ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ʼಕಾಂತಾರʼಕ್ಕಿಂತ ಹಿರಿದಾಗಿರಲಿದೆ ಚಾಪ್ಟರ್‌ 1; ರನ್‌ ಟೈಮ್‌ ರಿವೀಲ್‌: ಪ್ರೀಮಿಯರ್‌ ಶೋ ಡೇಟ್‌ ಫಿಕ್ಸ್‌?

Rishab Shetty: ಸದ್ಯ ಜಾಗತಿಕ ಸಿನಿರಸಿಕರು ಕಾದು ಕುಳಿತಿರುವ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್‌ 1 ಅಕ್ಟೋಬರ್‌ 2ರಂದು ತೆರೆಗೆ ಬರಲಿದೆ. ನವರಾತ್ರಿ, ಗಾಂಧಿಯ ಜಯಂತಿಯ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಅಕ್ಟೋಬರ್‌ 2ರಂದು ರಿಲೀಸ್‌ ಆಗಲಿದ್ದು, ಪೇಯ್ಡ್‌ ಪ್ರೀಮಿಯರ್‌ ಶೋ ಬಗ್ಗೆ ಚರ್ಚೆ ಆರಂಭವಾಗಿದೆ.

ಬೆಂಗಳೂರು: 2022ರಲ್ಲಿ ತೆರೆಕಂಡ ʼಕಾಂತಾರʼ (Kantara) ಚಿತ್ರದ ಮೂಲಕ ಜಾಗತಿಕ ಸಿನಿಪ್ರಿಯರು ಸ್ಯಾಂಡಲ್‌ವುಡ್‌ನತ್ತ ತಿರುಗ ನೋಡುವಂತೆ ಮಾಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಇದೀಗ 3 ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡ ಸಿನಿರಂಗದಲ್ಲೇ ಹೊಸದೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಮೂಲಕ ಮತ್ತಷ್ಟು ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ ಬರಲಯ ಸಜ್ಜಾಗಿದ್ದಾರೆ. ಅಕ್ಟೋಬರ್‌ 2ರಂದು ʼಕಾಂತಾರ ಚಾಪ್ಟರ್‌ 1ʼ (Kantara Chapter 1) ರಿಲೀಸ್‌ ಆಗಲಿದ್ದು, ಈಗಾಗಲೇ ಕೂತೂಹಲ ಕೆರಳಿಸಿದೆ. ʼಕಾಂತಾರʼದಲ್ಲಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ತೆರೆಮೇಲೆ ತಂದಿದ್ದ ರಿಷಬ್‌ ಶೆಟ್ಟಿ ಈ ಬಾರಿ ಕರಾವಳಿಯ ಸಂಸ್ಕೃತಿ, ಜಾನಪದ ನಂಬಿಕೆಯನ್ನು ಪ್ರೇಕ್ಷಕರ ಮುಂದಿಡಲಿದ್ದಾರೆ. ಇದೇ ಕಾರಣಕ್ಕೆ ಸೆಟ್ಟೇರಿದಾಗಿನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ ಸುಮಾರು 30 ದೇಶಗಳಲ್ಲಿ 7 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films) ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸಿನಿಮಾದ ರನ್‌ ಟೈಮ್‌ ರಿವೀಲ್‌ ಆಗಿದೆ. 'ಕಾಂತಾರ'ಕ್ಕಿಂತಲೂ ಇದರ ಅವಧಿ ತುಸು ದೀರ್ಘವಾಗಿರಲಿದೆ.

ಅಮೆರಿಕದ ಪೇಯ್ಡ್‌ ಪ್ರೀಮಿಯರ್‌ ಶೋದ ಅಡ್ವಾನ್ಸ್‌ ಬುಕ್ಕಿಂಗ್‌ ಆರಂಭವಾಗಿದೆ ಎನ್ನಲಾಗಿದೆ. ಅಕ್ಟೋಬರ್‌ 1ರ ಬೆಳಗ್ಗೆ 10 ಗಂಟೆಗೆ ಪ್ರೀಮಿಯರ್‌ ಶೋ ನಡೆಯಲಿದೆ. ಹೀಗಾಗಿ ಚಿತ್ರದ ರನ್‌ ಟೈಮ್‌ ವಿವರ ಹೊರಬಿದ್ದಿದೆ. ವಿಶೇಷ ಎಂದರೆ 'ಕಾಂತಾರ'ಕ್ಕಿಂತಲೂ ಇದರ ಅವಧಿ ಹೆಚ್ಚಾಗಿರಲಿದೆ.



ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಯುದ್ಧದ ದೃಶ್ಯಕ್ಕಾಗಿ 500 ಫೈಟರ್‌ಗಳ ನೇಮಕ

'ಕಾಂತಾರ ಚಾಪ್ಟರ್‌ 1' ಚಿತ್ರದ ಅವಧಿ ಎಷ್ಟು?

'ಕಾಂತಾರ' ಚಿತ್ರದ ಅವಧಿ 2 ಗಂಟೆ 28 ನಿಮಿಷ ಇದ್ದರೆ, ಚಾಪ್ಟರ್‌ 1 175 ನಿಮಿಷ ಅಂದರೆ 2 ಗಂಟೆ 55 ನಿಮಿಷ ಇರಲಿದೆ ಎಂದು ವರದಿಯೊಂದು ತಿಳಿಸಿದೆ. ಇನ್ನೊಂದು ಮೂಲಗಳ ಪ್ರಕಾರ 2 ಗಂಟೆ 45 ನಿಮಷ ರನ್‌ ಟೈಮ್‌ ಇದು ಹೊಂದಿದೆ. ಒಟ್ಟಿನಲ್ಲಿ ಸುಮಾರು 3 ಗಂಟೆ ಇರಲಿದೆ. ಸಿನಿಮಾ 3ನೇ ಶತಮಾನದ ಕಥೆಯನ್ನು ಒಳಗೊಂಡಿದೆ. ಕದಂಬ ರಾಜರ ಕಾಲದಲ್ಲಿ ಮುಖ್ಯವಾಗಿ ಬನವಾಸಿ ಕಾಡಿನಲ್ಲಿ ನಡೆಯುವ ಮುಖ್ಯ ಘಟನೆಯ ಸುತ್ತ ಸಾಗಲಿದೆ. ರಿಷಬ್‌ ಶೆಟ್ಟಿ ನಾಗಸಾಧುವಾಗಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದಾರೆ. ಡ್ಯೂಪ್‌ ಬಳಸದೆ ಸ್ವತಃ ಅವರೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ.

ಪಂಜುರ್ಲಿ ದೈವದ ಹಿನ್ನಲೆಯ ಕಥೆ

ʼಕಾಂತಾರʼದಲ್ಲಿ ತುಳುನಾಡಿನ ಪಂಜುರ್ಲಿ ದೈವದ ಸುತ್ತ ನಡೆಯುವ ಘಟನೆಯನ್ನು ರೋಚಕವಾಗಿ ಕಟ್ಟಿಕೊಟ್ಟ ರಿಷಬ್‌ ಈ ಭಾಗದಲ್ಲಿ ಪಂಜುರ್ಲಿ ದೈವದ ಹಿನ್ನೆಲೆಯನ್ನು ವಿವರಿಸಲಿದ್ದಾರೆ. ಅಂದರೆ ಪಂಜುರ್ಲಿ ದೈವದ ಹುಟ್ಟು ಹೇಗಾಯಿತ್ತು ಎನ್ನುವ ಜಾನಪದ ನಂಬಿಕೆಯನ್ನು ಕಣ್ಣಿಗೆ ಕಟ್ಟುವಂತೆ ತೆರೆಮೇಲೆ ತೆರೆಲಿದ್ದಾರೆ ಎನ್ನಲಾಗಿದ.

ಬಜೆಟ್‌ನಷ್ಟು ಹಣ ಈಗಲೇ ರಿಟರ್ನ್‌?

ಮೂಲಗಲ ಪ್ರಕಾರ ʼಕಾಂತಾರ ಚಾಪ್ಟರ್‌ 1ʼ ಚಿತ್ರವನ್ನು ಬರೋಬ್ಬರಿ 125 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಇದೀಗ ಅಷ್ಟೂ ಹಣ ಬಿಡುಗಡೆ ಮುನ್ನವೇ ನಿರ್ಮಾಪಕರ ಕೈ ಸೇರಿದೆ. ಒಟಿಟಿ ಹಕ್ಕನ್ನು ಅಮೆಜಾನ್‌ ಪ್ರೈಮ್‌ ವಿಡಿಯೊ 125 ಕೋಟಿ ರೂ. ನೀಡಿ ಖರೀದಿಸಿದೆ ಎಂದು ವರದಿಯೊಂದು ತಿಳಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.

ಭಾರತದಲ್ಲಿ ಪೇಯ್ಡ್‌ ಪ್ರೀಮಿಯರ್‌ ಯಾವಾಗ?

ʼಕಾಂತಾರ ಚಾಪ್ಟರ್‌ 1ʼ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಪ್ರೇಕ್ಷಕರ ಲೆಕ್ಕಾಚಾರ ಆರಂಭವಾಗಿದೆ. ಜತೆಗೆ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದು, ಪೇಯ್ಡ್‌ ಪ್ರೀಮಿಯರ್‌ ಶೋ ಬಗ್ಗೆಯೂ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅಕ್ಟೋಬರ್‌ 1ರ ರಾತ್ರಿ 7:30ಕ್ಕೆ ಪ್ರೀಮಿಯರ್‌ ಶೋ ಆಯೋಜಿಸಲಾಗುತ್ತಿದೆ ಎನ್ನಲಾಗಿದೆ. ಅದಾಗ್ಯೂ ಈ ಬಗ್ಗೆ ಚಿತ್ರತಂಡ ಇನ್ನೂ ಸ್ಪಷ್ಟನೆ ನೀಡಿಲ್ಲ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದು, ಬಾಲಿವುಡ್‌ ನಟ ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ 20ರಂದು ಟ್ರೈಲರ್‌ ರಿಲೀಸ್‌ ಆಗಲಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ.