ನವದೆಹಲಿ: ಬಾಲಿವುಡ್ ಸಿನಿಮಾರಂಗದಲ್ಲಿ ಅನೇಕ ಸೆಲೆಬ್ರಿಟಿಗಳು ಒಂದೇ ಕುಟುಂಬದಂತೆ ಇರುತ್ತಾರೆ. ಅಂತೆಯೇ ಗಣೇಶ ಚತುರ್ಥಿ, ಹೋಳಿ ಸಂಭ್ರಮ, ದೀಪಾವಳಿ ಹಬ್ಬವನ್ನು ಕೂಡ ಸೆಲೆ ಬ್ರಿಟಿಗಳು ಒಟ್ಟಿಗೆ ಸೆಲಬ್ರೇಟ್ ಮಾಡುವ ಸಂಪ್ರದಾಯದಾಯ ಬಹಳ ಹಿಂದಿನಿಂದಲೂ ಇದೆ. ಬಾಲಿವುಡ್ ನಟ ಶಾರುಖ್ ಖಾನ್, ರಣಬೀರ್ ಕಪೂರ್ ಇನ್ನು ಅನೇಕ ಸೆಲೆಬ್ರಿಟಿಗಳು ಹಬ್ಬಕ್ಕಾಗಿಯೇ ಸ್ಪೆಷಲ್ ಒಕೆಷನ್ ಪಾರ್ಟಿ ರೆಡಿ ಮಾಡಿ ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುತ್ತಾರೆ. ಅಂತೆಯೇ ಈ ಬಾರಿ ನೀತು ಕಪೂರ್ (Neetu kapoor) ಅವರ ಮುಂಬೈ ನಿವಾಸದಲ್ಲಿ ಅದ್ಧೂರಿ ಯಾಗಿ ದೀಪಾವಳಿ ಸೆಲೆಬ್ರೇಶನ್ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಬಾಲಿವುಡ್ ನ ಬಹುದೊಡ್ಡ ತಾರಾಗಣವು ಹಾಜರಾಗಿದೆ. ನಟಿ ಆಲಿಯಾ ಭಟ್ (Alia Bhatt),ಕರೀನಾ ಕಪೂರ್ (Kareena Kapoor) ಸೇರಿದಂತೆ ಇನ್ನು ಅನೇಕ ಸ್ಟಾರ್ ಸೆಲೆಬ್ರಿಟಿಗಳ ಫೋಟೊಗಳು ಸೋಶಿಯಲ್ ಮಿಡಿಯಾ ದಲ್ಲಿ ವೈರಲ್ ಆಗಿದೆ.
ಈ ಗ್ರ್ಯಾಂಡ್ ಸೆಲಬ್ರೇಶನ್ ಕಾರ್ಯಕ್ರಮಕ್ಕೆ ಸೈಫ್ ಅಲಿ ಖಾನ್, ಸೋಹಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ರಣಬೀರ್ ಕಪೂರ್, ಆದರ್ ಜೈನ್, ಅರ್ಮಾನ್ ಜೈನ್, ಅನಿಸಾ ಮಲ್ಹೋತ್ರಾ ಮತ್ತು ಅಲೇಖಾ ಅಡ್ವಾಣಿ, ಜೊತೆಗೆ ತೈಮೂರ್ ಮತ್ತು ಜಹಾಂಗೀರ್ ಅಲಿ ಖಾನ್ ಇನ್ನು ಮೊದಲಾದವರು ಜೊತೆಯಾಗಿ ಸೇರಿಕೊಂಡು ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಕಪೂರ್ ಕುಟುಂಬವು ಈ ಬಾರೀ ದೀಪಾವಳಿ ಸಂಭ್ರಮದ ಭಾಗವಾದ ಧನ್ತೇರಸ್ ಹಬ್ಬವನ್ನು ಆಚರಿಸಲು ಮುಂದಾಗಿದೆ. ಅದಕ್ಕಾಗಿ ಕುಟುಂಬ ಸದಸ್ಯರು ಮತ್ತು ಆಪ್ತರನ್ನು ಆಹ್ವಾನಿಸಲಾಗಿದೆ.
ಹಾಡು, ಡ್ಯಾನ್ಸ್, ಔತಣಕೂಟ, ಪಟಾಕಿ, ಗೇಮ್ಸ್ ಹೀಗೆ ನಾನಾ ತರನಾಗಿ ಮನೋರಂಜನೆಯನ್ನು ಕೂಡ ಹಬ್ಬದೊಂದಿಗೆ ಸೆಲೆಬ್ರೇಟ್ ಮಾಡಲಾಗಿದೆ. ನಟಿ ಆಲಿಯಾ ಭಟ್ ಮತ್ತು ಇಬ್ರಾಹಿಂ ಅಲಿ ಖಾನ್ ಅವರು ಈ ಸೆಲಬ್ರೇಶನ್ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ವೈರಲ್ ಆದ ಫೋಟೋದಲ್ಲಿ ನಟಿ ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಹಾಗೂ ನೀತು ಕಪೂರ್ ಅವರು ಸಾಂಪ್ರದಾಯಿಕ ಹಬ್ಬದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ನಟಿ ಆಲಿಯಾ ಭಟ್ ಅವರು ಗೋಲ್ಡ್ ಕಲರ್ ಸೀರೆ ಹಾಗೂ ಅದಕ್ಕೆ ಒಪ್ಪುವಂತಹ ಆಭರಣ , ಮೇಕಪ್ ಹೇರ್ ಸ್ಟೈಲ್ ಮಾಡಿಕೊಂಡಿದ್ದು ತುಂಬಾ ಸ್ಟೈಲಿಶ್ ಆಗಿ ಕಂಡಿದ್ದಾರೆ.
ಇದನ್ನು ಓದಿ:Dilmaar Movie: 'ದಿಲ್ಮಾರ್' ಪ್ರೀ-ರಿಲೀಸ್ ಇವೆಂಟ್ ಗೆ ಶಿವಣ್ಣ ಭಾಗಿ- ಇದೇ 24ರಂದು ಸಿನಿಮಾ ರಿಲೀಸ್!
ನೀತು ಕಪೂರ್ ಗಾಢ ನೀಲಿ ಬಣ್ಣದ ಟ್ರೆಡಿಷನಲ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುನೀಲಿ ಮತ್ತು ಗೋಲ್ಡ್ ಕಲರ್ ಲೆಹೆಂಗಾದಲ್ಲಿ ಕರೀನಾ ಕಪೂರ್ ಅವರು ಕಂಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಕಾಂಬಿನೇಶನ್ ಉಡುಪಿನಲ್ಲಿ ಕರಿಷ್ಮಾ ಕಪೂರ್ ಕೂಡ ತುಂಬಾ ಪ್ರಿಟಿಯಾಗಿ ಕಂಗೊಳಿಸಿದ್ದಾರೆ. ಇವರ ಪೋಟೊಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಲೈಕ್ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಕಪೂರ್ ಕುಟುಂಬವು ಅನೇಕ ವರ್ಷದಿಂದ ದೀಪಾವಳಿ ಆಚರಣೆಯನ್ನು ಮಾಡಿಕೊಂಡು ಬಂದಿದ್ದು ಒಟ್ಟಿಗೆ ಸೇರುವ ಈ ಸಂಪ್ರದಾಯವು ಅನೇಕರಿಗೆ ಪ್ರೇರಣೆ ಎನ್ನಬಹುದು.