Kantara Chapter 1: 'ಕಾಂತಾರ: ಚಾಪ್ಟರ್ 1' ಚಿತ್ರದ ದೀಪಾವಳಿ ಟ್ರೈಲರ್ ರಿಲೀಸ್
Rishab Shetty: ತಿಂಗಳ ಆರಂಭದಲ್ಲಿ ತೆರೆಕಂಡ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿರುವ 'ಕಾಂತಾರ ಚಾಪ್ಟರ್ 1' ಈ ವರ್ಷದ ಅತಿದೊಡ್ಡ ಯಶಸ್ಸು ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರತಂಡವು 'ದೀಪಾವಳಿ ಟ್ರೈಲರ್' ಬಿಡುಗಡೆ ಮಾಡಿದೆ.

-

ಬೆಂಗಳೂರು: ರಿಷಬ್ ಶೆಟ್ಟಿ ಅವರ (Rishabh Shetty) 'ಕಾಂತಾರ: ಚಾಪ್ಟರ್ 1' (Kantara: Chapter 1) ಈ ವರ್ಷದ ಅತಿದೊಡ್ಡ ಯಶಸ್ಸು ಕಂಡ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಚಿತ್ರವು ನಿರಂತರವಾಗಿ ಬಾಕ್ಸ್ ಆಫೀಸ್ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದು, ಈಗ ವಿಶ್ವಾದ್ಯಂತ 700 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್‌ನ 'ಕಾಂತಾರ: ಚಾಪ್ಟರ್ 1' ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತ, ತನ್ನ ಯಶಸ್ಸಿನ ಪಯಣವನ್ನು ಮುಂದುವರಿಸಿದೆ. ದೇಶಾದ್ಯಂತ ಪ್ರೇಕ್ಷಕರಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿರುವ ಈ ಚಿತ್ರದ ಬೃಹತ್ ಯಶಸ್ಸನ್ನು ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಆಚರಿಸಲು, ಚಿತ್ರತಂಡವು 'ದೀಪಾವಳಿ ಟ್ರೈಲರ್' ಬಿಡುಗಡೆ ಮಾಡಿದೆ. ಈ ಟ್ರೈಲರ್ 'ಕಾಂತಾರ'ದ ಲೋಕದ ಮಹತ್ವದ ಝಲಕ್‌ಗಳನ್ನು ತೋರಿಸುತ್ತದೆ. ಇದು ಹಬ್ಬಕ್ಕೆ ಚಿತ್ರತಂಡ ಕೊಟ್ಟ ವಿಶೇಷ ಕೊಡುಗೆ.
'ಕಾಂತಾರ: ಚಾಪ್ಟರ್ 1' ಚಿತ್ರದ ದೀಪಾವಳಿ ಟ್ರೈಲರ್:
'ಕಾಂತಾರ: ಚಾಪ್ಟರ್ 1' ದೀಪಾವಳಿ ಟ್ರೈಲರ್ ನಮ್ಮನ್ನು ಆ ಚಿತ್ರದ ದೈವಿಕ ಮತ್ತು ರೋಮಾಂಚಕ ಜಗತ್ತಿಗೆ ಕರೆದೊಯ್ಯುತ್ತದೆ. ಸಿನಿಮಾದಲ್ಲಿರುವ ಮೈ ಜುಮ್ಮೆನಿಸುವ ಕ್ಷಣಗಳನ್ನು ಈ ಟ್ರೈಲರ್ ನಾವರಣಗೊಳಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.
'ಕಾಂತಾರ: ಚಾಪ್ಟರ್ 1' ಹೊಂಬಾಳೆ ಫಿಲ್ಮ್ಸ್‌ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಾಂಗ್ಲಾ ಅವರಂತಹ ಸೃಜನಾತ್ಮಕ ತಂಡವು ಚಿತ್ರದ ಶಕ್ತಿಯುತ ದೃಶ್ಯ ಮತ್ತು ಭಾವನಾತ್ಮಕ ನಿರೂಪಣೆಯನ್ನು ರೂಪಿಸಿದೆ.
ಈ ಸುದ್ದಿಯನ್ನೂ ಓದಿ | Kantara: Chapter 1: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ!
ಅಕ್ಟೋಬರ್ 2ರಂದು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾದ ಈ ಚಿತ್ರವು ತನ್ನ ಸಾಂಸ್ಕೃತಿಕ ಮೂಲವನ್ನು ಗಟ್ಟಿಯಾಗಿ ಉಳಿಸಿಕೊಂಡು, ಭಾಷೆ ಮತ್ತು ಪ್ರದೇಶಗಳನ್ನು ಮೀರಿ ಪ್ರೇಕ್ಷಕರನ್ನು ತಲುಪುತ್ತಿದೆ. 'ಕಾಂತಾರ: ಚಾಪ್ಟರ್ 1' ಮೂಲಕ, ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದ ಎಲ್ಲೆಗಳನ್ನು ವಿಸ್ತರಿಸಲು ಮುಂದುವರಿದಿದ್ದು, ಜಾನಪದ, ನಂಬಿಕೆ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಅನುಭವ ನೀಡಿದೆ.