದಲ್ಲಿ ಬೆಳೆದಿದ್ದರಿಂದ ಹೊಸ ಸಂಸ್ಕೃತಿ ಎಂದೆನಿಸಿಲ್ಲ. ನಮ್ಮ ಜನಪದ, ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲೇ ಹುಟ್ಟಿದ್ದೇ ಈ ಕಾಂತಾರ ಎಂದು ಹೇಳಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ) ಮಾತನಾಡಿ, ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕಾಗಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್‌ಗೆ (Hombale Films) ಧನ್ಯವಾದ ಅರ್ಪಿಸಿದರು.
ಈ ಸುದ್ದಿಯನ್ನೂ ಓದಿ: Kantara: Chapter 1 trailer: ಕೊನೆಗೂ ರಿಲೀಸ್ ಆಯ್ತು ಕಾಂತಾರ-1 ಟ್ರೈಲರ್....ರಿಷಬ್ ಶೆಟ್ಟಿ ಪಾತ್ರದ ಹೆಸರೇನು ಗೊತ್ತಾ?
ʼʼಕಾಂತಾರ ಚಾಪ್ಟರ್ 1ʼ ನನ್ನ ಮನಸ್ಸಿಗೆ ತುಂಬ ಹತ್ತಿರವಾಗಿರುವ ಸಿನಿಮಾ. ಈ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಅವರ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನನ್ನ ವೃತ್ತಿ ಜೀವನದ ಮೊದಲ ಹೆಜ್ಜೆಯಲ್ಲಿ ಬೆಂಬಲ ನೀಡಿದ್ದಕ್ಕೆ ಧನ್ಯವಾದʼʼ ಎಂದು ರುಕ್ಮಿಣಿ ತಿಳಿಸಿದರು.